ಜೆಡಿಎಸ್ ರಾಜ್ಯ ವಕ್ತಾರರಾಗಿ ಸುಳ್ಯದ ಎಂ.ಬಿ. ಸದಾಶಿವ ನೇಮಕಗೊಂಡಿದ್ದಾರೆ. ಎಂ.ಬಿ. ಸದಾಶಿವರವರು ಹಿರಿಯ ಜೆಡಿಎಸ್ ಮುಖಂಡರಾಗಿದ್ದು ಸುಳ್ಯದಲ್ಲಿ ಉದ್ಯಮಿಯಾಗಿದ್ದಾರೆ. ಈ ಹಿಂದೆ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿಯೂ ಎಂ.ಬಿ. ಸದಾಶಿವರು ಕಾರ್ಯನಿರ್ವಹಿಸಿದ್ದರು. ಹಾಲಿ ಶಾಸಕರು,ಸಂಸದರು, ಮಾಜಿ ಶಾಸಕರುಗಳನ್ನೊಳಗೊಂಡ 62 ಜನರನ್ನು ರಾಜ್ಯ ವಕ್ತಾರರನ್ನಾಗಿ ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ ಇಬ್ರಾಹಿಂ ಆದೇಶ ಮಾಡಿದ್ದಾರೆ.
ಪರಿಚಯ : ಜೆಪಿ ಚಳುವಳಿಯ ಸಂದರ್ಭದಲ್ಲಿ ರಾಜ್ಯ ಛಾತ್ರ ಸಂಘರ್ಷ ಯುವ ವಾಹಿನಿ ಸಂಚಾಲಕನಾಗಿ ಬಿಹಾರಕ್ಕೂ ತೆರಳಿದ್ದ ಇವರು ತಾಲೂಕು ಜನತಾ ಪಕ್ಷದ ಕಾರ್ಯದರ್ಶಿ ಯಾಗಿ ರಾಜ್ಯ ಯುವ ಜನತಾ ಪಕ್ಷದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಸ್ಟಾರ್ ಪ್ರಚಾರಕರಾಗಿ ದುಡಿದಿದ್ದಾರೆ. 1994 ರಿಂದ ಜಿಲ್ಲಾ ಅಧ್ಯಕ್ಷನಾಗಿ ಎರಡು ಬಾರಿ ಬಾರಿ ಆಯ್ಕೆ ಆಗಿದ್ದರು.
ರಾಜ್ಯ ಹಿರಿಯ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿರುತ್ತಾರೆ. ಜನತಾ ಪಕ್ಷ ಸ್ಥಾಪನೆ ಆದಂದಿನಿಂದ ಇಂದಿನ ವರೆಗೆ ಪಕ್ಷ ನಿಷ್ಠೆ ಹೊಂದಿ ಪಕ್ಷ ಬದಲಾಯಿಸದೇ ಇರುವ ಬೆರಳಿಕೆಯ ಮಂದಿಯಲ್ಲಿ ಇವರು ಒಬ್ಬರು.
ದೇವೆಗೌಡರ ಮೆಚ್ಚಿನ ಶಿಷ್ಯನಾಗಿ ಕುಮಾರಣ್ಣನ ಮಾತಿನಲ್ಲಿ “ಸದಾಶಿವಣ್ಣ ನಮ್ಮ ಕುಟುಂಬದ ಸದಸ್ಯ ಇದ್ದ ಹಾಗೆ ” ಎಂದು ಹೇಳುವುದು ನನಗೂ ಅವರ ಇಡೀ ಕುಟುಂಬಕ್ಕೂ ಇರುವ ಸಂಬಂಧಕ್ಕೆ ಅತ್ಯುತ್ತಮ ಸಾಕ್ಷಿ. ಎಲ್ಲಾ ಪಕ್ಷಗಳ ನಾಯಕರೊಂದಿಗೆ ಪ್ರೀತಿ ಮತ್ತು ಉತ್ತಮ ಸಂಬಂಧ ಇರುವುದರಿಂದ ಎಲ್ಲರ ಪ್ರೀತಿ ಗಳಿಸಿದ, ಸೈದ್ಧಾಂತಿಕಾ ವ್ಯತ್ಯಾಸ ಮಾತ್ರ ತೋರಪಡಿಸುವುದರಿಂದ ವಿವಿಧ ಪಕ್ಷಗಳ ನಾಯಕರು ಗೌರವ ನೀಡುವುದು ನಮ್ಮನ್ನು ಹೆಚ್ಚು ಜವಾಬ್ದಾರಿಯಿಂದ ವರ್ತಿಸುವಂತೆ ಪ್ರೇರಿಪಿಸಿದೆ ಮಾಡಿದೆ ಎಂದು
ಎಂ.ಬಿ.ಸದಾಶಿವ ಅಮರ ಸುದ್ದಿ ಜತೆ ಪ್ರತಿಕ್ರಿಯಿಸಿದ್ದಾರೆ.