Ad Widget

ಎಲ್ಲಾ ಸಮುದಾಯಕ್ಕೆ ಐಕ್ಯತೆಯನ್ನು,ಜ್ಞಾನಜ್ಯೋತಿ ಯನ್ನು ನೀಡಿದವರು ಬಾಲಗಂಗಾಧರನಾಥ ಮಹಾಸ್ವಾಮೀಜಿ – ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅಭಿಮತ

. . . . .

ನಾವು ಯಾವ ದೇಶದಲ್ಲಿ ಯಾವ ಪಕ್ಷದಲ್ಲಿ ಯಾವ ಧರ್ಮದಲ್ಲಿ ಜನ್ಮವೆತ್ತುತ್ತೇವೆಯೋ ಯಾವ ಕುಲದಲ್ಲಿ ಹುಟ್ಟಿ ಬರುತ್ತೇವೆಯೋ ಅದನ್ನ ಬದಲು ಮಾಡಬಾರದು. ಯಾವ ಜನ್ಮದ ಋಣವನ್ನು ಹೊತ್ತು ಬರುತ್ತೇವೆಯೋ ಆ ಜನ್ಮದ ಋಣವನ್ನು ಕೂಡ ತೀರಿಸಬೇಕು ಅದನ್ನು ಮರೆಯಬಾರದು. ನಮಗೆ ಜನ್ಮ ಕೊಟ್ಟ ಅಪ್ಪ ಅಮ್ಮ ನೊಂದಿಗೆ ಸ್ವಾಮಿಗಳು, ಗುರುಗಳು, ಧರ್ಮದ ಜೊತೆಯಲ್ಲಿ ಇರುತ್ತೇವೆ. ಹಾಗೆ ಬೆಳೆಯುತ್ತಾ ಬೆಳೆಯುತ್ತಾ ಎಲ್ಲವನ್ನ ತ್ಯಾಗ ಮಾಡುತ್ತೇವೆ. ದೇಶವನ್ನ ಮರೆಯತ್ತೇವೆ. ಅದು ಆಗಬಾರದು ಆದಿಚುಂಚನಗಿರಿಯ ಜಗದ್ಗುರುಗಳಾದ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಎಲ್ಲಾ ಸಮುದಾಯಗಳನ್ನ ಒಟ್ಟು ಮಾಡಿ ಐಕ್ಯತೆಯನ್ನು, ಅಂಧಕಾರದಲ್ಲಿರುವ ಜನಮಾಸಕ್ಕೆ ಜ್ಞಾನಜ್ಯೋತಿಯನ್ನು ನೀಡಿದ್ದಾರೆ ಎಂದು ಆದಿಚುಂಚನಗಿರಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದರು.

ಅವರು ಧರ್ಮ ಜಾಗೃತಿ ಹಾಗೂ ಗುರುವಂದನ ಕಾರ್ಯಕ್ರಮಕ್ಕಾಗಿ ಐನಕ್ಕಿದು ಗ್ರಾಮದ ಕಿಶೋರ್ ಕುಮಾರ್ ಕೂಜುಗೋಡು ಅವರ ಮನೆಗೆ ಆಗಮಿಸಿ ಪಾದಪೂಜೆ ಹಾಗೂ ಸಮಾಜ ಬಾಂಧವರ ಸಮ್ಮಿಲನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಿಶೋರ್ ಕುಮಾರ್ ಕೂಜುಗೋಡು ಅವರ ಕುಟುಂಬಸ್ಥರು ಪಾದಪೂಜೆ ಗುರುವಂದನೆಯನ್ನು ನೆರವೇರಿಸಿದರು. ಹಾಗೆಯೇ ವಿವಿಧ ಕುಟುಂಬಸ್ಥರುಗಳು, ಸಮಾಜ ಬಾಂಧವರು, ಗ್ರಾಮ ಗೌಡ ಸಮಾಜ ಬಾಂಧವರು ಪಾದಪೂಜೆಯನ್ನು ನೆರವೇರಿಸಿ ಮಂತ್ರಾಕ್ಷತೆಯನ್ನು ಪಡೆದರು. ಕಿಶೋರ್ ಕುಮಾರ್ ಕೂಜುಗೋಡು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾl ರೇಣುಕಾ ಪ್ರಸಾದ್ ಕೆ. ವಿ. ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಗೌಡ ಯುವ ಮುಖಂಡ ಧನಂಜಯ ಆಡಪಂಗಾಯ, ಕುಟುಂಬದ ಹಿರಿಯರಾದ ಸೋಮ ಸುಂದರ ಕೂಜುಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ, ಮಂಗಳೂರು ಶಾಖಾಮಠದ ಡಾI ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು ಸತೀಶ್ ಕೂಜುಗೋಡು ಕಾರ್ಯಕ್ರಮ ನಿರೂಪಿಸಿ ಚಂದ್ರಶೇಖರ ಪೇರಾಲು ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!