Ad Widget

ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ; ಸಂಪತ್ತಿನ ಔನತ್ಯಕ್ಕೆ ವಿದ್ಯೆ ರಹದಾರಿ – ಡಾ.ನಿಂಗಯ್ಯ ಅಭಿಮತ

. . . . . . .

ಶಿಸ್ತುಬದ್ದವಾದ ಜೀವನ ನಿರ್ವಹಣೆಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣವು ಮಾನವನಿಗೆ ಇರುವ ಶ್ರೇಷ್ಠ ಕೊಡುಗೆ, ಅದನ್ನು ನೀಡುವ ಉತ್ಕೃಷ್ಠ ಕೈಂಕರ್ಯವನ್ನು ಶಿಕ್ಷಣವು ಮಾಡುತ್ತದೆ. ವಿದ್ಯೆಗೆ ಸರಿಸಾಟಿ ಯಾವುದೂ ಇಲ್ಲ. ಸುಧಾರಿತ ಮತ್ತು ಕ್ರೋಢೀಕೃತವಾದ ಸಂಸ್ಕೃತಿಯನ್ನು ವಿದ್ಯೆ ಒದಗಿಸುತ್ತದೆ. ಹಿಂದಿನ ವಿಚಾರಧಾರೆಗಳು ಇಂದಿಗೂ ಪ್ರಸ್ತುವಾಗಿ ಸರ್ವರಿಗೂ ಒದಗುತ್ತಿರಲು ಮಾನವನ ವಿದ್ಯಾ ಸಂಪತ್ತು ಪೂರಕವಾಗಿದೆ. ಸಂಸ್ಕಾರ ಸಂಪತ್ತಿನ ಔನತ್ಯಕ್ಕೆ ವಿದ್ಯೆ ರಹದಾರಿಯನ್ನು ಒದಗಿಸುತ್ತದೆ. ವ್ಯವಸ್ಥಿತವಾದ ಜ್ಞಾನವನ್ನು ನೀಡುವ ಶಿಕ್ಷಣವು ಜೀವಿತಾವಧಿಯ ಶ್ರೇಷ್ಠ ಕೊಡುಗೆಯಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ವಿದಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆದರ್ಶಯುತ ಯುವ ಜನಾಂಗವನ್ನು ನಿರ್ಮಾಣ ಮಾಡುವ ಶ್ರೇಷ್ಠ ಕೈಂಕರ್ಯವನ್ನು ವಿದ್ಯೆ ನೆರವೇರಿಸುತ್ತಿದೆ.ಭಾರತ ಅತ್ಯಧಿಕ ಯುವ ಸಂಪತ್ತನ್ನು ಹೊಂದಿದೆ ಎಂದರು.
ಕೆ.ಎಸ್.ಎಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಗೋವಿಂದ ಎನ್.ಎಸ್ ದಿಕ್ಸೂಚಿ ಭಾಷಣ ಮಾಡಿದರು.ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ರೈ, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನೀಲಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಹಿರಿಯ ಉಪನ್ಯಾಸಕರುಗಳಾದ ಜಯಶ್ರೀ.ವಿ.ದಂಬೆಕೋಡಿ, ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ನಾಯಕರುಗಳಾದ ಸಂಜನಾ ಎನ್.ಎಸ್, ಭಾನುಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದಾಯ ಸನ್ಮಾನ:
ಕಳೆದ ೩೯ ವರ್ಷಗಳಿಂದ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಶ್ವನಾಥ ನಡುತೋಟ, ಕಳೆದ ೩೧ ವರ್ಷಗಳಿಂದ ವಿದ್ಯಾಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕುಸುಮಾಧರ ಕಮಿಲ ಮತ್ತು ಕಳೆದ ೩೯ ವರ್ಷಗಳಿಂದ ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರವಿರಾಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರಿಗೆ ಶ್ರೀ ದೇವಳದಿಂದ ಬೆಳ್ಳಿಯ ಪೊಟೋ, ವಿದ್ಯಾಲಯದಿಂದ ಚಿನ್ನದ ದೇವರ ಪೋಟೋ, ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘ, ವಿದ್ಯಾರ್ಥಿ ಸಂಘ ಸೇರಿದಂತೆ ಐದು ವಿಭಾಗದಿಂದ ಶಾಲು,ಹಾರ, ಫಲ, ಸ್ಮರಣಿಕೆ ಮತ್ತು ಸನ್ಮಾನಪತ್ರ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ೮೫%ಕ್ಕಿಂತ ಅಧಿಕ ಅಂಕ ಪಡೆದ ೭೦ ವಿದ್ಯಾರ್ಥಿಗಳನ್ನು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಗಳಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 100% ಅಂಕ ಪಡೆದ ವಿದ್ಯಾರ್ಥಿಗಳನ್ನು, 100% ಫಲಿತಾಂಶ ತಂದುಕೊಟ್ಟ ಉಪನ್ಯಾಸಕರನ್ನು ಹಾಗೂ ಶಿಕ್ಷಕರನ್ನು, ವಿದ್ಯಾರ್ಥಿಗಳು 100 ಅಂಕ ಪಡೆದ ವಿಷಯವನ್ನು ಬೋಧಿಸಿದ ಉಪನ್ಯಾಸಕರುಗಳನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ ನೀಡಲಾಯಿತು. ಈ ಮೊದಲು ಪ್ರಾಧ್ಯಾಪಕ ಡಾ.ಗೋವಿಂದ ಎನ್.ಎಸ್ ಧ್ವಜಾರೋಹಣ ನೆರವೇರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!