ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಫಾರಮ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನ ಉದ್ಘಾಟನಾ ಸಮಾರಂಭವು ಡಿಸೆಂಬರ್ 15ರಂದು ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಬಾಲಚಂದ್ರ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ನಡೆಯಬೇಕಾದ ಹಾದಿ ಹಾಗೂ ಉದ್ಯೋಗವಕಾಶಗಳಿಗೆ ತೆರೆದುಕೊಳ್ಳಬೇಕಾದ ರೀತಿಯ ಬಗ್ಗೆ ಹೇಳಿದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಿಬಿಎ ವಿದ್ಯಾರ್ಥಿಗಳು ಒಟ್ಟು 12 ತಂಡಗಳಾಗಿ ಭಾಗವಹಿಸಿ ಪೋಸ್ಟರ್ ಗಳನ್ನು ತಯಾರಿಸಿ, ಕೊಟ್ಟಿರುವ ವಿಷಯದ ಕುರಿತು ಸಂಕ್ಷಿಪ್ತ ಕಿರು ಚಿತ್ರ ಹಾಗೂ ಪವರ್ ಪಾಯಿಂಟ್ ಮೂಲಕ ಪ್ರದರ್ಶಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುಳ್ಯದ ಡಿಸೈನ್ ಫ್ಯಾಕ್ಟರಿಯ ಅಕ್ಷಯ್ ಎಂ ಪೋಸ್ಟರ್ ಮೇಕಿಂಗ್ ಸ್ಪರ್ಧೆಯ ತೀರ್ಪು ನೀಡಿದುದಲ್ಲದೇ, ವಿದ್ಯಾರ್ಥಿಗಳಿಗೆ ಪೋಸ್ಟರ್ ಗಳನ್ನು ತಯಾರಿಸುವ ವಿಧಾನ, ವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಟ್ರಬಲ್ ಶೂಟರ್ ತಂಡ, ದ್ವಿತೀಯ ಸ್ಥಾನವನ್ನು ಸ್ಪಾರ್ಕ್ ಗರ್ಲ್ಸ್ ತಂಡ ಹಾಗೂ ತೃತೀಯ ಸ್ಥಾನವನ್ನು ಸ್ಟ್ರೈಕರ್ಸ್ ತಂಡ ಪಡೆದುಕೊಂಡಿತ್ತು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಅನಂತಲಕ್ಷ್ಮಿ ಪ್ರಾಸ್ತ ವಿಕವಾಗಿ ಮಾತನಾಡಿ, ದ್ವಿತೀಯ ಬಿಬಿಎ ವಿದ್ಯಾರ್ಥಿಗಳಾದ ಫಾತಿಮತ್ ಶೈಮಾ ಸ್ವಾಗತಿಸಿ, ಫಾತಿಮತ್ ತಹಸೀನಾ ವಂದಿಸಿದರು. ಆಯಿಷತ್ ಅಸ್ರೀನಾ ಕಾರ್ಯಕ್ರಮ ನಿರೂಪಿಸಿದರು. ಬಿಬಿಎ ಉಪನ್ಯಾಸಕರಾದ ಹರಿಪ್ರಸಾದ್, ಶ್ರೀಮತಿ ಲೀನಾ ವೈ ಎನ್, ಶ್ರೀಮತಿ ಮೀನಾಕ್ಷಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.