
ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದ.17ರಿಂದ ಜ.14ರವರೆಗೆ ಧನುಪೂಜೆ ನಡೆಯಲಿರುವುದು. ಪ್ರತಿದಿನ ಬೆಳಿಗ್ಗೆ ಗಂಟೆ 4.45ಕ್ಕೆ ಸರಿಯಾಗಿ ಪೂಜೆ ನಡೆಯಲಿದ್ದು, ಧನುಪೂಜೆ ಮಾಡಿಸುವವರು ದೇವಾಲಯದ ಕಚೇರಿಯಿಂದ ರೂ.500 ರಶೀದಿ ಪಡೆದು ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯವರು ತಿಳಿಸಿದ್ದಾರೆ. ಧನುಪೂಜೆಗೆ ಸುಳ್ಯದಿಂದ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ ಗಂಟೆ ೪ಕ್ಕೆ ಅವಿನಾಶ್ ಬಸ್ ವ್ಯವಸ್ಥೆ ಇರುತ್ತದೆ.