- Thursday
- November 21st, 2024
ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಸಾಧನ ಸಹಕಾರ ಸೌಧ ಲೋಕಾರ್ಪಣೆ ಸಮಾರಂಭ ಡಿ. 10 ರಂದು ನಿಂತಿಕಲ್ ನಲ್ಲಿ ನಡೆಯಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ವಹಿಸಲಿದ್ದಾರೆ. ರಾಜ್ಯದ ಸಹಕಾರ ಸಚಿವರಾದ ಎಸ್. ಟಿ .ಸೋಮಶೇಖರ ಸಾಧನಾ ಸಹಕಾರ ಸೌಧವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಆಡಳಿತ...
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಿ.09 ರಂದು ಕನ್ನಡ ಚಿತ್ರರಂಗದ ನಾಯಕ ನಟ ಶಿವರಾಜ್ ಕುಮಾರ್ ಅವರು ಪತ್ನಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹಾಗೂ ಪುತ್ರಿಯರಾದ ನಿರುಪಮ ರಾಜ್ ಕುಮಾರ್, ನಿವೇದಿತ ರಾಜ್ ಕುಮಾರ್ ಅವರೊಂದಿಗೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.ಬಳಿಕ ಕ್ಷೇತ್ರ ದೈವ ಹೊಸಳಿಗಮ್ಮ ಗುಡಿಗೆ...
ಮುಂದೆ ಗುರಿ, ಹಿಂದೆ ಗುರು ಇದ್ದು ಸಾಧಿಸುವ ಛಲ ಇದ್ದರೆ ಸಾಧಕನಿಗೆ ಸಾಧನೆ ಅಸಾಧ್ಯವಲ್ಲ ಎಂಬ ಮಾತು ಜನಜನಿತ. ಆದರೆ ಹಿಂದೆ ಗುರುವಿಲ್ಲದಿದ್ದರೂ ಸಾಧನೆಯ ಹುಮ್ಮಸ್ಸು, ಗಮ್ಯ ತಲುಪಲು ಬೇಕಾದ ಪ್ರಯತ್ನ, ಶ್ರದ್ಧೆ ಇದ್ದರೆ ಯಾವುದೇ ಕಲೆಯನ್ನು ಸಿದ್ಧಿಸಿಕೊಂಡು ಪ್ರಸಿದ್ಧಿ ಪಡೆಯಬಹುದೆಂದು ತೋರಿಸಿಕೊಟ್ಟವರು ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕದ ವಿಜಿತ್ ಕುಮಾರ್. ದೈವ ನರ್ತನ ವೃತ್ತಿಯ...
ಸುಳ್ಯದ ಜಟ್ಟಿಪಳ್ಳ ರಸ್ತೆಯ ಕುರುಂಜಿಕಾರ್ಸ್ ಕಾಂಪ್ಲೆಕ್ಸ್ ನಲ್ಲಿ ಸಿವಿಲ್ ಇಂಜಿನಿಯರ್ ಗಳಾದ ಶರತ್ ದೇವ ಮತ್ತು ಸೃಜನ್ ಬಿ.ಎಸ್ ರವರ ಆರೋಹಣ್ ಅಸೋಸಿಯೇಟ್ಸ್ ಕನ್ಸ್ಟ್ರಕ್ಷನ್ ಮತ್ತು ಕನ್ಸಲ್ಟೆನ್ಸಿ ಕಚೇರಿಯುಡಿ.8 ರಂದು ಶುಭಾರಂಭಗೊಂಡಿತು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರು ದೀಪ ಬೆಳಗಿಸಿ ಶುಭ ಸಂಸ್ಥೆಗೆ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಸಂದೇಶ್ ಕೆ.ಜೆ, ಸುಳ್ಯ...
ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ ಇದರ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರಾಗಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಮತ್ತು ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಉಜ್ವಲ್ ಊರುಬೈಲು ನೇಮಕಗೊಂಡಿರುತ್ತಾರೆ. ಕರ್ನಾಟಕ ಘನ ಸರ್ಕಾರದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ತಾವರ್ಚಂದ್ ಗೆಹ್ಲೋಟ್ರವರ ನಿರ್ದೇಶನದಂತೆ, ವಿಶ್ವವಿದ್ಯಾಲಯದ...
ಸುಳ್ಯ ತಾಲೂಕಿನ ಮರ್ಕಂಜ ಸಮೀಪ ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾದ ಕೋಳಿ ಅಂಕಕ್ಕೆ ಪೋಲೀಸ್ ದಾಳಿ ನಡೆದಿದ್ದು ಹಲವರನ್ನು ಬಂಧಿಸಿದ್ದು, ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಡಿ.6ರಂದುಹೊಸದಾಗಿ ಪ್ರವೇಶ ಪಡೆದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳನ್ನುACE ಇದರ ವತಿಯಿಂದ ನಡೆಸಲಾದ “Aakar-2022” ಎನ್ನುವ ಕಾರ್ಯಕ್ರಮದಲ್ಲಿ ಸ್ವಾಗತಿಸಲಾಯಿತು. ಭಾರತ್ ಗ್ರಾಮ ಸಂಪರ್ಕ ನಿರ್ಮಾಣ, ಸುಳ್ಯ ಇದರ ಇಂಜಿನಿಯರ್ ಪತಂಜಲಿ ಭಾರಧ್ವಾಜ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪತಂಜಲಿ ಭಾರಧ್ವಾಜ್ ಇವರು ಮುಂದಿನ ದಿನಗಳಲ್ಲಿ ಸಿವಿಲ್...
ಅಕೌಂಟೆಂಟ್ ಅಸಿಸ್ಟೆಂಟ್ , ಆಡಿಟರ್ ಹುದ್ದೆಗೆ ಸುಳ್ಯ ಆಸುಪಾಸಿನ ಬಿ.ಕಾಂ. ಆಗಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಬಾಲಕೃಷ್ಣ ನಡುಗಲ್ಲು , ಮೊ : 944871025