ಸುಳ್ಯದಲ್ಲಿ ಡಿ.16, 17 ಮತ್ತು 18ರಂದು ಬೃಹತ್ ಕೃಷಿ ಮೇಳ ನಡೆಯಲಿದ್ದು ಸಿದ್ಧತೆಗಳ ಅವಲೋಕನಕ್ಕಾಗಿ ಪೂರ್ವ ಭಾವಿ ಸಭೆಯು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು.
ಕೃಷಿ ಮೇಳದ ಅಧ್ಯಕ್ಷತೆಯನ್ನು ಪ್ರಣವ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್‌ರ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕಾರ್ಯಕ್ರಮದ ರೂಪುರೇಷೆ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ಕೃಷಿ ಮೇಳದ ವಿವಿಧ ಸಮಿತಿಗಳ ಸಂಚಾಲಕರುಗಳಾದ ಸೋಮಪ್ಪ ನಾಯ್ಕ ಶರತ್ ಕುಮಾರ್, ಡಾ.ಎನ್.ಎ. ಜ್ಞಾನೇಶ್, ಸಂತೋಷ್ ಜಾಕೆ, ಗುರುದತ್ ನಾಯಕ್, ಸಂತೋಷ್ ಕುತ್ತಮೊಟ್ಟೆ, ದಿನೇಶ್ ಮಡಪ್ಪಾಡಿ, ರಜತ್ ಅಡ್ಯಾರ್, ಪಿ.ಎಸ್.ಗಂಗಾಧರ್, ಲೋಕೇಶ್ ಊರುಬೈಲು, ಜಯರಾಮ ಮುಂಡೋಳಿಮೂಲೆ, ಯಶ್ಚಿತ್ ಕಾಳಮ್ಮನೆ, ರಂಗನಾಥ್ ಪಿ.ಎಂ., ದೊಡ್ಡಣ್ಣ ಬರೆಮೇಲು, ಶೈಲೇಶ್ ಅಂಬೆಕಲ್ಲು, ದೀಪಕ್ ಕುತ್ತಮೊಟ್ಟೆ, ಹರೀಶ್ ರೈ ಉಬರಡ್ಕ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರು ಕೃಷಿ ಮೇಳದ ಯಶಸ್ಸಿಗಾಗಿ ಮಾಡಿಕೊಂಡಿರುವ ಸಿದ್ಧತೆಯ ಕುರಿತು ವಿವರ ನೀಡಿದರು. ರೈತ ಉತ್ಪಾದಕ ಸಮಿತಿಯ ಅಧ್ಯಕ್ಷ ವೀರಪ್ಪ ಗೌಡ ಕಣಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಣವ ಸಹಕಾರ ಸಂಘದ ರಂಜಿತ್ ಅಡ್ತಲೆ ಸಹಕರಿಸಿದರು.
- Friday
- November 1st, 2024