

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿನ್ನದ ಪದಕ ಪುರಸ್ಕೃತ ಚಾಲಕ ಸೂರಪ್ಪ ಗೌಡ ಆಲೇಕಿ ನ.30ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಸುದೀರ್ಘ 28 ವರ್ಷಗಳ ಕಾಲ ಅಪಘಾತ ರಹಿತ ಸೇವೆ ಸಲ್ಲಿಸಿದ ಇವರಿಗೆ 2006ರಲ್ಲಿ ಕರ್ನಾಟಕ ಸರಕಾರ ಬೆಳ್ಳಿಯ ಪದಕ ಹಾಗೂ ನಗದು ಬಹುಮಾನ ನೀಡಿದೆ. 2015ರಲ್ಲಿ ಇವರ ಅತ್ಯುತ್ತಮ ಚಾಲನೆಗೆ ಜೆಸಿಐ ಪುತ್ತೂರು ನಗದು ಪುರಸ್ಕಾರ ನೀಡಿ ಗೌರವಿಸಿದೆ. 2016ರಲ್ಲಿ ಮತ್ತೆ ಕರ್ನಾಟಕ ಸರಕಾರ ಇವರ ಅಪಘಾತ ರಹಿತ ಚಾಲನೆಗಾಗಿ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಿದೆ. ಇದೀಗ ಇವರು ಸುದೀರ್ಘ 28 ವರ್ಷಗಳ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.