
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ವತಿಯಿಂದ ಡಿ.01 ರಿಂದ ಡಿ.15 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಉಚಿತ ಯೋಗ ಶಿಬಿರ ನಡೆಯಲಿದ್ದು, ಇಂದು(ಡಿ.01) ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಅವರು ಯೋಗ ಶಿಬಿರವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಲ. ಪ್ರೋ ರಂಗಯ್ಯ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಖಜಾಂಜಿ ಲ.ರಾಮಚಂದ್ರ ಪಳಂಗಾಯ ಎಂ.ಜೆ.ಎಫ್, ಲ.ರೇಗನ್ ಶೆಟ್ಚಿಯಡ್ಕ, ಕಾರ್ಯದರ್ಶಿ ಲ.ಸತೀಶ್ ಕೂಜುಗೋಡು, ಜೊತೆ ಕಾರ್ಯದರ್ಶಿ ಲ.ವಿಮಲಾ ರಂಗಯ್ಯ, ಸದಸ್ಯರಾದ ಲ.ಮೋಹನ್ ದಾಸ್ ರೈ, ತಾರಾ ಮಲ್ಲಾರ ಹಾಗೂ ಅಯ್ಯಪ್ಪ ಸ್ವಾಮಿ ವೃತಾಧಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.