- Wednesday
- December 4th, 2024
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ ಬೊಮ್ಮೆಟ್ಟಿ ಹಾಗೂ ನೂತನ ಉಪಾಧ್ಯಕ್ಷರಾಗಿ ಕರುಣಾಕರ ರೈ ಕುಕ್ಕಂದೂರು ಅವಿರೋಧವಾಗಿ ಆಯ್ಕೆಯಾದರು. ಎರಡೂವರೆ ವರ್ಷದ ಅವಧಿಗೆ ಡಾ. ಗೋಪಾಲಕೃಷ್ಣಭಟ್ ಅಧ್ಯಕ್ಷರಾಗಿದ್ದು, ಒಪ್ಪಂದದ ಪ್ರಕಾರ ಅಧ್ಯಕ್ಷತೆಗೆ ರಾಜೀನಾಮೆ ಸಲ್ಲಿಸಿದ್ದರು. ಅಧ್ಯಕ್ಷರಾಗಿ ಪ್ರಸ್ತುತ ಉಪಾಧ್ಯಕ್ಷರಾಗಿದ್ದ ನಾರಾಯಣ ಬೊಮ್ಮೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದರು. ಉಪಾಧ್ಯಕ್ಷರಾಗಿ ನಿರ್ದೇಶಕ ಕರುಣಾಕರ ರೈ...
ಸುಳ್ಯ: "ಅಮರ ಸುಳ್ಯ - ಈ ಮಣ್ಣಿನ ಕ್ರಾಂತಿ" ಎಂಬ ವಿಷಯದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಇತಿಹಾಸ ವಿಭಾಗವು ನವೆಂಬರ್ 30ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ 'ರಿಕಾಲಿಂಗ್ ಅಮರ ಸುಳ್ಯ' ಪುಸ್ತಕದ ಲೇಖಕರಾದ, ಶ್ರೀ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ...
ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವವು ನ.೨೯ರಂದು ಜರುಗಿತು. ಬೆಳಿಗ್ಗೆ ೯ರಿಂದ ಗಣಪತಿ ಹವನ, ನವಕ ಪೂಜೆ, ಪಂಚಾಮೃತ ಅಭಿಷೇಕ, ನವಕ ಕಲಾಶಭಿಷೇಕ ಜರಗಿತು. ಪೂರ್ವಾಹ್ನ ವಿಶೇಷಭಜನೆ, ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ರಾತ್ರಿ ೭ರಿಂದ ದೀಪಾರಾಧನೆ ಮಂಗಳಾರತಿ, ಶ್ರೀ ರಕ್ತೇಶ್ವರಿ ತಂಬಿಲ, ಪ್ರಸಾದ ವಿತರಣೆ ಜರಗಿತು.ಈ ಸಂದರ್ಭದಲ್ಲಿ...