ಭಾಷೆ ಮೇಲೆ ಆತಂಕ ಇರಬಾರದು ಎಲ್ಲಾ ಭಾಷೆಗಳಿಗೆ ತನ್ನದೆಯಾದ ಹಿಡಿತ ಇರುತ್ತದೆ. ಬೆಂಗಳೂರಿಗೆ ಬಂದರೂ ಸಂಸ್ಕೃತಿ ಮರೆಯಾಗದಿರಲಿ ಎಂದು ಇಂತಹ ಸಂಸ್ಥೆಗಳು ಹುಟ್ಟಿಕೊಂಡಿದೆ ಎಂದು ಕರ್ನಾಟಕ ಸರ್ಕಾರದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಹೇಳಿದರು.
ಅವರು ಬೆಂಗಳೂರು ಪ್ಯಾಲೆಸ್ ಅಡ್ಡ ರಸ್ತೆಯಲ್ಲಿ ಡಿ. 4 ರಂದು ನಡೆದ ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇದರ ವತಿಯಿಂದ ದೀಪಾವಳಿ (ಬಲೀಂದ್ರ) ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಮನೋಧರ್ಮ ಬದಲಾಗುತ್ತಿದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ನೆನಪಿಸಲು ಇಂತಹ ವೇದಿಕೆ ಸಹಕಾರಿಯಾಗಿದೆ. ಅದಲ್ಲದೆ ಬದಲಾದ ಕಾಲದಲ್ಲಿ ಸಂಸ್ಕೃತಿಯು ಬದಲಾಗುತ್ತಿದ್ದು ನಾವೇಲ್ಲರೂ ನಮ್ಮ ನಮ್ಮ ಪದ್ಧತಿಯನ್ನು ಉಳಿಸಿಕೊಳ್ಳಬೇಕೆಂದ ಅವರು ಆಡಳಿತ ಮತ್ತು ಸಂಸ್ಕೃತಿ ಕ್ಷೇತ್ರದಲ್ಲೂ ನಮ್ಮ ಸಮುದಾಯ ಮುಂದೆ ಬರಲಿ ಎಂದು ಹೇಳಿದರು.
ಕಾರ್ಯದರ್ಶಿ ನಾರಾಯಣ .ಬಿ ಪ್ರಾಸ್ತಾವಿಕ ಮಾತನಾಡಿ, 17 ವರ್ಷಗಳಿಂದ ಬಲೀಂದ್ರ ಪೂಜೆ ಮಾಡಿಕೊಂಡು ಬರುತ್ತಿದ್ದು ಹಲವಾರು ಗೌಡ ಗಣ್ಯರನ್ನು ಗೌರವಿಸಿದ ಹೆಮ್ಮೆ ಇದೆ. ದಕ್ಷಿಣ ಕನ್ನಡ ದಿಂದ ನೆಲೆಸಿದವರಿಗೆ ಸ್ವಂತ ಕಟ್ಟಡ ಮಾಡುವ ನಿರೀಕ್ಷೆಯಲ್ಲಿದ್ದೇವೆ ಎಲ್ಲರೂ ಸಹಕರಿಸಿ ಮುಂದಿನ ಬಲೀಂದ್ರ ಪೂಜೆ ಮಾಡುವಂತಾಗಲಿ ಎಂದರು. ಕೆಎಸ್ ಐಎಸ್ ಹುದ್ದೆಯಲ್ಲಿ ದಕ್ಷಿಣ ಕನ್ನಡ ಗೌಡರಿಲ್ಲ ಹಾಗಾಗಿ ನಮ್ಮ ಪೀಳಿಗೆಗೆ ಪ್ರೋತ್ಸಾಹ ಕೊಡಬೇಕು, ಮಕ್ಕಳಲ್ಲಿ ಬಡತನದ ಅರಿವು ಮೂಡಿಸಬೇಕು ಎಂದರು.
ವಿಧಾನ ಸಭೆಯ ಮಾಜಿ ಕಾರ್ಯದರ್ಶಿ, ಸಂಘದ ಉಪಾಧ್ಯಕ್ಷ ಓಂ ಪ್ರಕಾಶ್ ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಸ್ಕೃತಿ ಬೆಳೆಸಲು ನಮ್ಮ ಸಮುದಾಯವನ್ನು ಬೆಳೆಸಬೇಕು ಮುಂದೆಯೂ ಸಮುದಾಯದ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದರು.
ಈ ವೇಳೆ ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಸಿಂಗರ್ ಜ್ಞಾನ ಹಾಗೂ ಡ್ರಾಮ ಜ್ಯೂನಿಯರ್ ಸ್ಪರ್ಧಿಯಾಗಿದ್ದ ತುಷಾರ್ ಗೌಡ, ಬೀಜ ತಳಿ ಸಂಶೋಧಕ ಶಿವಪ್ಪ ಗೌಡ ಇವರುಗಳಿಗೆ ಸನ್ಮಾನ ನಡೆಯಿತು. ಕೆ.ವಿ. ಪ್ರೇಕ್ಷ, ಮಾನೀಶ್ ಪೆರ್ಲ, ಹಿತಾ ಇವರುಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ವೇದಿಕೆಯಲ್ಲಿ ಆಡಳಿತದ ಮಾಜಿ ಅಧ್ಯಕ್ಷ ನಳಿನಾಕ್ಷ ಬೋಜಾರ ಉಪಸ್ಥಿತರಿದ್ದರು.
ಸದಸ್ಯ ಲಕ್ಷ್ಮೀ ನಾರಾಯಣ ಸಿ. ಎಚ್. ಸ್ವಾಗತಿಸಿ, ಖಜಾಂಚಿ ಪುರುಷೋತ್ತಮ ವಂದಿಸಿದರು.