ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಘಟಕ, ಸಮ್ಮೇಳನ ಸ್ವಾಗತ ಸಮಿತಿಯ ಆಶ್ರಯದಲ್ಲಿ ಸುಳ್ಯ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.10ರಂದು ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಸಜ್ಜನ ಸಭಾಭವನದಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಸಭಾಂಗಣದ ಪ್ರೋ. ನಿಸಾರ್ ಅಹಮದ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸಾಹಿತಿ ಕೆ. ಆರ್. ಗಂಗಾಧರ್ ವಹಿಸಲಿದ್ದು, ಸಮ್ಮೇಳನವನ್ನು ಹಿರಿಯ ವಿಮರ್ಶಕರಾದ ವಿಜಯಶಂಕರ ಉದ್ಘಾಟಿಸಲಿದ್ದಾರೆ. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ಹೊಸ ಕೃತಿಗಳನ್ನು ಬಿಡುಗಡೆ ಮಾಡುವರು. ಬೆಳಿಗ್ಗೆ ೮.೪೫ಕ್ಕೆ ಗೂನಡ್ಕ ದೊಡ್ಡಡ್ಕಬೈಲೆ ರಸ್ತೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಂಗಾಜೆ ಚಾಲನೆ ನೀಡಲಿದ್ದಾರೆ. ಧ್ವಜಾರೋಹಣವನ್ನು ಸಂಪಾಜೆ ಗ್ರಾ. ಪಂ. ಅಧ್ಯಕ್ಷ ಜಿ. ಕೆ. ಹಮೀದ್, ಪರಿಷತ್ ನ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀ ನಾಥ್ ಮತ್ತು ಕನ್ನಡ ಧ್ವಜಾರೋಹಣವನ್ನು ಕಸಾಪ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲ್ ನೆರವೇರಿಸಲಿದ್ದಾರೆ. ವಸ್ತು ಪ್ರದರ್ಶನವನ್ನು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಪುಸ್ತಕ ಪ್ರದರ್ಶನವನ್ನು ತಹಶೀಲ್ದಾರ್ ಅನಿತಾಲಕ್ಷ್ಮಿ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಭಾಗವಹಿಸಲಿದ್ದಾರೆ. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ಪೂವಪ್ಪ ಕಣಿಯೂರು ಮಾತನಾಡಲಿದ್ದಾರೆ. ಉದ್ಘಾಟನೆಯ ಬಳಿಕ ಕವಿಗೋಷ್ಟಿಯಲ್ಲಿ ಎಂಟು ಮಂದಿ ಕವಿಗಳು ಭಾಗವಹಿಸಲಿದ್ದು, ಲೀಲಾ ದಾಮೋದರ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಕನ್ನಡ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಬಳಿಕ ಅಗಲಿದ ಸಾಹಿತಿಗಳಾದ ಟಿ. ಜಿ. ಮುಡೂರು, ಕೋಡಿ ಕುಶಾಲಪ್ಪ ಗೌಡ ಮತ್ತು ಎನ್. ಎಸ್. ದೇವಿಪ್ರಸಾದ್ ಸಂಪಾಜೆ ಇವರಿಗೆ ಡಾ.ಸುಂದರ ಕೇನಾಜೆ ಇವರು ನುಡಿನಮನ ಸಲ್ಲಿಸಲಿದ್ದಾರೆ. ಬಳಿಕ ‘ನಾಡು ನುಡಿ ವರ್ತಮಾನದ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಅಡಿಕೆ ಪತ್ರಿಕೆಯ ಸಂಪಾದಕರಾದ ಶ್ರೀ ಪಡ್ರೆ ವಹಿಸಲಿದ್ದಾರೆ. ಸಂಗೀತಾ ರವಿರಾಜ್ ಮತ್ತು ಗೋಪಾಲ್ ಪೆರಾಜೆ ವಿಚಾರ ಮಂಡನೆ ಮಾಡಲಿದ್ದಾರೆ. 4.30ರಿಂದ ಸಮಾರೋಪ ಸಮಾರಂಭ ಮತ್ತು ಕನ್ನಡ ಕಸ್ತೂರಿ ಸನ್ಮಾನ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿ?ತ್ತು ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮಕುಂಜೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ ಕುಂಬ್ಳೆ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತೇಜಕುಮಾರ್ ಬಡ್ಡಡ್ಕ- ಸಾಹಿತ್ಯ, ಸತೀಶ್ ಡಿ. ವಿ.- ಉದ್ಯಮ, ಬಾಲಕೃಷ್ಣ – ಕ್ರೀಡೆ, ಪಿ ಬಿ ಪ್ರಭಾಕರ ರೈ- ಕೃಷಿ, ಡಾ. ತಾಜುದ್ದೀನ್ – ವೈದ್ಯಕೀಯ, ಸುಬ್ರಾಯ ಪಾಟಳಿ ಯಕ್ಷಗಾನ, ಕುಸುಮಾವತಿ ಯು. ಬಿ.- ಶಿಕ್ಷಣ, ಬಾಲಕೃಷ್ಣ ನಾಯರ್ ಯಕ್ಷಗುರು, ಕೆ ಟಿ. ವಿಶ್ವನಾಥ – ಸಂಘಟನೆ, ಡಾ. ವಿಜಯಲಕ್ಷ್ಮಿ ಕರುವಜೆ – ನಾಟಿ ವೈದ್ಯೆ , ಕೃಷ್ಣಬೆಟ್ಟ – ಪತ್ರಿಕೋದ್ಯಮ, ಮತ್ತು ನಾರಾಯಣ ಪರವ ಬಾಳಿಲ ದೈವನರ್ತನ ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕನ್ನಡ ಕಸ್ತೂರಿ ಸನ್ಮಾನವನ್ನು ನೀಡಿ ಗೌರವಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ ಎನ್. ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಪ್ರಸಾದ ತುದಿಯಡ್ಕ ಮತ್ತು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಅಧ್ಯಕ್ಷ ಟಿ ಎಂ. ಶಹೀದ್ ತೆಕ್ಕಿಲ್ ಇವರ ಗೌರವ ಉಪಸ್ಥಿತರಾಗಿದ್ದವರು. ಬಳಿಕ ರಂಗ ಮಯೂರಿ ಕಲಾ ಶಾಲೆ ಸುಳ್ಯ ಪ್ರಸ್ತುತ ಪಡಿಸುವ ವಿಶ್ವಮಾನವ ರಂಗರೂಪಕ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಸಾಹಿತ್ಯ ಪರಿಷತ್‌ನ ಪದಾದಕಾರಿಗಳಾದ ತೇಜಶ್ವಿ ಕಡಪಳ, ಕೇಶವ ಮಾಸ್ತರ್, ಲತಾಶ್ರೀ ಸುಪ್ರೀತ್ ಮೋಂಟಡ್ಕ, ದಯಾನಂದ ಆಳ್ವ ಉಪಸ್ಥಿತರಿದ್ದರು.
- Saturday
- November 23rd, 2024