Ad Widget

ಕಂದಡ್ಕ : ಕಾರು ವ್ಯಾನ್ ಅಪಘಾತ

ಕಂದಡ್ಕ ಬಳಿ ಇಂದು ಬೆಳಿಗ್ಗೆ ಸುಳ್ಯದಿಂದ ಗುತ್ತಿಗಾರಿಗೆ ಬರುತ್ತಿದ್ದ ವ್ಯಾನ್ ಹಾಗೂ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ವಾಹನ ಅಲ್ಪಸ್ವಲ್ಪ ಜಖಂಗೊಂಡಿದ್ದು, ಕಾರು ಚಾಲಕ ಬೆಟ್ಟ ಮರಿಯಪ್ಪ ಎಂಬವರ ಕೈಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಸಂಪಾಜೆ ಸಹಕಾರಿ ಸಂಘದ ಶತ ಸಂಭ್ರಮದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮದ ಕ್ರೀಡಾಕೂಟ ಜ.1, 2 ಹಾಗೂ 8 ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರು ಡಿ.15 ರಂದು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ನಿರ್ದೇಶಕರುಗಳಾದ ಬಿ.ಎಸ್.ಯಮುನಾ, ಜಗದೀಶ್ ರೈ, ಎಚ್.ಎ.ಹಮೀದ್,...
Ad Widget

ಕಾಯಕಲ್ಪಕ್ಕೆ ಕಾಯುತ್ತಿದೆ ಸರಕಾರಿ ಆಸ್ಪತ್ರೆಯ ರಸ್ತೆ

ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನಂಪ್ರತಿ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಎಲ್ಲರಿಗೂ ಚಿಕಿತ್ಸೆ ನೀಡುವ ಈ ಆಸ್ಪತ್ರೆಯ ರಸ್ತೆಗೆ ಯಾರೂ ಚಿಕಿತ್ಸೆ ನೀಡುವವರಿಲ್ಲ ಎಂಬುದು ಖೇದಕರ ಸಂಗತಿ. ಹಲವು ವರ್ಷಗಳಿಂದ ಈ ಆಸ್ಪತ್ರೆಗೆ ತೆರಳುವ ರಸ್ತೆ ನಾದುರಸ್ತಿಯಲ್ಲಿದೆ. ಹಲವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಟೋ ರಿಕ್ಷಾ, ಕಾರು, ಅಂಬ್ಯುಲೆನ್ಸ್ ಗಳು ಈ ರಸ್ತೆಯನ್ನೇರಿ ಆಸ್ಪತ್ರೆಗೆ...

ಅಸ್ಸಾಂ ಪ್ಯಾರಾ ಮಿಲಿಟರಿ ಫೋರ್ಸ್ ಗೆ ರಕ್ಷಿತಾ ಮಡ್ತಿಲ ಆಯ್ಕೆ

ಐವರ್ನಾಡು ಗ್ರಾಮದ ರಕ್ಷಿತಾ ಎಂ.ಬಿ ಎಂಬುವವರು ಪ್ಯಾರಾ ಮಿಲಿಟರಿ ಫೋಸ್೯ ಆದ ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಧರ್ಮಸ್ಥಳದಲ್ಲಿ ವಾಸವಾಗಿರುವ ಭಾಸ್ಕರ ಗೌಡ ಮಡ್ತಿಲ ಮತ್ತು ಮಮತಾ ದಂಪತಿಗಳ ಪುತ್ರಿ. ರಕ್ಷಿತಾ ತನ್ನ ಐದನೇ ತರಗತಿವರೆಗಿನ ವಿದ್ಯಾಭ್ಯಾಸವನ್ನು ಐವರ್ನಾಡಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪಡೆದು, ನಂತರ ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಹಿ.ಪ್ರಾ ಶಾಲೆಗಳಲ್ಲಿ...

ದೇವರಕಾನ : ಪ್ರತಿಭಾ ದಿನಾಚರಣೆ

ದೇವರಕಾನ : ಪ್ರತಿಭಾ ದಿನಾಚರಣೆಐವರ್ನಾಡು ದೇವರಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ಡಿ.15 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಎಸ್. ಅಂಗಾರ,ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಐವರ್ನಾಡು ಗ್ರಾ.ಪಂ.ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನವೀನ್ ಸಾರಕೆರೆ, ಗ್ರಾ.ಪಂ. ಸದಸ್ಯೆ ಶಶಿಕಲಾ ಕುಳ್ಳಂಪಾಡಿ ಸೇರಿದಂತೆ ಪ್ರಮುಖ...

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.15ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವವು ಆರಂಭಗೊಂಡಿದೆ.ಜಾತ್ರೋತ್ಸವದ ಅಂಗವಾಗಿ ಡಿ.15ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಚಂಡಿಕಾಯಾಗ ಪ್ರಾರಂಭ, ಹಸಿರು ಹೊರೆ ಕಾಣಿಕೆ ಸಮರ್ಪಣೆ, ಸುಹಾಸಿನಿ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ,ಪ್ರಸಾದ ವಿತರಣೆ ನಡೆದು,...

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವಕ್ಕೆ ಚಾಲನೆ

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇಂದಿನಿಂದ ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವ ನಡೆಯಲಿರುವುದು. ಡಿ.15ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಆಚಾರ್ಯವರಣ, ಸ್ವಸ್ತಿ ಪುಣ್ಯಹ ವಾಚನ, ಮಹಾ ಗಣಪತಿ ಹೋಮ, ಚಂಡಿಕಾಯಾಗ ಪ್ರಾರಂಭ, ಹಸಿರು ಹೊರೆ ಕಾಣಿಕೆ ಸಮರ್ಪಣೆ, ಸುಹಾಸಿನಿ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ,ಪ್ರಸಾದ ವಿತರಣೆ ಅನ್ನ...

ದ.17ರಿಂದ ಜ.14: ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದ.17 ದಿಂದ ಜ.14ರವರೆಗೆ ಧನುಪೂಜೆ ಜರಗಲಿರುವುದು. ಪ್ರತೀ ದಿನ ಬೆಳಿಗ್ಗೆ 5.45ಕ್ಕೆ ಸರಿಯಾಗಿ ಪೂಜಾ ಕಾರ್ಯಕ್ರಮ ನಡೆಯಲಿರುವುದು ಎಂದು ದೇವಾಲಯದ ಆಡಳಿತಾಧಿಕಾರಿ ತಿಳಿಸಿದ್ದಾರೆ.

ದ.17 ರಿಂದ ಜ.14 : ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುಪೂಜೆ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದ.17ರಿಂದ ಜ.14ರವರೆಗೆ ಧನುಪೂಜೆ ನಡೆಯಲಿರುವುದು. ಪ್ರತಿದಿನ ಬೆಳಿಗ್ಗೆ ಗಂಟೆ 4.45ಕ್ಕೆ ಸರಿಯಾಗಿ ಪೂಜೆ ನಡೆಯಲಿದ್ದು, ಧನುಪೂಜೆ ಮಾಡಿಸುವವರು ದೇವಾಲಯದ ಕಚೇರಿಯಿಂದ ರೂ.500 ರಶೀದಿ ಪಡೆದು ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯವರು ತಿಳಿಸಿದ್ದಾರೆ. ಧನುಪೂಜೆಗೆ ಸುಳ್ಯದಿಂದ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ ಗಂಟೆ ೪ಕ್ಕೆ ಅವಿನಾಶ್ ಬಸ್...

ಪಾಲಡ್ಕ : ಲಾರಿ,ಕಾರು,ಬೈಕ್ ಸರಣಿ ಅಪಘಾತ – ಬೈಕ್ ಸವಾರನಿಗೆ ಗಂಭೀರ ಗಾಯ

ಮಾಣಿ ಮೈಸೂರು ಹೆದ್ದಾರಿಯ ಪಾಲಡ್ಕ ಬಳಿ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ,ಕಾರು,ಬೈಕ್ ನಡುವೆ ಇಂದು ಸರಣಿ ಅಪಘಾತ ನಡೆದಿದೆ. ಬೈಕ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Loading posts...

All posts loaded

No more posts

error: Content is protected !!