ಸುಳ್ಯದಲ್ಲಿ ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 5ನೇ ಶಾಖೆಯು ಸುಳ್ಯದ ಮುಖ್ಯರಸ್ತೆಯಲ್ಲಿರುವ ರಾಜಾರಾಮ್ ಕಾಂಪ್ಲೆಕ್ಸ್‌ನಲ್ಲಿ ಡಿ.8ರಂದು ಶುಭಾರಂಭಗೊಳ್ಳಲಿದ್ದು ಆ ಪ್ರಯುಕ್ತ ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಡಿ.3ರಂದು ನಡೆಸಲಾಯಿತು.
ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್‌ರವರು ಮಾತನಾಡಿ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ಕಳೆದ 21 ವರ್ಷಗಳಿಂದ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು 4 ಶಾಖೆಗಳನ್ನು ಹೊಂದಿದೆ. ಪ್ರಧಾನ ಕಚೇರಿಯನ್ನು ಪುತ್ತೂರಿನಲ್ಲಿ ವ್ಯವಹರಿಸುತ್ತಿದೆ. ಮಂಗಳೂರು, ಕಡಬ, ಕೊಕ್ಕಡದಲ್ಲಿ ಶಾಖೆಯಿದ್ದು ೫ನೇ ಶಾಖೆಯನ್ನು ಸುಳ್ಯದಲ್ಲಿ ಪ್ರಾರಂಭಿಸುತ್ತಿದ್ದೇವೆ. ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಹೊಂದಿದ್ದು ವರ್ಷದಿಂದ ವರ್ಷಕ್ಕೆ ಪ್ರಗತಿ ಪಥವನ್ನು ಮುಂದುವರಿಸಿಕೊಂಡು ಬಂದಿರುವುದಾಗಿ ತಿಳಿಸಿದರು.
ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭವು ಬೆಳಗ್ಗೆ ಗಂಟೆ 9.೦೦ ನಡೆಯಲಿದ್ದು, ಮೀನುಗಾರಿಕೆ ಬಂದರು ಒಳನಾಡು ಜಲ ಸಾರಿಗೆ ಸಚಿವರು, ಸುಳ್ಯ ಶಾಸಕರಾದ ಎಸ್.ಅಂಗಾರರವರು ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಕೆ, ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್ ರಮೇಶ್, ಹಿರಿಯ ಸಹಕಾರಿಗಳು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪಿ.ಬಿ ದಿವಾಕರ ರೈ ಪೆರಾಜೆ, ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈ ಬೆಳ್ಳಾರೆ, ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನೀಲಮ್, ಉದ್ಯಮಿ ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಲಯನ್ ಎಂ.ಬಿ ಸದಾಶಿವ, ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎಂ ಬಾಪು ಸಾಹೇಬ್, ಸುಳ್ಯ ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಹಾಜಿ ಎಸ್ ಆದಂ ಕುಂಞಿ ಕಮ್ಮಾಡಿ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕನ್ಸಲ್ಟಿಂಗ್ಸ್ ಇಂಜಿನಿಯರ್ ಕೃಷ್ಣರಾವ್ ನಾವೂರು, ಪರಿವಾರ ಬಂಟರ ಸಂಘ ಸುಳ್ಯ ವಲಯದ ಅಧ್ಯಕ್ಷ ಪಿ.ಕೆ ವಿಠಲ ನಾಕ್ ದೋಣಿಮೂಲೆ ಉಪಸ್ಥಿತರಿರುತ್ತಾರೆ ಎಂದು ನಿರ್ದೇಶಕ ರತ್ನಾಕರ ನಾಯ್ಕ್ ವಿವರ ನೀಡಿದರು.
ಬೆಳಗ್ಗೆ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹವನವಾಗಿ ಬಳಿಕ ಕಚೇರಿಯ ಉದ್ಘಾಟನೆಯು ನಡೆಯಲಿದ್ದು ಸಭಾ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾಮಂದಿರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನೂತನ ಠೇವಣಿ ಪತ್ರಗಳ ಬಿಡುಗಡೆ, ನೂತನ ಉಳಿತಾಯ ಖಾತೆಗಳ ಬಿಡುಗಡೆ, ಸಾಲ ಪತ್ರಗಳ ಬಿಡುಗಡೆಯನ್ನು ಅತಿಥಿಗಳು ನೆರವೇರಿಸಲಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸೀತಾರಾಮ ರೈ ಸವಣೂರು ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು. ಸಂಸ್ಥೆಯಲ್ಲಿ ಆಕರ್ಷಕ ಬಡ್ಡಿಯೊಂದಿಗೆ ವಿವಿಧ ಠೇವಣಿಗಳನ್ನು ಸ್ವೀಕರಿಸಲಾಗುವುದು. ಅಲ್ಲದೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ದೊರಕುವುದು. ಸುಳ್ಯ ಶಾಖೆಯ ಶುಭಾರಂಭದ ಪ್ರಯುಕ್ತ ಠೇವಣಿಗಳ ಮೇಲೆ ವಿಶೇಷ ವಾದ ಕೊಡುಗೆಗಳನ್ನು ನೀಡಲಾಗುತ್ತಿದೆ. ಡಿ.31ರ ಒಳಗೆ ಒಂದು ವರ್ಷಕ್ಕೆ ಮೇಲ್ಪಟ್ಟ ಠೇವಣಿಗಳಿಗೆ ಶೇ.9% ಹಾಗೂ 60ಲ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ.9.5% ಬಡ್ಡಿ ನೀಡಲಾಗುವುದು. ಕಳೆದ ಅವಧಿಯಲ್ಲಿ 2021-22ಸಾಲಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಪುತ್ಥೂರು ಕೇಂದ್ರ ಕಚೇರಿಯಲ್ಲಿ ಶೆ.14% ಡಿವಿಡೆಂಟ್ ಸದಸ್ಯರಿಗೆ ವಿತರಿಸಲಾಗಿದೆ. ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ ಒಟ್ಟು 114.39 ಕೋಟಿ ವ್ಯವಹಾರ ನಡಯುತ್ತಿದ್ದು 2021-22ನೇ ಸಾಲಿನಲ್ಲಿ 45.93 ಲಕ್ಷ ಲಾಭಾಂಶ ಬಂದಿರುತ್ತದೆ ಎಂದು ಕೇಂದ್ರ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿಯವರು ವಿವರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ರಘುನಾಥ್ ನಾಯ್ಕ್, ಕೊಡಂಗೆ ಬಾಲಕೃಷ್ಣ ನಾಯ್ಕ್, ಸುಳ್ಯ ಸಲಹಾ ಸಮಿತಿ ಅಧ್ಯಕ್ಷ ಸತ್ಯಕುಮಾರ್ ಆಡಿಂಜ ಉಪಸ್ಥಿತರಿದ್ದರು.
- Saturday
- November 23rd, 2024