Ad Widget

ಎ ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ‘ಶಾಂತಿನಗರ ಕ್ಷೇತ್ರದೊಡೆಯನೇ’ ಕನ್ನಡ ಫ್ಯೂಷನ್ ಸಾಂಗ್‌ನ ಪೋಸ್ಟರ್ ಬಿಡುಗಡೆ


ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೊಂದು ಕನ್ನಡ ಫ್ಯೂಷನ್ ಸಾಂಗ್ ‘ಶಾಂತಿನಗರ ಕ್ಷೇತ್ರದೊಡೆಯನೇ’ ಪದ್ಯದ ಸಾಹಿತ್ಯವನ್ನು ಚಿದು ಪಾಂಗಲ್ಪಾಡಿ ಬರೆದಿದ್ದು, ತೇಜಸ್ವಿನಿ ಕುಕ್ಕಿಲ ಇವರು ಹಾಡಿದ್ದಾರೆ. ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ್ ಶೆಟ್ಟಿ ಮತ್ತು ಅಶ್ವಥ್ ಛಾಯಾಗ್ರಹಣ, ಹಿತೇಶ್ ಪಮ್ಮನಮಜಲು ಸಂಕಲನ, ಕೀರ್ತಿರಾಜ್ ಕೆ ಸಂಗೀತ ಮತ್ತು ಪದ್ಯದ ನಿರ್ದೇಶನವನ್ನು ಅಚಲ್ ಉಬರಡ್ಕ ಮಾಡಿರುತ್ತಾರೆ.
ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದಿದ್ದು, ಪೋಸ್ಟರ್‌ನ್ನು ತಲಕಾವೇರಿಯ ಅನುವಂಶಿಕ ಅರ್ಚಕರಾದ ಟಿ .ಎಸ್ ಸುಧೀರ್ ಆಚಾರ್ ಇವರು ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು ಜಿ ರಾಧ, ಅರ್ಚಕರಾದ ನಾಗರಾಜ ಭಟ್, ಸಾಯಿಗೀತ, ದಿವ್ಯ ಸುಧೀರ್, ಸುಜಿತ್ ಶಾಂತಿನಗರ, ಶ್ಯಾಮಲ ನಾಗರಾಜ್ ಹಾಗೂ ಸಾಂಗ್‌ನ ತಂಡದವರು ಉಪಸಿತರಿದ್ದರು. ಈ ಪದ್ಯದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ದಿನಾಂಕವನ್ನು ಸಧ್ಯದಲ್ಲೇ ತಿಳಿಸಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading