
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ ಮಂಗಳೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ಐಟಿಡಿಪಿ ದ.ಕ. ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬುಡಕಟ್ಟು ಗೌರವ ದಿನ, ಸ್ವಾತಂತ್ರ್ಯದ ಅಮೃತ ಮಹೋತ್ಸವ, ಪ್ರಧಾನ ಮಂತ್ರಿ ವಿಷನ್ ಫಾರ್ ಇಂಡಿಯಾ 2047 ಕುರಿತು ವಿಶೇಷ ಕಾರ್ಯಕ್ರಮ ಹಾಗೂ ಛಾಯಾಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭ ಇಂದು ಕಾಲೇಜು ಆವರಣದಲ್ಲಿ ಇಂದು ನಡೆಯಿತು. ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರುಗಳು ಹಾಗೂ ಒಳನಾಡು ಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನಮಂತ್ರಿಯವರ ದೂರದರ್ಶಿತ್ವದ ಪಂಚ ಸಂಕಲ್ಪಗಳನ್ನು ಅರ್ಥ ಮಾಡಿಕೊಂಡು ವಾಸ್ತವವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು . ಜಾತಿಯ ನೆಲೆಯಲ್ಲಿ ವಿಘಟನೆಗೊಳ್ಳದೆ ದೊಡ್ಡ ವ್ಯಕ್ತಿತ್ವಗಳಿಂದ ಪ್ರೇರಣೆ ಪಡೆದು ನಮ್ಮ ಬದುಕನನ್ನು ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಕುಮಾರ್ ಕೆ.ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ ಅರಿವು ಮೂಡಿಸಿಕೊಂಡು ಸ್ಪರ್ಧೆಗೆ ಸಿದ್ದರಾಗಬೇಕು ಎಂದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ , ಮುಖ್ಯ ಅತಿಥಿಗಳಾಗಿ ಮಾತನಾಡಿ ಬಿರ್ಸಾ ಮುಂಡಾ ಚರಿತ್ರೆ ಕಡೆಗಣಿಸಿದ ಸ್ವಾತಂತ್ರ್ಯ ಹೋರಾಟಗಾರ ಇಂತಹ ಹೋರಾಟಗಾರರು ನಮ್ಮಲ್ಲೂ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಲ್ಲ, ಅಂತಹ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಮಾಜಶಾಸ್ತ್ರಜ್ಞ ಡಾ. ಚಂದ್ರಶೇಖರ್ ದಾಮ್ಲೆ, ಸುಳ್ಯ ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಸಿ.ಆರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಬುಡಕಟ್ಟು ಜನಾಂಗದವರಿಗೆ ಸಿಗುವ ಸವಲತ್ತುಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಬುಡಕಟ್ಟು ಗೌರವ ದಿನ ಪ್ರಧಾನಮಂತ್ರಿಯವರು ದೂರದರ್ಶಿತ 2047 ಕುರಿತು ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ನೋಂದಾಯಿತ ಕಲಾವಿದರಿಂದ ತೊಗಲು ಬೊಂಬೆಯಾಟ ನಡೆಯಿತು. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಆರೋಗ್ಯ ಕಾರ್ಡ್ ಗಳ ವಿತರಣೆ ನಡೆಯಿತು. ಬುಡಕಟ್ಟು ಜನಾಂಗದವರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಶಿಶು ಅಭಿವೃದ್ಧಿ ಯೋಜನೆಯ ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಸಮಾಜ ಇಲಾಖೆಯಿಂದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪ್ರದರ್ಶನ ಏರ್ಪಡಿಸಲಾಗಿತ್ತು. ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್ ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಯೋಜಕ ಪ್ರೊ. ಪುಷ್ಪರಾಜ್ ಉಪಸ್ಥಿತರಿದ್ದರು. ಮಂಗಳೂರಿನ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕಾರಾಮ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊ ರಾಮಕೃಷ್ಣ ನಿರೂಪಿಸಿದರು. ಪ್ರೊ ನಟರಾಜ್ ಸ್ವಾಗತಿಸಿ, ಪ್ರೊ. ಸುರೇಖಾ ವಂದಿಸಿದರು.