ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ (ನಿ) ಇದರ ಅಧ್ಯಕ್ಷರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಇತ್ತೀಚೆಗೆ ಸುಳ್ಯ ಸಮೀಪದ ಅರಂಬೂರಿನಲ್ಲಿ ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿ ಪ್ರತೀಕ್ರವರ ಮನೆಯವರಿಗೆ ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ (ನಿ) ಇದರ ಮರಣ ನಿಧಿ ಸೌಲಭ್ಯದ ಬಾಬ್ತು ರೂ. 25,೦೦೦/- ದ ಚೆಕ್ನ್ನು ವಿತರಿಸಿದರು.
ಅಧ್ಯಕ್ಷರ ಆಡಳಿತ ಕಛೇರಿಯಿಂದ ಮೃತ ವಿದ್ಯಾರ್ಥಿಯ ತಂದೆಯವರಾದ ತೇಜೇಶ್ವರರವರು ಆರ್ಥಿಕ ಸಹಾಯದ ಚೆಕ್ನ್ನು ಪಡೆದುಕೊಂಡರು.
- Friday
- November 1st, 2024