ಪಂಜದಲ್ಲಿ ನಡೆದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಡಿಮೆ ತೂಕದ ಮಕ್ಕಳಿಗೆ ಪ್ರೋಟೀನ್ ಪೌಡರನ್ನು ವನಿತಾ ಸಮಾಜ ಪಂಜ ಇದರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.
ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಭಾಗೀರಥಿ ಕರಿಕ್ಕಳ, ಪೂರ್ವಾಧ್ಯಕ್ಷೆ ಶ್ರೀಮತಿ ವೇದಾವತಿ ಮೋನಪ್ಪ, ಸದಸ್ಯರಾದ ಶ್ರೀಮತಿ ಸುಶೀಲಾ ದೇವಪ್ಪ, ಶ್ರೀಮತಿ ರತ್ನಾವತಿ ಬೊಳ್ಳಾಜೆ, ಶ್ರೀಮತಿ ಪುಷ್ಪಾ ರಾಮಚಂದ್ರ ಹಾಗೂ ಶ್ರೀಮತಿ ವಿಮಲಾ ದೇವಯ್ಯ ಭಾಗವಹಿಸಿದ್ದರು.
- Thursday
- November 21st, 2024