Ad Widget

ಅಯ್ಯನಕಟ್ಟೆ ಜಾತ್ರೋತ್ಸವ; ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮ ನಡಾವಳಿ

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ನಡೆಯುತ್ತಿದ್ದು, ಇಂದು ಶ್ರೀ ಇಷ್ಟದೇವತಾ ಉಳ್ಳಾಕುಲು ದೈವದ ನೇಮ ನಡಾವಳಿ ನಡೆಯಿತು. ಇಂದು ಬೆಳಗ್ಗೆ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು, ಸಪರಿವಾರ ದೈವಗಳು ಹಾಗೂ ತೋಟದಮೂಲೆಯಿಂದ ರುದ್ರಚಾಮುಂಡಿ ದೈವಗಳ ಕಿರುವಾಲು ಹೊರಟು, ಕಳಂಜ ಗ್ರಾಮದ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ಏರುವುದು, ನರ್ತನ ಸೇವೆ, ಬಟ್ಟಲು ಕಾಣಿಕೆ, ಸಿರಿಮುಡಿ ಗಂಧಪ್ರಸಾದ ವಿತರಣೆ, ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂತಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಪದಾಧಿಕಾರಿಗಳು, ವಿಶ್ವಸ್ಥರು, ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗೌರವ ಸಲಹೆಗಾರರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . .

ಇಂದು ಬೆಳಗ್ಗೆ ಗಂಟೆ 11.30ರಿಂದ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ನಡೆದು ಮಧ್ಯಾಹ್ನ 1.00ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00-7.00 ಮೂರುಕಲ್ಲಡ್ಕದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳಾದ ಹೆಗ್ಗಡೆ ಶ್ರೀ ಪರಮೇಶ್ವರಯ್ಯ ಕಾಂಚೋಡು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವಹಿಂದೂ ಪರಿಷತ್, ಮಂಗಳೂರು ವಿಭಾಗದ ಕಾರ್ಯದರ್ಶಿಯಾದ ಸಾಣೂರುಗುತ್ತು ಶ್ರೀ ದೇವಿಪ್ರಸಾದ್ ಶೆಟ್ಟಿ ಮುಖ್ಯ ಭಾಷಣಗೈಯಲಿದ್ದಾರೆ. ಕಾರ್ಯಕ್ರಮದ ಅತಿಥಿ ಅಭ್ಯಾಗತರಾಗಿ ಎಕ್ಸೆಲ್ ವಿದ್ಯಾಸಂಸ್ಥೆಗಳು, ಗುರುವಾಯನಕೆರೆ, ಬೆಳ್ತಂಗಡಿ ಇಲ್ಲಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸುಮಂತ್ ಜೈನ್, ಬೆಳ್ಳಾರೆ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಶ್ರೀ ಎಂ ಪಿ ಉಮೇಶ್, ಶ್ರೀ ಪುರಂದರ ಗೌಡ ಸಪ್ತಗಿರಿ, ಕಳಂಜ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 7-00ರ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಬಯಲಾಟ ನಡೆಯಲಿರುವುದು. ರಾತ್ರಿ ಗಂಟೆ 9-00ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಜ.29ರಂದು ಬೆಳಗ್ಗೆ 7.30ಕ್ಕೆ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡಲಿದೆ. ಬಳಿಕ ಬೆಳಗ್ಗೆ 10.30ಕ್ಕೆ ಕಲ್ಲಮಾಡದ ಬಳಿಕೊಡಮಣಿತ್ತಾಯ, ಧೂಮಾವತಿ ಹಾಗೂ ಶಿರಾಡಿ ದೈವಗಳ ನರ್ತನ ಸೇವೆ, ಬೂಳ್ಯ ವಿತರಣೆ ನಡೆಯಲಿದೆ. ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನಡೆಯಲಿರುವುದು. ಅಪರಾಹ್ನ ಗಂಟೆ 2.30ರಿಂದ ಕಲ್ಲಮಾಡದ ಬಳಿ ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ, ಬೂಳ್ಯ ವಿತರಣೆ ನಡೆಯಲಿದೆ. ಬಳಿಕ ಸಂಜೆ 4.30ರಿಂದ ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ ಮಾರಿ ಹೊರಡಲಿರುವುದು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಭಾಗಿಗಳಾಗಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading