ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದವ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ ‘ಕೆ.ವಿ.ಜಿ. ಸುಳ್ಯ ಹಬ್ಬ’ ಆಚರಣೆಗೆ ಚಾಲನೆ ನೀಡಲಾಯುತು. ಎರಡು ದಿನಗಳ ಸುಳ್ಯ ಹಬ್ಬದ ಅಂಗವಾಗಿ ಡಿ.25 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಿತು. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಕ ಸುಭಾಶ್ಚಂದ್ರ ರೈ ತೋಟ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಡಾ.ಚಿದಾನಂದ ಕೆ.ವಿ. ಶುಭ ಹಾರೈಸಿದರು.ಸಂಘದ ಕೋಶಾಧಿಕಾರಿ ಆನಂದ ಖಂಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಳ್ಯ ಹಬ್ಬ ಸಮಿತಿ ಮಾಜಿ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈ, ಎನ್.ಎ.ರಾಮಚಂದ್ರ, ಮೀನಾಕ್ಷಿ ಗೌಡ, ಪಿ.ಸಿ.ಜಯರಾಮ, ಕೆ.ಆರ್.ಗಂಗಾಧರ, ಪ್ರಮುಖರಾದ ಡಾ.ಎನ್.ಎ.ಜ್ಞಾನೇಶ್, ಡಾ.ಲೀಲಾಶರ ಡಿ.ವಿ, ಎಸ್.ಸಂಶುದ್ದೀನ್, ದಿನೇಶ್ ಮಡಪ್ಪಾಡಿ, ಕೆ.ಟಿ.ವಿಶ್ವನಾಥ್, ಕೆ.ಎಂ.ಮುಸ್ತಫ, ಕೆ.ಎಂ.ರಂಗನಾಥ್,ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಇಬ್ರಾಹಿಂ ಗಾಂಧಿನಗರ, ಡಿ.ಟಿ.ದಯಾನಂದ, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ದಿನೇಶ್ ಅಂಬೆಕಲ್ಲು, ಶಶಿಧರ ಎಂ.ಜೆ, ಮಾಧವ ಗೌಡ ದೇವಸ್ಯ,ಸುಪ್ರೀತ್ ಮೋಂಟಡ್ಕ, ತೀರ್ಥರಾಮ ಅಡ್ಕಬಳೆ, ರಾಧಾಕೃಷ್ಣ ಮಾಣಿಬೆಟ್ಟು, ಹರಿಪ್ರಕಾಶ್ ಅಡ್ಕಾರ್, ಶರತ್ ಅಡ್ಕಾರ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿವಿಧ ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆಗಳು ಆರಂಭಗೊಂಡಿತು. ಕ್ರೀಡಾ ಸಂಚಾಲಕ ಎ.ಸಿ.ವಸಂತ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕಿ ಚಂದ್ರಮತಿ ವಂದಿಸಿದರು. ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.