ಬೆಳ್ಳಾರೆಯ ಯುವ ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಡ್ರಾಮ ಮುಂದುವರಿದಿದ್ದು, ನವೀನ್ ತಾಯಿ ಮೇಲೆ ಚಿನ್ನಾಭರಣ ಕಳ್ಳತನದ ಆರೋಪ ಹೊರಿಸಿ ದೂರು ದಾಖಲಾದ ಘಟನೆ ಡಿ.23 ರಂದು ನಡೆದಿದೆ.
ಉದ್ಯಮಿ ನವೀನ್ ಪತ್ನಿ ಸ್ಪಂದನ ಅವರು ಬೆಳ್ಳಾರೆ ಕಾವಿನ ಮೂಲೆಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಆಗಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ. ದೂರಿನಲ್ಲಿ ನವೀನ್ ಪತ್ನಿ ಸ್ಪಂದನ ತನ್ನ ಗಂಡ ಮದ್ಯವ್ಯಸನಿ ಎಂದು ಉಲ್ಲೇಖಿಸಿದ್ದಾರೆ.ಇದರಿಂದಾಗಿ ವೈವಾಹಿಕ ಜೀವನದಲ್ಲಿ ನೊಂದು ಬೇಸತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ಇವರ ಮದ್ಯವ್ಯಸನದಿಂದ ಸಹಿಸಲು ಅಸಾಧ್ಯವಾದ ಹಂತಕ್ಕೆ ತಲುಪಿದ್ದೇನೆ. ನವೀನ್ ತಂದೆ ಮಾಧವ ಗೌಡರವರು ಮದ್ಯವ್ಯಸನ ಮುಕ್ತ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೀರ್ಮಾನಿಸಿದ್ದರು. ಅದರಂತೆ ಆಸ್ಪತ್ರೆಗೂ ದಾಖಲು ಮಾಡಲಾಗಿತ್ತು.
ಮೊನ್ನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ , ನೀರಜಾಕ್ಷಿಯವರು ಮಾಧವ ಗೌಡ, ದಿವ್ಯಪ್ರಭಾ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಹಾಗೂ ನವೀನ ರೈ ಎಂಬವರ ಮೇಲೆ ಪೊಲೀಸ್ ದೂರು ಕೊಟ್ಟಿದ್ದು ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾನು ತವರು ಮನೆಯಿಂದ ಬಂದು ಮನೆಯೊಳಗೆ ಹೋಗಿ ನೋಡಿದಾಗ ಮನೆಯಿಂದ ಲಾಕರ್ ಬಾಗಿಲು ತೆರೆದಿದ್ದು ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳವಾಗಿದ್ದವು. ವಜ್ರದ ಹಾರ,ನೆಕ್ಲಸ್,ಉಂಗುರ, ಕಿವಿಯ ಓಲೆಗಳು, ಕರಿಮಣಿ ತಾಳಿ ಚೈನು ಹಾಗೂ ಇತರ ಚಿನ್ನಾಭರಣಗಳು ಮತ್ತು ರಶೀದಿಗಳು ಕಳವಾಗಿದೆ.
ಈ ಚಿನ್ನಾಭರಣಗಳನ್ನು ತನ್ನ ಅತ್ತೆ ಅಂದರೆ ಮಾಧವ ಗೌಡರ ಪತ್ನಿ ನೀರಜಾಕ್ಷಿ, ಚಿಕ್ಕ ಅತ್ತೆ ತಾರಾ ಕುಮಾರಿ, ಬಾವ ವಿನ್ಯಾಸ್, ಅವರ ಪತ್ನಿ ಪ್ರಜ್ಞಾ ಎಂಬವರು ಕಳ್ಳತನ ಮಾಡಿರುವುದಾಗಿ ಬಲವಾದ ಸಂಶಯವಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಪಂದನಾ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Tuesday
- April 1st, 2025