ಸಮೀಕ್ಷಾರವರ ಚಿಕಿತ್ಸೆಗಾಗಿ ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ಹಸ್ತಾಂತರಿಸಿದ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾರವರು ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಮನೆಯವರು ಅವರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದು, ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಕಾರಣ ಹಲವಾರು ಸಂಘ ಸಂಸ್ಥೆಗಳು ಹಾಗೂ ಜನರು ಅವರಿಗೆ ಸಹಾಯಹಸ್ತ ಚಾಚುತ್ತಿದ್ದು, ಅದೇ ರೀತಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಅಮರಸೇನಾ ರಕ್ತದಾನಿಗಳ ತಂಡ ಗುತ್ತಿಗಾರು, ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇವುಗಳ ವತಿಯಿಂದ ಪೋಸ್ಟರ್ ಮಾಡಿ ಸಮಾಜಿಕ ಜಾಲಾತಾಣದ ಮೂಲಕ ದಾನಿಗಳ ನೆರವು ಕೋರಿ ಆ.26 ರಿಂದ ಸೆ.07 ರವರೆಗೆ ಅಭಿಯಾನ ನಡೆಸಲಾಗಿತ್ತು. ಈ ಮನವಿಯನ್ನು ಗಮನಿಸಿದ ಸೈನಿಕರಾದ ಪ್ರಸ್ತುತ ಉತ್ತರಾಖಂಡ್ ನಲ್ಲಿ ಸೇವೆಯಲ್ಲಿ ಇರುವ ರವೀಂದ್ರ ಚತ್ರಪ್ಪಾಡಿ ಅವರ ವತಿಯಿಂದ 15,000 ರೂಪಾಯಿ ಹಾಗೂ ಇತರ ದಾನಿಗಳ ವತಿಯಿಂದ ಸಂಗ್ರಹವಾದ ದೇಣಿಗೆಯ ಬಾಬ್ತು ಒಟ್ಟು 25,500 ರೂಪಾಯಿ ಸಹಾಯಧನವನ್ನು ಸಮೀಕ್ಷಾರವರ ಮನೆಗೆ ತೆರಳಿ ಟ್ರಸ್ಟ್ ಖಾತೆಯ ಸ್ಟೇಟ್ ಮೆಂಟ್ ಸಹಿತವಾಗಿ ಚೆಕ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ, ಅಮರ ಸೇನಾ ರಕ್ತದಾನಿಗಳ ತಂಡದ ಸದಸ್ಯರುಗಳಾದ ಮೋಹನ್ ಮುಕ್ಕೂರು, ಪ್ರವೀಣ್ ಕೊಪ್ಪಡ್ಕ, ರಾಜೇಶ್ ಉತ್ರಂಬೆ, ಪ್ರವೀಣ್ ಕಲ್ಮಕಾರು, ಟ್ರಸ್ಟ್ ನ ಸದಸ್ಯರಾದ ಮೋಹನ್ ದಾಸ್ ಶಿರಾಜೆ ಉಪಸ್ಥಿತರಿದ್ದರು.

. . . . . . . . .

ವರದಿ :- ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading