
ಮರ್ಕ್ಯುರಿ ಡ್ಯಾನ್ಸ್ ಕ್ರೀವ್ ಬೆಳ್ಳಂಪಳ್ಳಿ ಉಡುಪಿ ಇದರ ವತಿಯಿಂದ ಡಿ.03 ರಂದು ನಡೆದ ರಾಷ್ಟ್ರಮಟ್ಟದ ಸೋಲೋ ಡ್ಯಾನ್ಸ್ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ.
ಇವರು ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರಿ.
ತರುಣ್ ರಾಜ್ ಮಂಗಳೂರು ಇವರಿಗೆ ತರಬೇತಿ ನೀಡಿರುತ್ತಾರೆ.
(ವರದಿ : ಉಲ್ಲಾಸ್ ಕಜ್ಜೋಡಿ)