Ad Widget

ಕಡಬ: ನೆಲ್ಯಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಜೀವನ್ ಮಿಷನ್ ಕಾರ್ಯಕ್ರಮ

“ಮಕ್ಕಳು ನಲವತ್ತಮೂರು… ಪ್ರತಿಭೆಗಳು ಹಲವಾರು…” “ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು…” ಎಂಬುದಕ್ಕೆ ತಾಜಾ ಉದಾಹರಣೆಯಾಗಿ ದ.ಕ ಜಿಲ್ಲೆಯ ಗ್ರಾಮೀಣ ಪ್ರದೇಶದ ಶಾಲೆ. ಅಲ್ಲಿ ಒಂದರಿಂದ ಏಳನೇ ತರಗತಿಯವರೆಗೂ ಇರುವುದು ಕೇವಲ 43 ಮಕ್ಕಳು. ಆದರೆ ಇರುವ ಮಕ್ಕಳೆಲ್ಲಾ ಪ್ರತಿಭಾವಂತರೇ. ಕಡಬ ತಾಲೂಕಿನ ನೆಲ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡು ಸ್ಪರ್ಧೆಗಳಲ್ಲಿ ಬಹುತೇಕ ಎಲ್ಲ ಮಕ್ಕಳು ಭಾಗಿಯಾಗಿದ್ದು ವಿಶೇಷ. ಕೇಳಿದ ಪ್ರಶ್ನೆಗಳಿಗೆ ಉತ್ತರ ಮಾತ್ರವಲ್ಲದೇ ವಿವರಣೆ ಕೂಡ ನೀಡುವಂತ ಜಾಗೃತ ಮನಸ್ಸು ಅವರದ್ದು.

. . . . . .

1ನೇ ತರಗತಿ ಮಗುವು ಕೂಡ ಸಮರ್ಪಕ ಸೂಕ್ತ ಉತ್ತರ ನೀಡಬಲ್ಲ. ಸ್ವಚ್ಛತೆ ಕುರಿತು ಮಾತಾಡಬಲ್ಲ ಕ್ಷಮತೆಯನ್ನು ಹೊಂದಿದೆ. ಇದರ ಹಿಂದೆ ಶಿಕ್ಷಕರ ಪಾತ್ರವೂ ಬಹಳಷ್ಟಿದೆ. ಅವರ ಸರಳ ಗುಣವೇ ಮಕ್ಕಳನ್ನು ಈ ಮಟ್ಟಕ್ಕೆ ಜಾಗೃತರನ್ನಾಗಿಸಿದೆ ಎಂದರೆ ತಪ್ಪಾಗದು‌.

ಇಂದು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜೆಜೆಎಮ್ ಐಇಸಿ ಮಹಾಂತೇಶ್ ಹಿರೇಮಠ್ ಕಾರ್ಯಕ್ರಮ ಸಂಯೋಜಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!