ತೋಟಗಾರಿಕೆ ಇಲಾಖೆ ಸುಳ್ಯ, ಸುಳ್ಯ ರೈತ ಉತ್ಪಾದಕ ಕಂಪನಿ ನಿಯಮಿತ, ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಮರ್ಕಂಜ ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯಲ್ಲಿ ಅಡಿಕೆಯಲ್ಲಿ ರೋಗ ನಿವಾರಣೆ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮ ನವೆಂಬರ್ 25 ರಂದು ಸಿ ಎ ಬ್ಯಾಂಕ್ ಸಭಾಭವನ ಮರ್ಕಂಜ ಇಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪವಿತ್ರ ಬಿ ರವರು ಅಧ್ಯಕ್ಷತೆಯನ್ನು ವಹಿಸಿದರು, ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ದೇರಂಪ್ಪಾಡಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ವೀರಪ್ಪಗೌಡ ಕಣ್ಕಲ್ ಮತ್ತು ಗೋವಿಂದ ಎ ಉಪಾಧ್ಯಕ್ಷರು ಮರ್ಕಂಜ ಗ್ರಾಮ ಪಂಚಾಯತ್ ರವರು ಆಗಮಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಸಿ ಪಿ ಸಿ ಆರ್ ಐ ವಿಟ್ಲದ ವಿಜ್ಞಾನಿಯಾದ ಡಾ|. ನಾಗರಾಜ್ ರವರು ಆಗಮಿಸಿ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸುಹಾನ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು
ಸುಳ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರಾದ ಅಮೃತ್ ಕುಮಾರ್ ರೈ ಅವರು ಸ್ವಾಗತಿಸಿದರು, ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರಾದ ಜಯರಾಮ ಮುಂಡೋಳಿ ಮೂಲೆ, ಭಾಸ್ಕರ ನಾಯರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕೆ ಕೊಡಿಯಾಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜಾರಿ, ರೈತ ಉತ್ಪಾದಕ ಸಂಸ್ಥೆಯ ಕೀರ್ತನ್ ಹಾಗೂ ನೂರಕ್ಕೂ ಹೆಚ್ಚು ರೈತರುಗಳು ಭಾಗವಹಿಸಿದ್ದರು.