
ಕುಡಿದು ಜೀಪು ಚಲಾಯಿಸಿದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಾಗೂ ಕಾರಿಗೆ ಡಿಕ್ಕಿಯಾಗಿ ವಾಹನಗಳು ಜಖಂಗೊಂಡ ಘಟನೆ ಅಂಬಟೆಡ್ಕ ಬಳಿ ಇಂದು ರಾತ್ರಿ ನಡೆದಿದೆ.
ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಾಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಗುದ್ದಿದೆ. ನಂತರ ಅಲ್ಲಿಂದ ಅಂಬಟಡ್ಕಲ್ಲಿರುವ ನವರತ್ನ ಹೊಟೇಲ್ ಎದುರು ನಿಲ್ಲಿಸಿದ್ದ ಗ್ರಾಹಕರ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ. ಮಂಡೆಕೋಲಿನ ಜೀಪು ಚಾಲಕ ವಿಪರೀತ ಕುಡಿದು ಜೀಪು ಚಲಾಯಿಸುತ್ತಿದ್ದುದು ಈ ಅವಾಂತರ ಕಾರಣವೆನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಚಾಲಕನ ವಶಕ್ಕೆ ಪಡೆದಿದ್ದಾರೆ.