Ad Widget

ತತ್ವಮಸಿ ಚಾರಿಟೇಬಲ್ ಟ್ಟಸ್ಟ್ ನ ಪಾಲುದಾರರಾಗಿದ್ದ ಕೆ.ಪಿ.ಶಿವಪ್ರಕಾಶ್ ನಿಧನ

. . . . . . . . .

ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ , ಕೆಲ ವರ್ಷಗಳ ಹಿಂದೆ ಸುಳ್ಯದಲ್ಲಿ ತತ್ವಮಸಿ ಚಾರಿಟೇಬಲ್ ಟ್ಟಸ್ಟ್ ನ ಪಾಲುದಾರರಾಗಿದ್ದ. ಕೆ.ಪಿ.ಶಿವಪ್ರಕಾಶರವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು. ಇತ್ತೀಚಿನ ಕೆಲ ಸಮಯದಿಂದ ಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕಳೆದ ಸೋಮವಾರ
ಮನೆಯಲ್ಲಿರುವಾಗ ಅವರಿಗೆ ಬ್ರೈನ್ ಹ್ಯಾಮರೇಜ್ ಆಯಿತೇನ್ನಲಾಗಿದೆ. ಕೂಡಲೇ ಅವರನ್ನು ಮಹಾವೀರ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಂದು ಮಧ್ಯಾಹ್ನ ಅವರು ಕೊನೆಯುಸಿರೆಳೆದರು.ಮೃತದೇಹದ ಅಂತ್ಯಕ್ರಿಯೆ ಪುತ್ತೂರಿನ ಸ್ಮಶಾನದಲ್ಲಿ ನಡೆಯಿತು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿ, ಸಹೋದರ ಗಣೇಶ ಕೆ.ಪಿ., ಸಹೋದರಿ ಗೀತಾ ರನ್ನು ಅಗಲಿದ್ದಾರೆ.
ಅವರು ಸುಳ್ಯದಲ್ಲಿ ಐದು ವರ್ಷಗಳ ಹಿಂದೆ ತತ್ವಮಸಿ ಚಾರಿಟೇಬಲ್ ನಡೆಸುತ್ತಿದ್ದು, ಅದರ ಪಾಲುದಾರರಾಗಿ ಹಿಂದೆ ಸುಳ್ಯದಲ್ಲಿ ಟಿ ವಿ ಎಸ್ ಬೈಕ್ ಶೂರೂಂ , ಇಲೆಕ್ಟ್ರಾನಿಕ್ ಶೂರೂಂಗಳನ್ನು ನಡೆಸಿ ಸುಳ್ಯದಲ್ಲಿ ಉದ್ಯಮಿ ಯಾಗಿ ಗುರುತಿಸಿಕೊಂಡಿದ್ದು ,ನೂರಾರು ಕಡೆಗಳಲ್ಲಿ ಟ್ರಸ್ಟ್ ಮುಖೇನ ವಿವಿಧ ಸಾಮಾಗ್ರಿಗಳನ್ನು ದಾನವಾಗಿ ನೀಡಿದ್ದರು. ಆದರೆ ವ್ಯವಹಾರದಲ್ಲಿ ಧಿಡೀರ್ ಕುಸಿತ ಕಂಡು ಸಂಸ್ಥೆ ನಡೆಸಲಾಗದೇ, ಪಾಲುದಾರಿಕೆಯಲ್ಲಿ ಒಡಕು ಮೂಡಿ, ಊರು ತೊರೆದಿದ್ದರು. ಈ ಬಗ್ಗೆ ವಂಚನೆ ಪ್ರಕರಣ ನ್ಯಾಯಾಲಯದಲ್ಲಿದ್ದು ಇನ್ನಷ್ಟೇ ತೀರ್ಪು ಬರಬೇಕಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading