Ad Widget

ಪೆರ್ನಾಜೆ: ಮನತಣಿಸಿದ “ಸ್ವರ ಸಿಂಚನ ” @22 ಸಂಗೀತೋತ್ಸವ, ಪ್ರಶಸ್ತಿ ,ಸನ್ಮಾನ

ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಹಾಗೂ ಪಡಿಬಾಗಿಲು ವಿದ್ಯಾರ್ಥಿಗಳಿಂದ ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸಿಂಹ ಮಾಸದ ವಿಶೇಷ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸಂಗೀತೋತ್ಸವ ಮತ್ತು ಪುರಸ್ಕಾರ, ಸನ್ಮಾನ ಪ್ರಶಸ್ತಿ ಪ್ರಧಾನ ಸಮಾರಂಭವು ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಶ್ರೀಯುತ ವಿದ್ವಾನ್ ಡಾಕ್ಟರ್ ವಿ.ಆರ್ ನಾರಾಯಣ್ ಪ್ರಕಾಶ್ ಕ್ಯಾಲಿಕೆಟ್ ರವರು ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರು ವಿಟ್ಲ ಪದವಿ ಪೂರ್ವ ಕಾಲೇಜ್ ಶ್ರೀ ಬಾಲಿಕಾ ಪ್ರೌಢಶಾಲೆ ಕೃಷ್ಣ ಭಟ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿಟ್ಲ ಪದವಿ ಪೂರ್ವ ಕಾಲೇಜಿನ ಕಲಾವಿಭಾಗ ಶಿಕ್ಷಕರಾದ ರಮೇಶ್, ಶ್ರೀ ಭಗವತಿ ದೇವಸ್ಥಾನ ವಿಟ್ಲ ಇಲ್ಲಿಯ ವ್ಯವಸ್ಥಾಪಕರಾದ ಶ್ರೀ ಕೇಶವ ಆರ್. ವಿ ಉಪಸ್ಥಿತರಿದ್ದರು.

. . . . .

ಪ್ರಶಸ್ತಿ ಪ್ರಧಾನ ಸನ್ಮಾನ.

“ಸ್ವರ ಸಿಂಚನ” ಅವಾರ್ಡ್ @22 ಮೃದಂಗ ವಾದಕರಾದ ಡಾ ವಿ.ಆರ್ ನಾರಾಯಣ್ ಪ್ರಕಾಶ್ ಕ್ಯಾಲಿಕೆಟ್ ಮತ್ತು ಉಷಾ ಪ್ರಕಾಶ್ ದಂಪತಿಗಳನ್ನು ಶಾಲು ,ಹಾರ, ಪೇಟ ಸ್ಮರಣಿಕೆ, ಅಭಿನಂದನ ಪತ್ರ, ಸೀರೆ, ಫಲ, ತಾಂಬೂಲಗಳನ್ನು ಇತ್ತು ಪ್ರಶಸ್ತಿ ಪ್ರದಾನ ಮಾಡಿದರು. ರಘುರಾಮ ಶಾಸ್ತ್ರಿ ಕೊಡಂದೂರ್ ಸವಿತಾ ಕೊಡಂದೂರು ಅವರು ಪ್ರಧಾನ ಮಾಡಿದರು. ನವೀನ ಶಿಕ್ಷಕರು ಅಭಿನಂದನಾ ಪತ್ರ ವಾಚಿಸಿದರು. ಹಿರಿಯ ಶ್ರೀಮತಿ ವಿದುಷಿ ಸುಮತಿ ಶಂಕರ್ ಭಟ್ ಬದಾನಾಜೆ ಅವರನ್ನು ಸ್ವರ ಸಿಂಚನ ಕಲಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರು ಸಂಸ್ಥೆಗೆ ಶುಭ ಹಾರೈಸಿದರು ಕುಮಾರಿ ಅನರ್ಗ್ಯ ಅವರು ಸನ್ಮಾನ ಪತ್ರ ವಾಚಿಸಿದರು, ವಿಟ್ಲದ ಸೆಕ್ಸೋಫಾನ್ ವಾದಕ ಈ ಬಾರಿಯ ಕರ್ನಾಟಕ ಕಲಾಶ್ರೀ ಗೌರವ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಡಾ .ಪಿಕೆ ದಾಮೋದರ್ ಅವರನ್ನು ಸ್ವರ ಸಿಂಚನ ಕಲಾ ಸಂಘದ ವತಿಯಿಂದ ಗೌರವಿಸಿದರು.

9 ತಂಡಗಳು ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೈವಿಧ್ಯಮಯ ವಸ್ತ್ರ ವಿನ್ಯಾಸ ವಿದ್ಯಾರ್ಥಿನಿಯರಿಗೆ ಓಲೆ, ಒಡವೆಗಳ ಶೃಂಗಾರ ಪಂಚರತ್ನ ಗಾಯನಕ್ಕೆ ವಿಶೇಷ ವಸ್ತ್ರ ಭಿನ್ನ ವಿಭಿನ್ನ ಹಾಡು ಸತತ ಆರು ವರ್ಷಗಳಿಂದ ಶೇಕಡ 100 ಫಲಿತಾಂಶ ಪಡೆದ ಶಾಲೆ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.

ಪಕ್ಕ ವಾದ್ಯದಲ್ಲಿ ವೈಲಿನ್ ವಾದಕರಾಗಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗ ವಾದಕರಾಗಿ ಡಾ ಬಿ ಆರ್ ನಾರಾಯಣ ಪ್ರಕಾಶ್, ಹಾರ್ಮೋನಿಯಂ ವಾದಕರಾಗಿ ಗಣೇಶ್ ಆಚಾರ್ ಕೆ ಸಿ, ತಬಲವಾದಕರಾಗಿ ಶ್ರೀಯುತ ಸುಹಾಸ್ ಪುತ್ತೂರು ಸಹಕರಿಸಿದರು. ಸುಶ್ರಾವ್ಯ ಗಾಯನ ಕಾರ್ಯಕ್ರಮವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕು.ಮನೋನ್ಮಯಿ, ತೃಪ್ತಿ ಕಣಿಯೂರು ,ಕಾವೇರಿ ,ಸೃಷ್ಟಿ ಪ್ರಾರ್ಥಿಸಿದರು .ಸ್ವರ ಸಿಂಚನ ಸಂಗೀತ ಶಾಲಾ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ವರದಿ ವಾಚಿಸಿದರು. ಸಿಂಚನ ಲಕ್ಷ್ಮಿ ಕೋಡಂದೂರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಂದಳಿಕೆ ಮುಖ್ಯ ಶಿಕ್ಷಕರಾದ ವಿಶ್ವನಾಥ್ ಗೌಡ ವಂದಿಸಿದರು. ಪದ್ಮರಾಜ್ ಚಾರ್ವಾಕ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!