Ad Widget

ಕಲ್ಲಾಜೆಯಲ್ಲಿ ಲಯನ್ಸ್ ವಲಯ ಸಮ್ಮಿಲನ

. . . . . . . . .

ಕಲ್ಲಾಜೆಯಲ್ಲಿ ಡಿ.11 ರಂದು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕಡಬ ಮತ್ತು ಲಯನ್ಸ್ ಕ್ಲಬ್ ಪಂಜ ಇವರ ಜಂಟಿ ಆಶ್ರಯ ದಲ್ಲಿ ವಲಯ ಸಮ್ಮಿಲನ ನಡೆಯಿತು. ವಲಯದ ಪ್ರಥಮ ಮಹಿಳೆ ಶ್ರೀಮತಿ ಶ್ಯಾಮಲ ಸಿದ್ದಲಿಂಗ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಪುರುಷೋತ್ತಮ ದಂಬೆಕೋಡಿಯವರು ಸ್ವಾಗತಿಸಿದರು. ಇತ್ತೀಚೆಗೆ ನಿಧನರಾದ ಕಡಬ ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರಾದ ಸ್ಕರಿಯ ಎನ್ ಅವರ ನುಡಿನಮನ ಕಾರ್ಯಕ್ರಮ ವನ್ನು ಕಡಬ ಲಯನ್ಸ್ ಕ್ಲಬ್ ನ ಅದ್ಯಕ್ಷರಾದ ಜೋಸ್ ಕೆ. ಜೆ ನೆರವೇರಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಲಯನ್ ಶಶಿಧರ ಪಳಂಗಾಯ ಪ್ರಾಸ್ತಾವಿಕವಾಗಿ ಮಾತಾಡಿದರು. ವಲಯ ಅಧ್ಯಕ್ಷರಾದ ಲಯನ್ ಡಾ ಸಿದ್ಧಲಿಂಗ ಅವರು ತಮ್ಮ ಮಾತಿನಲ್ಲಿ ಲಯನಿಸಂ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ದ ಅದ್ಯಕ್ಷರಾದ ಲಯನ್ ಪ್ರೋ. ರಂಗಯ್ಯ ಶೆಟ್ಟಿಗಾರು ಅವರು ಮಾತನಾಡಿ ವಲಯದ ಮೂರು ಲಯನ್ಸ್ ಕ್ಲಬ್ ನ ಸದಸ್ಯರು ಮತ್ತು ಕುಟುಂಬದ ಸದಸ್ಯರಿಗೆ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಂಡು ವಲಯ ಸಮ್ಮಿಲನ ವಿಭಿನ್ನವಾಗಿ ಮೂಡಿಬಂದದಕ್ಕೆ ಎಲ್ಲರನ್ನೂ ಅಭಿನಂದಿಸಿದರು. ಪಂಜ ಲಯನ್ಸ್ ಕ್ಲಬ್ ನ ಸಂತೋಷ್ ಜಾಕೆಯವರು ಶುಭಕೊರಿದರು. ಲಯನ್ ಜಾಕೆ ಮಾಧವ ಗೌಡ ಮತ್ತು ಲಯನ್ ನಿತ್ಯಾನಂದ ಮುಂಡೋಡಿಯವರು ಡಾ ಸಿದ್ದಲಿಂಗ ದಂಪತಿಗಳನ್ನು ಸನ್ಮಾನಿಸಿದರು. ಲಯನ್ ಸತೀಶ್ ಕೂಜುಗೋಡು ವಂದಿಸಿದರು. ಲಯನ್ ತುಕಾರಾಂ ಏನೆಕಲ್ ಅವರು ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಶ್ರೀಮತಿ ವಿಮಲರಂಗಯ್ಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಲಯನ್ ಪದಾಧಿಕಾರಿಗಳಾದ ರಾಮಚಂದ್ರ ಪಳಂಗಾಯ, ಅಭಿಷೇಕ್ , ಥೋಮಸ್, ಕರುಣಾಕರ ಎಣ್ಣೆಮಜಲು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading