
ಮೆಸ್ಕಾಂ ಇಲಾಖೆಯ ಪಂಜ ಶಾಖೆಯ ಜೆ.ಇ ಹರಿಕೃಷ್ಣ ಕೆ ಜಿ ರವರು ಪದೋನ್ನತಿ ಹೊಂದಿ ಸಹಾಯಕ ಇಂಜಿನಿಯರ್, ಎಲ್. ಟಿ. ರೇಟಿಂಗ್ ಉಪ ವಿಭಾಗ, ಪುತ್ತೂರುಗೆ ವರ್ಗಾವಣೆ ಗೊಂಡಿದ್ದಾರೆ. ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಫೆ.2 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರ ವತಿಯಿಂದ ಹರಿಕೃಷ್ಣ ಕೆ ಜಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುತ್ತಿಗೆದಾರ ವಸಂತ ಕುಮಾರ್ ಕೆದಿಲ ಸಭಾಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಉಪವಿಭಾಗದ ಎ.ಇ ಚಿದಾನಂದ,ಕಡಬ ಉಪ ವಿಭಾಗದ ಎ.ಇ ಸತ್ಯನಾರಾಯಣ, ಗುತ್ತಿಗಾರು ಶಾಖೆಯ ಜೆ.ಇ ಲೋಕೇಶ್ ಎಣ್ಣೆಮಜಲು, ಬೆಳ್ಳಾರೆ ಶಾಖೆಯ ಜೆ.ಇ ಪ್ರಸಾದ್, ಮೆಸ್ಕಾಂ ಮೆಕ್ಯಾನಿಕಲ್ ಹರ್ಷ ಕುಮಾರ್, ಗುತ್ತಿಗೆದಾರರಾದ ರಾಮ ಜೋಯಿಸ, ಚೆನ್ನಕೇಶವ, ಧನಂಜಯ ಕಣ್ಕಲ್ , ಅಶೋಕ್ ,ನಿಂತಿಕಲ್ಲು ಐ.ಟಿ.ಐ ಪ್ರಾಂಶುಪಾಲ ಗುರುಪ್ರಸಾದ್ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪವರ್ ಮ್ಯಾನ್ ಮಲ್ಲಣ್ಣ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿಪವರ್ ಮ್ಯಾನ್ ಮಶ್ಯಾಕ್ ಸ್ವಾಗತಿಸಿ, ನಿರೂಪಿಸಿದರು . ಚಂದನ್ ವಂದಿಸಿದರು.