Ad Widget

ಗೃಹರಕ್ಷಕರ ಸೇವೆಗೆ ಮುನ್ನಣೆ ಸಿಗಲಿ : ಸೋನಾವಣೆ ಹೃಷಿಕೇಶ್ ಭಗವಾನ್

. . . . . . .

2022 ರ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ ಡಿ. 06 ರಂದು ಬೆಳಿಗ್ಗೆ 11:00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್ ಮಂಗಳೂರು ಇಲ್ಲಿ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲೀಸ್ ಅಧೀಕ್ಷಕ ಸೋನಾವಣೆ ಹೃಷಿಕೇಶ ಭಗವಾನ್ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಗೃಹರಕ್ಷಕರು ಯಾವುದೇ ಅಪೇಕ್ಷೆಯಿಲ್ಲದೆ ದಿನದ 24 ಗಂಟೆಯು ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಗೃಹರಕ್ಷಕರ ಕೆಲಸ ಶ್ರೇಷ್ಠ ಕೆಲಸ, ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಾರೆ. ಅವರು ಮಾಡುವ ಕೆಲಸಗಳಲ್ಲಿ ಅವರು ತೋರುವ ಶ್ರದ್ದೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಶ್ಲಾಘಸಿದರು. ಗೃಹರಕ್ಷಕರ ಸೇವೆಯನ್ನು ಸಮಾಜ ಮತ್ತು ಸರಕಾರ ಗುರುತಿಸಬೇಕು ಹಾಗೂ ಅವರ ಸೇವೆಗೆ ಸೂಕ್ತ ಮನ್ನಣೆ ಸಿಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ಗೃಹರಕ್ಷಕದಳ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1963 ರಲ್ಲಿ ಪ್ರಾರಂಭಗೊಂಡಿತು. ಗೃಹರಕ್ಷಕರು ಪೊಲೀಸ್ ಠಾಣಾ ಕರ್ತವ್ಯ, ಬಂದೋಬಸ್ತ್ ಕರ್ತವ್ಯ, ಚೆಕ್ ಪೋಸ್ಟ್ ಕರ್ತವ್ಯ, ಸಾಗರ ಕವಚ, ಚುನಾವಣಾ ಕರ್ತವ್ಯ ಹಾಗೂ ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ನಿಷ್ಕಾಮ ಸೇವೆ, ಸೇವೆಯೆ ಪರಮ ಗುರಿ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ದೇಶಕ್ಕಾಗಿ ಸೇವೆ ಸಲ್ಲಿಸುವ ಗೃಹರಕ್ಷಕದಳ ಸಂಸ್ಥೆ ಒಂದು ನಿಷ್ಕಾಮ ಸೇವೆ ನೀಡುವ ಸಂಸ್ಥೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕ ದಳಕ್ಕೆ ಸೇರಿ ದೇಶ ಸೇವೆಯಲ್ಲಿ ಭಾಗಿಯಾಗಬೇಕೆಂದು ನುಡಿದರು. ಇಂದಿನ ದಿನ ನಾವೆಲ್ಲ ಗೃಹರಕ್ಷಕರು ದೇಶಕ್ಕಾಗಿ ನಮ್ಮನ್ನು ಮಗದೊಮ್ಮೆ ಸಮರ್ಪಣಾಭಾವದಿಂದ ಸಮಾರ್ಪಿಸಿಕೊಳ್ಳೋಣ ಎಂದು ನುಡಿದರು

ಈ ಸಂದರ್ಭದಲ್ಲಿ ಹರಿಶ್ಚಂದ್ರ ಪ್ರಭಾರ ಘಟಕಾಧಿಕಾರಿ ಸುಬ್ರಹ್ಮಣ್ಯ ಘಟಕ, ಐತಪ್ಪ, ಘಟಕಾಧಿಕಾರಿ ಬಂಟ್ವಾಳ ಘಟಕ, ಲೋಕೇಶ್ ಪ್ರಭಾರ ಘಟಕಾಧಿಕಾರಿ ಮೂಲ್ಕಿ ಘಟಕ, ಜಗನ್ನಾಥ್ ಸೆಕ್ಷನ್ ಲೀಡರ್ ಪುತ್ತೂರು ಘಟಕ, ಸುನೀಲ್ ಕುಮಾರ್ ಸರ್ಜೆಂಟ್ ಮಂಗಳೂರು ಘಟಕ,  ಜಗದೀಶ್ ಸೆಕ್ಷನ್ ಲೀಡರ್ ಪಣಂಬೂರು ಘಟಕ ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಹೃಷಿಕೇಶ ಭಗವಾನ್ ಐ ಪಿ ಎಸ್, ಇವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ  ರಮೇಶ್ ಇವರು ಸ್ವಾಗತ ಭಾಷಣ ಮಾಡಿದರು. ಶ್ರೀ ತೀರ್ಥೇಶ್   ಘಟಕಾಧಿಕಾರಿ ಕಡಬ ಘಟಕ ಇವರು ಗೃಹರಕ್ಷಕರಿಗೆ ಪ್ರತಿಜ್ಞಾ ಸ್ವೀಕಾರ ಮಾಡಿಸಿ, ಯಾವುದೇ ಸಂದರ್ಭದಲ್ಲಿ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನನ್ನ ಕರ್ತವ್ಯಗಳನ್ನು ನಿರ್ಭಯದಿಂದ, ನಿಷ್ಪಕ್ಷಪಾತವಾಗಿ ದಕ್ಷತೆಯಿಂದ ನಿರ್ವಹಿಸಿ ಸಮಾಜದಲ್ಲಿ ಶಾಂತಿ ನೆಲಸುವಲ್ಲಿ ಹಾಗೂ ಜನತೆಯ ಪ್ರಾಣ ಮತ್ತು ಆಸ್ತಿಗಳಿಗೆ ರಕ್ಷಣೆ ನೀಡುವಲ್ಲಿ ನನ್ನ ಶಕ್ತ್ಯಾನುಸಾರ ಶ್ರಮಿಸುತ್ತೇನೆ ಎಂದು ಗೃಹರಕ್ಷಕರು ಪ್ರತಿಜ್ಞೆ ಮಾಡಿದರು. ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ವರದಿ ವಾಚನ ಮಾಡಿದರು. ಶ್ರೀಮತಿ ಮಂಜುಳಾ, ಮಂಗಳೂರು ಘಟಕ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಶಿವಪ್ಪ ನಾಯ್ಕ್ ಇವರು ವಂದನಾರ್ಪಣೆಗೈದರು ಮತ್ತು ಜಿಲ್ಲಾ ಕಚೇರಿಯ ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ. ಎಸ್, ಮೀನಾಕ್ಷಿ ಹಾಗೂ ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್ ಶೇರಾ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಭಾಸ್ಕರ್ ಎಂ., ಮೂಡಬಿದ್ರೆ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಪಂಡಿರಾಜ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ರಮೇಶ್, ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ  ಜಯಾನಂದ, ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವಸಂತ್ ಕುಮಾರ್ ಮತ್ತು ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!