Ad Widget

ಸುಳ್ಯ: ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣ| ಸುಂಟಿಕೊಪ್ಪದಲ್ಲಿ ಕಿಡ್ನಾಪರ್ಸ್ ಗಳ ವಾಹನಕ್ಕೆ ತಡೆ; ಪೊಲೀಸರಿಗೆ ಹಸ್ತಾಂತರ

. . . . .

ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ಅಪರಿಚಿತ ತಂಡವೊಂದು ಬಂದು ಬಲವಂತವಾಗಿ ಆಂಬ್ಯುಲೆನ್ಸ್ ನಲ್ಲಿ ಅಪಹರಣ ಮಾಡಿದ್ದು, ಕಿಡ್ನಾಪರ್ ಗಳ ವಾಹನಕ್ಕೆ ಸುಂಟಿಕೊಪ್ಪದಲ್ಲಿ ತಡೆಯೊಡ್ಡಲಾಗಿದೆ.

ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿತ್ತು.

ಇತ್ತೀಚಿನ ಮಾಹಿತಿಯಂತೆ, ಇವರನ್ನು ಆಂಬ್ಯುಲೆನ್ಸ್ ನಲ್ಲಿ‌ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಸುಂಟಿಕೊಪ್ಪ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಕಾಮಧೇನು ಮಾಧವ ಗೌಡ ಪ್ರತಿಕ್ರಿಯೆ ನೀಡಿದ್ದು ಮಗ ನವೀನ್ ಇತ್ತೀಚೆಗೆ ವಿಪರೀತ ಕುಡಿಯುತ್ತಿದ್ದು, ಕುಡಿತ ಬಿಡಿಸಲು ಅಂಬ್ಯುಲೆನ್ಸ್ ಮುಖಾಂತರ ಕೊಂಡೊಯ್ಯಲಾಗುತ್ತಿತ್ತು. ಅದನ್ನು ಮನೆಯವರು ತಪ್ಪಾಗಿ ಭಾವಿಸಿಕೊಂಡಿದ್ದಾರೆ ಹೊರತು ಇನ್ಯಾವುದೇ ಘಟನೆ ನಡೆಯಲಿಲ್ಲ. ಇದನ್ನು ಕುಳಿತು ಮಾತನಾಡಿ ಸರಿಪಡಿಸಿಕೊಳ್ಳುತೇವೆ ಎಂದಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!