Ad Widget

ವೆಂಕಪ್ಪ ನಾಯ್ಕ್ ಗೂನಡ್ಕ ನಿಧನ

ಸಂಪಾಜೆ ಗ್ರಾಮದ ಗೂನಡ್ಕ ನಿವಾಸಿ ವೆಂಕಪ್ಪ ನಾಯ್ಕ್ ಗೂನಡ್ಕ ಸೆ. 25 ರಂದು ಹೃದಯಘಾತದಿಂದ ನಿಧನರಾದರು. ಮೃತರು ಪತ್ನಿ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ದಮಯಂತಿ ಹಾಗೂ ಪುತ್ರರಾದ ಜಗದೀಶ್, ಸುರೇಶ, ಕಿಶೋರ ಪುತ್ರಿ ಅನುರಾಧಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

ಅಡ್ತಲೆ : ನಾಗರಿಕ ಹಿತರಕ್ಷಣಾ ವೇದಿಕೆಯ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ನಾಗರಿಕ ಹಿತರಕ್ಷಣ ವೇದಿಕೆ ಅಡ್ತಲೆ ಇದರ ಒಂದು ವರ್ಷದ ಅವಧಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಶ್ರೀ ಹರಿಪ್ರಸಾದ್ ಅಡ್ತಲೆ , ಉಪಾಧ್ಯಕ್ಷರಾಗಿ ಶ್ರೀ ವಿನಯ್ ಬೆದ್ರುಪಣೆ, ಶ್ರೀ ಲೋಹಿತ್ ಮೇಲಡ್ತಲೆ, ಶ್ರೀ ಸ್ವಾತಿಕ್ ಕಿರ್ಲಾಯ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಂಜಿತ್ ಅಡ್ತಲೆ, ಜತೆ ಕಾರ್ಯದರ್ಶಿಯಾಗಿ ಶ್ರೀ ಮೋಹನ್ ಕಿನಾಲ ಅಡ್ತಲೆ, ಖಜಾಂಜಿಯಾಗಿ ಶ್ರೀ ಓಂ...
Ad Widget

ಅಡ್ತಲೆ : ಧಾರ್ಮಿಕ ಶಿಕ್ಷಣ ತರಗತಿ ಕಾರ್ಯಕ್ರಮ ಉದ್ಘಾಟನೆ

ನಾಗರಿಕ ಹಿತರಕ್ಷಣ ವೇದಿಕೆ ಅಡ್ತಲೆ ಮತ್ತು ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ವತಿಯಿಂದ ಸ.ಹಿ.ಪ್ರಾ. ಶಾಲೆ ಅಡ್ತಲೆ ಇದರ ವಠಾರದಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಕಾರ್ಯಕ್ರಮ ದಿನಾಂಕ 25.09.2022 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಉಳುವಾರು ನೆರವೇರಿಸಿ ಶುಭ...

ಕೊಲ್ಲಮೊಗ್ರ :- ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಜ್ಞಾನವಿಕಾಸ ಸಂಘದ ಸಭೆಯಲ್ಲಿ ಕಾನೂರಾಯಣ ಚಲನಚಿತ್ರ ಪ್ರದರ್ಶನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರದ ಜ್ಞಾನವಿಕಾಸ ಸಂಘದ ಸದಸ್ಯರಿಗೆ ಸೆ.25 ರಂದು ಕಾನೂರಾಯಣ ಚಲನಚಿತ್ರ ಪ್ರದರ್ಶನ ನಡೆಯಿತು.ಬಂಗ್ಲೆಗುಡ್ಡೆ ಶಾಲಾ ಶಿಕ್ಷಕರಾದ ಸುಭಾಷ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ರಾಜೇಶ್.ಕೆ, ಸುಳ್ಯ ತಾಲೂಕು...

ಉಬರಡ್ಕ ; ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ದ್ವಾರ, ಉಬ್ಬುಶಿಲ್ಪಗಳ ಲೋಕಾರ್ಪಣೆ

ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್(ರಿ), ಮದುವೆಗದ್ದೆ, ಉಬರಡ್ಕ ಮಿತ್ತೂರು ಹಾಗೂ ಊರವರ ಮತ್ತು ದಾನಿಗಳ ಸಹಕಾರದೊಂದಿಗೆ ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ದ್ವಾರ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮ 1837ರ ಅಮರ ಸೈನ್ಯದ ಚಾರಿತ್ರಿಕ ಉಬ್ಬುಶಿಲ್ಪಗಳ ಲೋಕಾರ್ಪಣೆ ಸಮಾರಂಭದಲ್ಲಿ ಮೀನುಗಾರಿಕೆ,...

ಸೆ.26: ನಿಂತಿಕಲ್ಲಿನಲ್ಲಿ ಸೋಲಾರ್ ಪಾಯಿಂಟ್ ಪೈಂಟ್ಸ್ ಶುಭಾರಂಭ

ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದ್ದು, ಇದೀಗ ಇದರ ಅಂಗಸಂಸ್ಥೆಯಾಗಿ ಸೋಲಾರ್ ಪಾಯಿಂಟ್ ಪೈಂಟ್ಸ್ ಸಂಸ್ಥೆಯು ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಸೆ.26 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರಹದ ಪೈಂಟ್ಸ್ ಮತ್ತು ಪೈಂಟ್ ಸಾಮಗ್ರಿಗಳು ಮಿತದರದಲ್ಲಿ ದೊರೆಯುತ್ತದೆ....

ಬಿಜೆಪಿಗರೇ ಟೀಕೆ ಮಾಡುವ ಬದಲು ಈ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದ ಸುಳ್ಯ ಕಾಂಗ್ರೆಸ್

ಕೊಲ್ಲಮೊಗ್ರದ ಕಡಂಬಳ ಸೇತುವೆ ಕಾಮಗಾರಿ ಆರಂಭಿಸದೇ ಇದ್ದ ಕಾರಣದಿಂದಾಗಿ ಕೆಪಿಸಿಸಿ ಸದಸ್ಯ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದನ್ನೂ ಸಹಿಸದೇ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲಿನ ಭಯದಿಂದ ಅನಗತ್ಯ ಹೇಳಿಕೆ ನೀಡುತ್ತಿದೆ. ನೀವು ಟೀಕೆ ಮಾಡುವ ಬದಲು ಈ ಪ್ರಶ್ನೆಗಳಿಗೆ ಉತ್ತರಿಸಿ, 28 ವರ್ಷದಿಂದ ಸುಳ್ಯದ ಜನತೆಗೆ ಆಶ್ವಾಸನೆ ಕೊಟ್ಟು ಮೋಸ ಮಾಡಿದವರು ಯಾರು,...

ಸಂಪಾಜೆ ಕೊಡಗು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ.

ಕರ್ನಾಟಕ ರಾಜ್ಯದ ಅಪೆಕ್ಸ್ ಬ್ಯಾಂಕ್ ನೀಡುವ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿನ ಪ್ರಶಸ್ತಿಯನ್ನು ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಸಂಘದ ಕಾರ್ಯನಿರ್ವಹಣೆ ,ಸಾಲ ಮರುಪಾವತಿ ,ಸದಸ್ಯರಿಗೆ ನೀಡಿದ ಸೌಲಭ್ಯಗಳನ್ನು ಪರಿಗಣಿಸಿ ,ಈ ಪ್ರಶಸ್ತಿಯನ್ನು ನೀಡಲಾಗಿದೆ. ರಾಜ್ಯ ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕರೂ ,ಕೊಡಗು ಕೇಂದ್ರ ಸಹಕಾರ ಬ್ಯಾಂಕ್...

ಗುತ್ತಿಗಾರು : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜನ ಜಾಗೃತಿ ವೇದಿಕೆ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಗುತ್ತಿಗಾರಿನ ಸರಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕತೆಯನ್ನು ಪ್ರಾಂಶುಪಾಲಾರದ ಶ್ರೀಮತಿ ಚೆನ್ನಮ್ಮರವರು ವಹಿಸಿದರು. ಕಾರ್ಯಕ್ರಮದಲ್ಲಿ...

ಗುತ್ತಿಗಾರು: ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗುತ್ತಿಗಾರು ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಸುಬ್ರಮಣ್ಯ , ಇನ್ನರ್ ವೀಲ್ ಕ್ಲಬ್ ಸುಬ್ರಮಣ್ಯ, ಆಯುರ್ವೇದ ಮೆಡಿಕಲ್ ಕಾಲೇಜ್ ಕೆವಿಜಿ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೌಷ್ಟಿಕ ಆಹಾರ ಸಪ್ತಾಹ , ಪೋಷಣ್ ಅಭಿಯಾನ...
Loading posts...

All posts loaded

No more posts

error: Content is protected !!