
ನೆಲ್ಲೂರು ಕೆಮ್ರಾಜೆ ಗ್ರಾಮದ ಬೆಟ್ಟ ಎಂಬಲ್ಲಿ ಜಿನಸು ಅಂಗಡಿ ವ್ಯಾಪಾರ ನಡೆಸುತ್ತಿರುವ ಜಾಲ್ಸೂರು ಗ್ರಾಮದ ಸತೀಶ್ ಅಡ್ಕಾರ್ ರವರು ತನ್ನ ತಂದೆ ಅಡ್ಕಾರ್ ದಿ.ಕೃಷ್ಣಪ್ಪ ಗೌಡ ಅವರ ಪುಣ್ಯಸ್ಮರಣೆ ಪ್ರಯುಕ್ತ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಆಂಬುಲೆನ್ಸ್ ಸೇವಾ ಯೋಜನೆಗೆ ಸಹಾಯಧನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಮತ್ತು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.