Ad Widget

ದೈವ ನರ್ತನ, ಕೊಳಲುವಾದನ, ಯಕ್ಷಗಾನಕ್ಕೂ ಸೈ – ಈ ಸಕಲ ಕಲಾ ವಲ್ಲಭ ವಿಜಿತ್ ಮೈತಡ್ಕ

ಮುಂದೆ ಗುರಿ, ಹಿಂದೆ ಗುರು ಇದ್ದು ಸಾಧಿಸುವ ಛಲ ಇದ್ದರೆ ಸಾಧಕನಿಗೆ ಸಾಧನೆ ಅಸಾಧ್ಯವಲ್ಲ ಎಂಬ ಮಾತು ಜನಜನಿತ. ಆದರೆ ಹಿಂದೆ ಗುರುವಿಲ್ಲದಿದ್ದರೂ ಸಾಧನೆಯ ಹುಮ್ಮಸ್ಸು, ಗಮ್ಯ ತಲುಪಲು ಬೇಕಾದ ಪ್ರಯತ್ನ, ಶ್ರದ್ಧೆ ಇದ್ದರೆ ಯಾವುದೇ ಕಲೆಯನ್ನು ಸಿದ್ಧಿಸಿಕೊಂಡು ಪ್ರಸಿದ್ಧಿ ಪಡೆಯಬಹುದೆಂದು ತೋರಿಸಿಕೊಟ್ಟವರು ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕದ ವಿಜಿತ್ ಕುಮಾರ್. ದೈವ ನರ್ತನ ವೃತ್ತಿಯ...

ಜಟ್ಟಿಪಳ್ಳದ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಆರೋಹಣ್ ಅಸೋಸಿಯೇಟ್ಸ್ ಶುಭಾರಂಭ

ಸುಳ್ಯದ ಜಟ್ಟಿಪಳ್ಳ ರಸ್ತೆಯ ಕುರುಂಜಿಕಾರ್ಸ್ ಕಾಂಪ್ಲೆಕ್ಸ್ ನಲ್ಲಿ ಸಿವಿಲ್ ಇಂಜಿನಿಯರ್ ಗಳಾದ ಶರತ್ ದೇವ ಮತ್ತು ಸೃಜನ್ ಬಿ.ಎಸ್ ರವರ ಆರೋಹಣ್ ಅಸೋಸಿಯೇಟ್ಸ್ ಕನ್ಸ್ಟ್ರಕ್ಷನ್ ಮತ್ತು ಕನ್ಸಲ್ಟೆನ್ಸಿ ಕಚೇರಿಯುಡಿ.8 ರಂದು ಶುಭಾರಂಭಗೊಂಡಿತು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರು ದೀಪ ಬೆಳಗಿಸಿ ಶುಭ ಸಂಸ್ಥೆಗೆ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಸಂದೇಶ್ ಕೆ.ಜೆ, ಸುಳ್ಯ...
Ad Widget

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರಾಗಿ ಡಾ.ಉಜ್ವಲ್ ಊರುಬೈಲು ನೇಮಕ

ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ ಇದರ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರಾಗಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಮತ್ತು ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಉಜ್ವಲ್ ಊರುಬೈಲು ನೇಮಕಗೊಂಡಿರುತ್ತಾರೆ. ಕರ್ನಾಟಕ ಘನ ಸರ್ಕಾರದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ತಾವರ್‌ಚಂದ್ ಗೆಹ್ಲೋಟ್‌ರವರ ನಿರ್ದೇಶನದಂತೆ, ವಿಶ್ವವಿದ್ಯಾಲಯದ...

ಸುಳ್ಯ : ಕೋಳಿ ಅಂಕಕ್ಕೆ ಪೋಲೀಸ್ ದಾಳಿ – ಹಲವರ ಬಂಧನ

ಸುಳ್ಯ ತಾಲೂಕಿನ ಮರ್ಕಂಜ ಸಮೀಪ ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾದ ಕೋಳಿ ಅಂಕಕ್ಕೆ ಪೋಲೀಸ್ ದಾಳಿ ನಡೆದಿದ್ದು ಹಲವರನ್ನು ಬಂಧಿಸಿದ್ದು, ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಸೋಸಿಯೇಶನ್‌ನಲ್ಲಿ ಫ್ರೆಶರ್‍ಸ್ ಡೆ ಆಚರಣೆ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಡಿ.6ರಂದುಹೊಸದಾಗಿ ಪ್ರವೇಶ ಪಡೆದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳನ್ನುACE ಇದರ ವತಿಯಿಂದ ನಡೆಸಲಾದ “Aakar-2022” ಎನ್ನುವ ಕಾರ್ಯಕ್ರಮದಲ್ಲಿ ಸ್ವಾಗತಿಸಲಾಯಿತು. ಭಾರತ್ ಗ್ರಾಮ ಸಂಪರ್ಕ ನಿರ್ಮಾಣ, ಸುಳ್ಯ ಇದರ ಇಂಜಿನಿಯರ್ ಪತಂಜಲಿ ಭಾರಧ್ವಾಜ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪತಂಜಲಿ ಭಾರಧ್ವಾಜ್ ಇವರು ಮುಂದಿನ ದಿನಗಳಲ್ಲಿ ಸಿವಿಲ್...

ಬೇಕಾಗಿದ್ದಾರೆ

ಅಕೌಂಟೆಂಟ್ ಅಸಿಸ್ಟೆಂಟ್ , ಆಡಿಟರ್ ಹುದ್ದೆಗೆ ಸುಳ್ಯ ಆಸುಪಾಸಿನ ಬಿ.ಕಾಂ. ಆಗಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಬಾಲಕೃಷ್ಣ ನಡುಗಲ್ಲು , ಮೊ : 944871025

ಡಿ.10 ; ನೆಲ್ಲೂರು ಕೆಮ್ರಾಜೆ ಸೊಸೈಟಿಯಲ್ಲಿ ತಾಳೆ, ಕಾಳುಮೆಣಸು ಕೃಷಿ ಹಾಗೂ ಎಲೆ ಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ

ತೋಟಗಾರಿಕೆ ಇಲಾಖೆ, ಸುಳ್ಯ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ತಾಳೆ ಮತ್ತು ಕಾಳುಮೆಣಸು ಬೇಸಾಯ ಹಾಗೂ ಅಡಿಕೆ ಎಲೆ ಚುಕ್ಕೆ ರೋಗ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಡಿ.10 ರಂದು ಸಹಕಾರ ಸಂಘದ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ...

ಡಿ.11 ರಂದು ಸರಕಾರಿ ನೌಕರರ ಸಂಘದ ವತಿಯಿಂದ ಕ್ರೀಡಾಕೂಟ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಸುಳ್ಯ ಇದರ ವತಿಯಿಂದ ಸರಕಾರಿ ನೌಕರರ ಕ್ರೀಡಾಕೂಟ ಡಿ.11 ರಂದು ರಂದು ಜೂನಿಯರ್ ಕಾಲೇಜ್ ನ ಮೈದಾನದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ಮಹಾದೇವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್. ಎನ್ ಆಗಮಿಸಲಿದ್ದಾರೆ....

ಎಲಿಮಲೆ : ಸಮಾಜಸೇವೆಗಾಗಿ ಚಂದ್ರಶೇಖರ ಕಡೋಡಿಯವರಿಗೆ ಸನ್ಮಾನ

ಗುತ್ತಿಗಾರಿನಲ್ಲಿ ಎಲಿಮಲೆಯಲ್ಲಿ ಡಿ.4 ರಂದು ನಡೆದ ರಕ್ತದಾನ ಶಿಬಿರದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ನೇತೃತ್ವದಲ್ಲಿ ಮಾಡುತ್ತಿರುವ ಸಮಾಜಸೇವೆಯನ್ನು ಪರಿಗಣಿಸಿ ಚಂದ್ರಶೇಖರ ಕಡೋಡಿಯವರನ್ನು ಸನ್ಮಾನಿಸಲಾಯಿತು. ತಾಲೂಕು ವೈಧ್ಯಾಧಿಕಾರಿ ಡಾ. ನಂದಕುಮಾರ್ ಸನ್ಮಾನ ನೆರವೇರಿಸಿದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಸುಲೋಚನಾ ದೇವ, ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಡಾ. ಅಶೋಕ್,ಸಿ ಎಚ್ ಓ...

ಡಿ.6,7:ಬೆಳ್ಳಿಪ್ಪಾಡಿ ಶ್ರೀ ಉಳ್ಳಾಕುಲು ಧೂಮಾವತಿ ದೈವದ ನೇಮೋತ್ಸವ

ಬೆಳ್ಳಿಪ್ಪಾಡಿ-ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ನಡುಬೆಟ್ಟು ಶ್ರೀ ಉಳ್ಳಾಕುಲು ಧೂಮಾವತಿ ದೈವಸ್ಥಾನದಲ್ಲಿ ಡಿ. 6 ಮತ್ತು 7 ರಂದು ಕಾಲಾವಾಧಿ ನೇಮೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ನಾಲ್ಕು ವರ್ಗ ಊರ ಸಮಸ್ತರು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಪ್ರಸಾದ ಸ್ವೀಕರಿಸಿ ನಂತರ ಅನ್ನಸಂತರ್ಪಣೆ ನಡೆಯಿತು.
Loading posts...

All posts loaded

No more posts

error: Content is protected !!