ಕಂಟೈನರ್ ವಾಹನದ ಬ್ರೇಕ್ ವೈಫಲ್ಯದಿಂದಾಗಿ, ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಡಿ.15 ರಂದು ರಾತ್ರಿ ನಡೆದಿದೆ.
ಮಂಗಳೂರಿನಿಂದ ಮೈಸೂರಿಗೆ ಕಡೆ ತೆರಳುತ್ತಿದ್ದ ಕಂಟೈನರ್ ಲಾರಿ ಬೈತಡ್ಕದ ತಿರುವಿನ ಇಳಿಜಾರಿನ ಬಳಿ ತಲುಪುತ್ತಿದ್ದಂತೆಯೆ ಬ್ರೇಕ್ ವೈಫಲ್ಯವಾದ ಪರಿಣಾಮ ರಸ್ತೆಯ ಎಡಭಾಗಕ್ಕೆ ಲಾರಿಯು ಪಲ್ಟಿಯಾಗಿದ್ದು, ಕಂಟೈನರ್ ನಲ್ಲಿ ಚಾಲಕ ಮಾತ್ರನಿದ್ದು, ಆತನ ಕೈಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.