ನಮ್ಮ ಸಂಸ್ಕ್ರತಿ ಆಚರಣೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು ಎಂದು ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಹೇಳಿದರು ಅವರು ಗಣೇಶ ಚತುರ್ಥಿ ಅಂಗವಾಗಿ ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ನಮ್ಮ ಸಂಸ್ಕ್ರತಿ ಆಚರಣೆಗಳನ್ನು ನಾವು ಮರೆಯುತ್ತಿದ್ದೇವೆ. ನಾವು ಆಧುನಿಕತೆಯ ದಾಸರಾಗದೆ ನಮ್ಮತನವನ್ನು ನಾವು ಉಳಿಸಿಕೊಳ್ಳವ ಅಗತ್ಯ ಇದೆ. ಅಜ್ಜಾವರ ಚೈತನ್ಯ ಸೇವಾಶ್ರಮದ ಸ್ವಾಮೀಜಿ ಧಾರ್ಮಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜ ಸೇವೆ ಮಾಡುವುದರ ಮೂಲಕ ಶ್ರೇಷ್ಠ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಆಶ್ರಮದ ಸ್ಚಾಮಿಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಮಾತನಾಡಿ ದೈವದ ಚಿಂತನೆ ಆಧ್ಯಾತ್ಮಿಕ ಚಿಂತನೆ ಮಾಡುವವರಿಗೆ ದುರ್ಬುದ್ಧಿಗಳು,ಕೆಟ್ಟ ಚಟಗಳು ಬರುವುದಿಲ್ಲ.ಈ ಹಿನ್ನಲೆಯಲ್ಲಿ ನಾವು ದೇವರ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಎಂದು ಹೇಳಿದರು.
ಆಶ್ರಮದ ಟ್ರಸ್ಟಿ ಪ್ರಣವಿ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಚಾಮಯ್ಯ ಗೌಡ ಅಡ್ಪಂಗಾಯ ಮುಖ್ಯ ಅತಿಥಿಯಾಗಿಯಾಗಿ ಭಾಗವಹಿಸಿದರು.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಅನಿಲ್ ಬಿ.ವಿ ಸ್ವಾಗತಿಸಿದರು.ರೇಖಾ ಅನಿಲ್ ವಂದಿಸಿ, ಮೇಗಶ್ಯಾಮ್ ಅಡ್ಪಂಗಾಯ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಟಿಗಳಾದ ನಿವೃತ್ತ ಎ ಎಸ್ ಐ ಕುಶಾಲಪ್ಪ ಗೌಡ ಅತ್ಯಾಡಿ, ಶಶ್ಮಿ ಭಟ್, ಜನಾರ್ದನ ಮಾಸ್ತರ್ ಇತರರು ಉಪಸ್ಥಿತರಿದ್ದರು. ಗಣಹೋಮ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.