ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿವಸ, ಕೆವಿಜಿ ಸುಳ್ಯ ಹಬ್ಬ ಅಂಗವಾಗಿ ಸುಳ್ಯದಲ್ಲಿ ಬೃಹತ್ ರಕ್ತದಾನ ಶಿಬಿರ ಡಿ.26 ರಂದು ನಡೆಯಿತು. ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ ಯುವಜನರನ್ನು ಹೆಚ್ಚು ಹೆಚ್ಚು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸುಳ್ಯ ಘಟಕದ ನಿರ್ದೇಶಕಿ ಶ್ರೀಮತಿ ಪ್ರಮೀಳಾ ಟಿ ಹೇಳಿದರು ಆದಿ ಡ್ರಾವಿಡ ಯುವ ವೇದಿಕೆ ದ. ಕ. ಜಿಲ್ಲೆ ಭಾರತೀಯ ರೆಡ್ ಕ್ರಾಸ್ ಸುಳ್ಯ ತಾಲೂಕು . ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳ ಸಂಘ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾನಿರ್ವಾಣ ದಿವಸ ಮತ್ತು ಡಾ. ಕುರುಂಜಿ ವೆಂಕಟ್ರಮಣ ಗೌಡರ 94 ನೇ ಹುಟ್ಟು ಹಬ್ಬದ ಪ್ರಯುಕ್ತ ಸುಳ್ಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ಘಟಕದ ಅಧ್ಯಕ್ಷ ಪಿ. ಬಿ ಸುಧಾಕರ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯಿತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ,ಗುಜರಾತಿನ ಉದ್ಯಮಿ ಆರ್ ಕೆ ನಾಯರ್,ಆದಿದ್ರಾವಿಡ ಯುವ ವೇದಿಕೆ ದ.ಕ. ಜಿಲ್ಲಾ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಸತೀಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ, ರೆಡ್ ಕ್ರಾಸ್ ಉಪಸಭಾಪತಿ ಕೆ. ಎಂ.ಮುಸ್ತಫ, ವರ್ತಕರ ಸಂಘದ ಪದಾಧಿಕಾರಿಗಳಾದ ಗಿರೀಶ್ ಡಿ. ಎಸ್., ರಹೀಮಾನ್ ಪಟೇಲ್ ಮೊಬೈಲ್, ರೆಡ್ ಕ್ರಾಸ್ ಜಿಲ್ಲಾ ಪ್ರತಿನಿಧಿ, ಗಣೇಶ್ ಭಟ್, ಕೋಶಾಧಿಕಾರಿ ವಿನಯ್ ಕುಮಾರ್, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಶ್ರೀಮತಿ ಪ್ರಮೀಳಾ, ಆದಿದ್ರಾವಿಡ ಯುವ ವೇದಿಕೆ ಪದಾಧಿಕಾರಿಗಳಾದ ಅಶ್ವಿನ್ ಅಜ್ಜಾವರ, ಪ್ರವೀಣ್ ಬೂಡು, ಗೋಪಾಲ ಆರಂಬೂರು, ಸುರೇಶ್ ಪಂಜಿಗುಂಡಿ, ಗಣೇಶ್ ಮರತಡ್ಕ, ಲಕ್ಷ್ಮಣ ನಾವೂರು, ರಮೇಶ್, ಕೇಶವ, ಚಂದ್ರಕಾಂತ ಬೆಳ್ಳಾರೆ ದಾಮೋದರ ಕೊಡಿಯಾಲ, ರೆಡ್ ಕ್ರಾಸ್ ಜಿಲ್ಲಾ ವೈದ್ಯಾಧಿಕಾರಿ ಡಾ. ಜೆ. ಎನ್. ಭಟ್, ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ಲೇಡಿಗೋಶನ್ ಮಂಗಳೂರು ಬ್ಲಡ್ ಬ್ಯಾಂಕ್ ತಾಂತ್ರಿಕ ಅಧಿಕಾರಿಗಳಾದ ಸವಿತಾ, ಅಶ್ವಿನಿ,ಸೌಮ್ಯ,ಭರತ್, ಅಖಿಲ್ ಮೊದಲಾದವರು ಭಾಗವಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳಪ್ರತಿನಿಧಿಗಳು ರಕ್ತದಾನ ಮಾಡಿದರು.
- Saturday
- November 23rd, 2024