Ad Widget

ದ.25- 26: ಕೆ. ವಿ ಜಿ. ಸುಳ್ಯ ಹಬ್ಬ

ದ.25ರಂದು ಕ್ರೀಡಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಯುವ ಸಾಧಕರಿಗೆ ಸನ್ಮಾನ ರಾತ್ರಿ ತುಳು ನಾಟಕ ದ .26ರಂದು ಕೆ.ವಿ.ಜಿ. ಸಂಸ್ಮರಣೆ - ಸಾಧನಾಶ್ರೀ ಪ್ರಶಸ್ತಿ ಪ್ರದಾನ - ರಂಗರೂಪಕ ಆಧುನಿಕ ಸುಳ್ಯದ ನಿರ್ಮಾತೃ ದಿ| ಡಾ| ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟುಹಬ್ಬವನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಸುಳ್ಯ ಹಬ್ಬವನ್ನಾಗಿ...

ಡಿ. 15ರಿಂದ 19 ರವರೆಗೆ ಕರ್ಲಪ್ಪಾಡಿ ಶಾಸ್ತವೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಕಾಲವಧಿ ಉತ್ಸವವು ಡಿ.15 ರಿಂದ 19 ರವರೆಗೆ ನಡೆಯಲಿದೆ.ಡಿ. 15 ರಂದು ತಂತ್ರಿವರ್ಯರ ಆಗಮನ, ರಾತ್ರಿ ಶುದ್ಧಿ ಕಲಶ. ಡಿ. 16 ರಂದು ಶ್ರೀ ಗಣಪತಿ ಹವನ, ಉಗ್ರಾಣ ತುಂಬಿಸುವುದು, ಬಿಂಬ ಶುದ್ಧಿ, ಕಲಶ ಪೂಜೆ, ಕಳಶಾಭಿಷೇಕ ನಾಗ ದೇವರಿಗೆ ಮತ್ತು ರಕ್ತೇಶ್ವರಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ,...
Ad Widget

ತತ್ವಮಸಿ ಚಾರಿಟೇಬಲ್ ಟ್ಟಸ್ಟ್ ನ ಪಾಲುದಾರರಾಗಿದ್ದ ಕೆ.ಪಿ.ಶಿವಪ್ರಕಾಶ್ ನಿಧನ

ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ , ಕೆಲ ವರ್ಷಗಳ ಹಿಂದೆ ಸುಳ್ಯದಲ್ಲಿ ತತ್ವಮಸಿ ಚಾರಿಟೇಬಲ್ ಟ್ಟಸ್ಟ್ ನ ಪಾಲುದಾರರಾಗಿದ್ದ. ಕೆ.ಪಿ.ಶಿವಪ್ರಕಾಶರವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು. ಇತ್ತೀಚಿನ ಕೆಲ ಸಮಯದಿಂದ ಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕಳೆದ ಸೋಮವಾರಮನೆಯಲ್ಲಿರುವಾಗ ಅವರಿಗೆ ಬ್ರೈನ್ ಹ್ಯಾಮರೇಜ್ ಆಯಿತೇನ್ನಲಾಗಿದೆ. ಕೂಡಲೇ ಅವರನ್ನು...

ಎನ್ನೆಂಸಿ: ವ್ಯವಹಾರ ಆಡಳಿತ ವಿಭಾಗದಿಂದ ಸತ್ವಂ ಆರ್ಗ್ಯಾನಿಕ್ ಮತ್ತು ನ್ಯಾಚುರಲ್ಸ್ ಗೆ ಭೇಟಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ದ್ವಿತೀಯ ಬಿಬಿಎ ವಿದ್ಯಾರ್ಥಿಗಳಿಗೆ ಸುಳ್ಯದ ಸತ್ವಂ ಆರ್ಗ್ಯಾನಿಕ್ ಮತ್ತು ನ್ಯಾಚುರಲ್ಸ್ ಗೆ ವ್ಯವಹಾರ ಭೇಟಿ ಕಾರ್ಯಕ್ರಮವನ್ನು ಡಿಸೆಂಬರ್ 09 ರಂದು ಆಯೋಜಿಸಲಾಗಿತ್ತು. ಸತ್ವಂ ಆರ್ಗ್ಯಾನಿಕ್ ಮತ್ತು ನ್ಯಾಚುರಲ್ಸ್ ನ ಮಾಲಕ ಸಾಯಿಚರಣ್ ತಮ್ಮ ವ್ಯವಹಾರದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ವ್ಯವಹಾರಿಕ ಜಾಣ್ಮೆ, ರೀತಿ - ನೀತಿಗಳು,...

ಆರೋಗ್ಯಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಿ – ಸಚಿವ ಅಂಗಾರ – ದುಗ್ಗಲಡ್ಕದಲ್ಲಿ ನಮ್ಮ ಕ್ಲಿನಿಕ್ ಸೇವೆ ಆರಂಭ

ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಪ್ರಾರಂಭಿಸುತ್ತಿರುವ “ನಮ್ಮ ಕ್ಲಿನಿಕ್” ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗ್ಗಲಡ್ಕದಲ್ಲಿ ಡಿ.14ರಂದು ಕಾರ್ಯಾರಂಭಗೊಂಡಿತು. ನಮ್ಮ ಕ್ಲಿನಿಕ್ ಆರೋಗ್ಯ ಕೇಂದ್ರವನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ...

ಡಿ.17 ರಂದು ಪಂಬೆತ್ತಾಡಿಯಲ್ಲಿ ಗ್ರಾಮ ವಾಸ್ತವ್ಯ – ಪೂರ್ವಭಾವಿ ಸಭೆ

ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಬೆತ್ತಾಡಿ ಗ್ರಾಮದಲ್ಲಿ ಡಿ.17 ರಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಇಂದು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಸುಳ್ಯ, ಬಿ-ಗ್ರೇಡ್ ತಹಶೀಲ್ದಾರರು ತಾಲೂಕು ಕಛೇರಿ ಸುಳ್ಯ, ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಸಿ.ಡಿ.ಪಿ.ಯು ಸುಳ್ಯ ತಾಲೂಕು,...

ಪೆರಾಜೆ : ಕೊಕ್ಕೋ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಕೊಡಗು ಮತ್ತು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಕೊಕ್ಕೋ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ ಬಗ್ಗೆ ವಿಚಾರಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಯು ಡಿ.14 ರಂದು ಸಹಕಾರ ಸದನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು ಹಾಗೂ ತಾಲೂಕು ಸಾಗುವುಳಿ...

ದೇವಚಳ್ಳ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಗುದ್ದಲಿಪೂಜೆ

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 95ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯಲಿದ್ದು, ಇದರ ಗುದ್ದಲಿ ಪೂಜಾ ಕಾರ್ಯಕ್ರಮ ಇಂದು ನಡೆಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ,ಹಿರಿಯ ಮುಖಂಡರಾದ ತಳೂರು ಚಂದ್ರಶೇಖರ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್...

ಗೌಡ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾಗಿ ವಿಶ್ವನಾಥ್ ದೇವಶ್ಯ – ಕಾರ್ಯದರ್ಶಿಯಾಗಿ ಜಿನ್ನಪ್ಪ ಕೊಲ್ಲಮೊಗ್ರ ಆಯ್ಕೆ

ದ.ಕ‌.ಜಿಲ್ಲಾ ಗೌಡ ಸಂಘ ಮೈಸೂರು ಇದರ ಅಧ್ಯಕ್ಷರಾಗಿ ವಕೀಲ,ಗುತ್ತಿಗಾರಿನ ವಿಶ್ವನಾಥ ದೇವಶ್ಯ ಆಯ್ಕೆ ಯಾಗಿದ್ದಾರೆ. ಉಪಾಧ್ಯಕ್ಷರಾಗಿ ಧನಂಜಯ ನೆಲ್ಯಾಡಿ, ಕಾರ್ಯದರ್ಶಿಯಾಗಿ ಬಿ.ಇ.ಎಂ.ಎಲ್.ಉದ್ಯೋಗಿ ಜಿನ್ನಪ್ಪ ಕೊಲ್ಲಮೊಗ್ರ, ಖಜಾಂಜಿಯಾಗಿ ರಾಘವ ಕಡಪಾಲ,ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಎಡಮಂಗಲ, ಜತೆ ಕಾರ್ಯದರ್ಶಿಯಾಗಿ ರುದ್ರಪ್ಪ ಪಿಂಡಿಮನೆ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಧೀಶರ ಭೇಟಿ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಧೀಶರಾದ ಇಂದಿರೇಶ್ ರವರು ಡಿ.10 ರಂದು ಭೇಟಿ ನೀಡಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು.ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರಾದ ಜಯಪ್ರಕಾಶ್ ರೈ ವೆಂಕಟಕೃಷ್ಣ ರಾವ್, ಸಿಬ್ಬಂದಿ ವಸಂತ ಆಚಾರ್ಯ ಹಾಗೂ...
Loading posts...

All posts loaded

No more posts

error: Content is protected !!