Ad Widget

ದೊಡ್ಡತೋಟ : ಜನಜಾಗೃತಿ ವೇದಿಕೆಯ ಸಭೆ

. . . . . . . . .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ದೊಡ್ಡತೋಟ ವಲಯದ ಜನಜಾಗೃತಿ ವೇದಿಕೆಯ ಸಭೆಯು ಅಮರ ಪಡ್ನೂರು ಹಾಲು ಉತ್ಪಾದಕರ ಸಭಾಭವನದಲ್ಲಿ ಡಿ.02 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜನಜಾಗೃತಿ ವಲಯದ ಅಧ್ಯಕ್ಷರಾದ ರಾಜಾರಾಮ್ ಬೆಟ್ಟ ವಹಿಸಿ “ಕಳೆದ 3 ವರ್ಷಗಳಿಂದ ವಲಯ ಅಧ್ಯಕ್ಷನಾಗಿ ವಲಯದಲ್ಲಿ ಉತ್ತಮ ಸಹಕಾರ ನೀಡಿರುತ್ತೀರಿ ಹಾಗೂ ಪ್ರತೀ ಕಾರ್ಯಕ್ರಮದಲ್ಲಿಯೂ ತಾನು ನನ್ನನ್ನು ತೊಡಗಿಸಿಕೊಂಡಿದ್ದೇನೆ ಮುಂದಿನ ಅಧ್ಯಕ್ಷರಿಗೂ ನಿಮ್ಮೆಲ್ಲರ ಸಹಕಾರ ಇರಲಿ” ಎಂದು ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಿಶ್ವನಾಥ್ ರೈ ಕಳಂಜ ಹಾಗೂ ದೊಡ್ಡತೋಟ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಸೀತಾರಾಮ ಕಾನಾವು ಅವರು ಮಾಹಿತಿ ನೀಡುತ್ತಾ ಕಾರ್ಯಕ್ರಮದ ಬಗ್ಗೆ, ವಲಯ ಅಧ್ಯಕ್ಷರ ಆಯ್ಕೆ, ಕೇಂದ್ರ ಒಕ್ಕೂಟ ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನೂತನ ಜನಜಾಗೃತಿ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಬೊಳ್ಳೂರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಹಾಗೂ ಸಮಿತಿಯ ಸದಸ್ಯರುಗಳಾಗಿ ವೇಣುಗೋಪಾಲ್ ಪುಣ್ಕುಟ್ಟಿ, ವಿಜಯಕುಮಾರ್ ಉಬರಡ್ಕ, ರುಕ್ಮಯ್ಯ ಗೌಡ ಕಳಂಜ, ಮೋಹನ್ ತಂಟೆಪ್ಪಾಡಿ, ತೇಜಸ್ವಿ ಕಡಪಲ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ದೊಡ್ಡತೋಟ ವಲಯದ ಒಕ್ಕೂಟ ಅಧ್ಯಕ್ಷರುಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸದಸ್ಯರುಗಳು, ನವಜೀವನ ಸಮಿತಿಯ ಸದಸ್ಯರುಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಚಂದ್ರಪ್ರಕಾಶ್ ಸ್ವಾಗತಿಸಿ ಹರ್ಷಿತಾ ಕಾರ್ಯಕ್ರಮ ನಿರೂಪಣೆ ಮಾಡಿದರು. ವಲಯ ಅಧ್ಯಕ್ಷರಾದ ನಾರಾಯಣ ಕಳೆಂಜ ವಂದನಾರ್ಪಣೆ ಮಾಡಿದರು.
(ವರದಿ : ಉಲ್ಲಾಸ್ ಕಜ್ಜೋಡಿ)

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading