Ad Widget

ಸುಳ್ಯ : ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ್ ವರ್ಗಾವಣೆ

ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹಾದೇವ್ ಅವರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರಕಾರದ ಅಧೀನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವರ್ಗಾವಣೆ ಆದೇಶ ಹೊರಡಿಸಿದ್ದು, ಸದ್ಯ ಅವರನ್ನು ಕೂಡಿಗೆಗೆ ವರ್ಗಾಯಿಸಲಾಗಿದೆ. “ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ” ತಕ್ಷಣದಿಂದ ಜಾರಿಗೆ ಬರುವಂತೆ ಆದೇಶವನ್ನು ಹೊರಡಿಸಲಾಗಿದೆ...

ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗಪಟುಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಶ್ರೀ ಸಿದ್ಧಗಂಗಾ ಯೋಗ ತರಬೇತಿ ಕೇಂದ್ರ ಮತ್ತು ವರ್ಷಿಣಿ ಯೋಗ ಎಜುಕೇಶನ್ ಸಂಸ್ಕೃತಿ ಮತ್ತು ಸ್ಪೋರ್ಟ್ಸ್ ಟ್ರಸ್ಟ್ (ರಿ.) ಇವರು ನಡೆಸಿದ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ-2022 ರಲ್ಲಿ 8 ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ ಸ್ಥಾನ, ಹಾರ್ದಿಕ ಕೆರೆಕ್ಕೋಡಿ ದ್ವಿತೀಯ ಸ್ಥಾನ ಮತ್ತು 11 ರಿಂದ 15 ವರ್ಷದ...
Ad Widget

ಡಿ.31: ಮರ್ಕಂಜ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಅಚ್ಯುತ.ಪಿ ಸೇವಾ ನಿವೃತ್ತಿ

ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಅಚ್ಯುತ.ಪಿ ರವರು ಡಿ.31ರಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.ಶ್ರೀ ಅಚ್ಯುತ.ಪಿ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಗುತ್ತಿಗಾರಿನಲ್ಲಿ ಪಡೆದು, ಪಿ. ಯು. ಶಿಕ್ಷಣವನ್ನು ಎಸ್.ಎಸ್ ಪಿ.ಯು. ಕಾಲೇಜು ಸುಬ್ರಹ್ಮಣ್ಯದಲ್ಲಿ ಪೂರೈಸಿರುತ್ತಾರೆ. ಧರ್ಮಸ್ಥಳ ಮಂಜುನಾಥೇಶ್ವರ...

ನಿನಾದ ಸಾಂಸ್ಕೃತಿಕ ಕೇಂದ್ರದಿಂದ ಕಲಾವಿದರ ತಂಡ ರಚನೆಗಾಗಿ ಆಸಕ್ತ ಉದಯೋನ್ಮುಖ ಕಲಾವಿದರಿಗೆ ಆಹ್ವಾನ

ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಕಳಂಜ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಯೋಜಿಸುತ್ತಿದ್ದು, ಇದೀಗ ನಿನಾದ ತನ್ನದೇ ಆದ ಕಲಾವಿದರ ತಂಡ ರಚನೆಗಾಗಿ ಸುಳ್ಯ, ಪುತ್ತೂರು ಹಾಗೂ ಕಡಬ ಪರಿಸರದ ಉದಯೋನ್ಮುಖ ಹಾಗೂ ನುರಿತ ಕಲಾವಿದರನ್ನು ಒಗ್ಗೂಡಿಸಿ ವಿವಿಧ ತಂಡಗಳನ್ನು ರಚಿಸಿ ಜಿಲ್ಲೆ, ರಾಜ್ಯ ಹಾಗೂ...

ಜ.01: ನಿನಾದ ತಂಟೆಪ್ಪಾಡಿಯಲ್ಲಿ “ಬಾಬು ಮಾಸ್ಟರ್ ನೆನಪು” ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟ ನಾಗ ಸಂಜೀವನ

ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿಯಲ್ಲಿ ಜ.01ರಂದು ತಂಟೆಪ್ಪಾಡಿ ಶಾಲೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವ ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಬಾಬು ಮಾಸ್ಟರ್ ರವರನ್ನು ನೆನಪಿಸುವ ಸಲುವಾಗಿ "ಬಾಬು ಮಾಸ್ಟರ್ ನೆನಪು" ಕಾರ್ಯಕ್ರಮ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್...

ಕೆ.ವಿ.ಜಿ.ಡೆಂಟಲ್ ಕಾಲೇಜಿನಲ್ಲಿ ರ‌್ಯಾಗಿಂಗ್ ನಡೆದಿಲ್ಲ – ಪ್ರಾಂಶುಪಾಲರ ಸ್ಪಷ್ಟನೆ

ಕೆ.ವಿ.ಜಿ. ದಂತಮಹಾವಿದ್ಯಾಲಯದ ವಿದ್ಯಾರ್ಥಿಗಳ ಮಧ್ಯೆ ಡಿ.29 ರಂದು ನಡೆದ ಕಲಹದ ಕುರಿತು ಪ್ರಾಂಶುಪಾಲರು ಸ್ಪಷ್ಟಿಕರಣ ನೀಡಿದ್ದಾರೆ. ರ‌್ಯಾಗಿಂಗ್ ನಡೆದಿದೆ ಎಂದು ಪ್ರಚಾರ ಪಡೆದಿರುವ ವಿಚಾರಗಳು ಸತ್ಯಕ್ಕೆ ದೂರವಾಗಿದೆ. ಡಾ| ಪಲ್ಲವಿ ಎನ್.ಪಿ. ನಮ್ಮ ಸಂಸ್ಥೆಯ 3ನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ಮೂಲತ: ಬೆಂಗಳೂರಿನ ವೈಟ್ ಫೀಲ್ಡ್ ನವರಾಗಿರುತ್ತಾರೆ. ಡಾ. ಪಲ್ಲವಿಯವರು ನಮ್ಮದೇ, ಕೆ.ವಿ.ಜಿ. ದಂತ ಮಹಾವಿದ್ಯಾಲಯದ...

ತಾಲೂಕು ಕಛೇರಿಯಲ್ಲಿ ವಿಶ್ವಮಾನವ ದಿನಾಚರಣೆ

ಸುಳ್ಯ ತಾಲೂಕು ಕಚೇರಿಯಲ್ಲಿ ಇಂದು ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕು.ಅನಿತಾ ಲಕ್ಷ್ಮಿ, ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಧನಪಾಲ್ ಗೂನಡ್ಕ ಹೆಸರಿನಲ್ಲಿ ಬೇನಾಮಿ ದೂರು ; ಮರಳುಗಾರಿಕೆ ತಡೆಗಟ್ಟಲು ಯಾವ ಅಧಿಕಾರಿಗಳಿಗೂ ದೂರು ನೀಡಿಲ್ಲ – ಧನಪಾಲ್ ಸ್ಪಷ್ಟನೆ

ಅರಂತೋಡು, ಸಂಪಾಜೆ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಇದನ್ನು ತಡೆಗಟ್ಟಬೇಕೆಂದು ಧನಪಾಲ್ ಗೂನಡ್ಕ ಅವರ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಬೇನಾಮಿ ದೂರು ನೀಡಿದ ಘಟನೆ ನಡೆದಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು. ಈ ಬಗ್ಗೆ ಅಮರ ಸುದ್ದಿಗೆ ಧನಪಾಲ್ ಗೂನಡ್ಕ ಪ್ರತಿಕ್ರಿಯೆ ನೀಡಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ನಾನು ಯಾವ ಅಧಿಕಾರಿಗಳಿಗೂ ದೂರು ನೀಡಿಲ್ಲ. ಮರಳು...

ಗುತ್ತಿಗಾರು : ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ವಿತರಣೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಕೇಂದ್ರ ಸಹಕಾರದ ಆಜಾದಿ ಕಾ ಅಮೃತ ಮಹೋತ್ಸವ - 2022. ಪ್ರಯುಕ್ತ ಕೇಂದ್ರ ಸರಕಾರದ ಆಯುಷ್ ಮಂತ್ರಾಲಯ ಹಾಗೂ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಮೈಸೂರು ವತಿಯಿಂದ ನಡೆಸಿದ ಯೋಗ ಕಾರ್ಯಕ್ರಮದಲ್ಲಿ ಸೂರ್ಯನಮಸ್ಕಾರ ಯಜ್ಞ ಇದರಲ್ಲಿ...
error: Content is protected !!