ಅಮರಪಡ್ನೂರು ಗ್ರಾಮದ ಶೇಣಿ -ಹೊಸಮಜಲು ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಹಲವಾರು ದಶಕಗಳಿಂದ ಜನ ಒತ್ತಾಯ ಮಾಡುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದು ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯು ಸುಮಾರು 20 ಕ್ಕಿಂತ ಹೆಚ್ಚು ಮನೆಗಳಿಗೆ ಹಾದು ಹೋಗುತ್ತದೆ, ಮಳೆಗಾಲದಲ್ಲಿ ಕೆಸರಿನಲ್ಲಿ ನಡೆದಾಡಲಾಗದ ಪರಿಸ್ಥಿತಿಯು ಉಂಟಾಗಿತ್ತು. ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಹೋಗಲಾಗದೇ ಪರದಾಡುವ ಪರಿಸ್ಥಿತಿ ಉಂಟಾಗಿರುತ್ತದೆ. ಹಾಗೂ ಬೇಸಿಗೆ ಕಾಲದಲ್ಲಿ ಹೊಂಡಗಳಿಂದ ತುಂಬಿರುವ ರಸ್ತೆಯಲ್ಲಿ ಹೋಗುವ ವಾಹನ ಸವಾರರು ಸಂಕಟಪಡುವಂತಾಗಿದೆ.
ಈ ರಸ್ತೆಗೆ ಸುಮಾರು 70 ವರ್ಷಗಳಿಂದ ಸಂಪೂರ್ಣ ಡಾಂಬರೀಕರಣ ಅಥವಾ ಕಾಂಕ್ರೀಟೀಕರಣ ಭಾಗ್ಯ ಒದಗಿ ಬಂದಿಲ್ಲ. ಇದರಿಂದ ಅಲ್ಲಿನ ಜನರು ತೀವ್ರ ಅಕ್ರೋಶ ವ್ಯಕ್ತಪಡಿಸಿರುತ್ತಾರೆ. ಹೀಗಾಗಿ ಈ ಗ್ರಾಮಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಆದಷ್ಟು ಬೇಗ ಪರಿಹಾರ ಒದಗಿಸಿಕೊಡಬೇಕೇಂದು ಅಲ್ಲಿನ ಜನಸಾಮಾನ್ಯರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Thursday
- November 21st, 2024