ರೋಟರಿ ಕ್ಲಬ್ ಸುಳ್ಯ ವತಿಯಿಂದ ವನವಾಸಿ ವಸತಿ ಗೃಹ ಅಡ್ಕಾರು ಇಲ್ಲಿಗೆ 25 ಫೈಬರ್ ಚಯರ್ ಗಳನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಇವರು ವಿತರಿಸಿ ಸಮಾಜದ ಕಟ್ಟ ಕಡೆಯ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಲು ರೋಟರಿ ವಿದ್ಯಾಸಿರಿ ಯೋಜನೆಯ ಮೂಲಕ ಹಲವಾರು ಕೊಡುಗೆಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ನುಡಿದರು. ಇದರ ಜೊತೆಗೆ ಶ್ರೀಮತಿ ಮಹಾಲಕ್ಷ್ಮಿಯ ಇವರು ಮಿಕ್ಸರ್ ಹಾಗೂ ಸುದೀಪ್ ನಾರಾಯಣ್ ಇವರು ಅಡುಗೆ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ್ ಪೇರಾಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವನವಾಸಿ ವಸತಿಗೃಹದ ಸ್ಥಾನೀಯ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಅಸಿಸ್ಟೆಂಟ್ ಗವರ್ನರ್ ಶಿವರಾಮ ಎನೇಕಲ್ , ಝೋನಲ್ ಲೆಫ್ಟಿನೆಂಟ್ ಪ್ರೀತಂ ಡಿ ಕೆ, ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ರೋ ಪ್ರಭಾಕರನ್ ನಾಯರ್, ಆನಂದ ಖಂಡಿಗ ಹಾಗೂ ರೋಟರಿ ಸದಸ್ಯರು ಉಪಸ್ತಿತರಿದ್ದರು.
ಮಧುರಾ ಎಂ ಆರ್ ಎಲ್ಲರನ್ನು ವಂದಿಸಿ, ಶ್ರೀಮತಿ ಲತಾ ಮಧುಸೂದನ ಹಾಗೂ ಮಧುಸೂಧನ್ ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು.