ಇದು ಮೆಸ್ಕಾಂ ಕಛೇರಿ ಎದುರು ಇರುವ ತಿರುವಿನಲ್ಲಿರುವ ಕಂಬ, ಈ ರಸ್ತೆಯಲ್ಲಿ ಕೆ.ವಿ.ಜಿ. ವಿದ್ಯಾ ಸಂಸ್ಥೆಗೆ ನೂರಾರು ವಿದ್ಯಾರ್ಥಿಗಳು, ಮೆಸ್ಕಾಂ,ತಾಲ್ಲೂಕು ಕಚೇರಿ ಹಾಗೂ ಪೋಲೀಸ್ ವೃತ್ತ ನಿರೀಕ್ಷರ ಕಛೇರಿಗೆ ಬರುವ ಜನರು, ತಹಶೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇದಕ್ಕೆ ಸಂಬಂಧ ಪಟ್ಟ ಮೆಸ್ಕಾಂ ಹಾಗೂ ನಗರ ಪಂಚಾಯಿತಿಯ ಅಧಿಕಾರಿಗಳು ರಸ್ತೆಗೆ ತಾಗಿಕೊಂಡಿರುವ ಈ ಅತ್ಯಂತ ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸಲು ಪ್ರಯತ್ನಿಸದಿರುವುದು ವಿಪರ್ಯಾಸ.
ಸುಳ್ಯ ತಾಲೂಕಿನ ಆಡಳಿತ, ಅಧಿಕಾರಿ ವರ್ಗ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ನಿತ್ಯ ಓಡಾಡುವ ಸ್ಥಳದಲ್ಲಿ ಇಂತಹ ಒಂದು ಜೀವ ಪಡೆಯಲು ಕಾದು ನಿಂತ ಅಪಾಯಕಾರಿ ವಿದ್ಯುತ್ ಕಂಬ ಇದ್ದರೂ, ಕಣ್ಣಿದ್ದು ಕುರುಡರಂತೆ ಹೋಗುವ ಇವರೆಲ್ಲ ಸುಳ್ಯದ ಅಭಿವೃದ್ಧಿ ಮಾಡುವುದು ಸುವ್ಯವಸ್ಥೆ ಕಾಪಾಡುವುದು ಮರೀಚಿಕೆಯೇ ? ಹಾಗಿದ್ದರೆ ಇಲ್ಲಿ ನಿತ್ಯ ಸಾವಿರಾರು ಜನರು ಓಡಾಡುತ್ತಾರೆ ಇಲ್ಲಿ ನರ ಬಲಿ ಆಗಲೇಬೇಕಾ. ಅದಕ್ಕಿಂತ ಮೊದಲು ಈ ವಿದ್ಯುತ್ ಕಂಬದ ತೆರವು ಮಾಡಲು ಸಾಧ್ಯವೇ ಇಲ್ಲವೇ. ಯಾವುದಾದರೂ ಅಪಘಾತ ಆಗಿ ಜೀವ ಹೋದರೆ ಹೊಣೆ ಯಾರು..? ವಿದ್ಯುತ್ ಇಲಾಖೆಯ? , ನಗರ ಪಂಚಾಯತಾ? ಇದಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಜನಪ್ರತಿನಿಧಿಗಳು ಉತ್ತರಿಸಿ ಇಲ್ಲವೇ ತೆರವುಗೊಳಿಸಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
- Sunday
- November 24th, 2024