Ad Widget

ಹಾಲೆಮಜಲು :- ಕಾವೇರಿ ಸಂಜೀವಿನಿ ಸಂಘ ಉದ್ಘಾಟನೆ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಆಶ್ರಯದಲ್ಲಿ ಆ.27 ರಂದು ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿ ಕಾವೇರಿ ಸಂಜೀವಿನಿ ಸಂಘ ಉದ್ಘಾಟನೆಗೊಂಡಿತು. ನೂತನ ಸಂಘದ ಅಧ್ಯಕ್ಷರಾಗಿ ಹೇಮಲತಾ ಮನಮೋಹನ್ ಕುಳ್ಳಂಪಾಡಿ, ಕಾರ್ಯದರ್ಶಿಯಾಗಿ ಸುಮಲತಾ ಪ್ರಕಾಶ್ ಕುಳ್ಳಂಪಾಡಿ ಆಯ್ಕೆಯಾದರು. ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ ಹಾಗೂ ಎಲ್.ಸಿ.ಆರ್.ಪಿ ಶಾರದಾ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ವತಿಯಿಂದ ಗೀತ ಗಾಯನ ಸ್ಪರ್ಧೆ 2022

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಕಬ್, ಬುಲ್ ಬುಲ್, ಸ್ಕೌಟ್, ಗೈಡ್, ರೋವರ್, ರೇಂಜರ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯು ದಿನಾಂಕ 27.08.2022 ಶನಿವಾರದಂದು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿ ಇಲ್ಲಿ ಜರಗಿತು. ಗೀತಗಾಯನ ಸ್ಪರ್ಧೆಯನ್ನು ಮುರುಳ್ಯ ಶಾಲೆಯ ಎಸ್...
Ad Widget

ಮತ್ತೊಮ್ಮೆ ಜಲಸ್ಪೋಟ – ಕಲ್ಮಕಾರು, ಕೊಲ್ಲಮೊಗ್ರು ಕೊಯನಾಡು, ಸಂಪಾಜೆ ತತ್ತರ

ಸುಳ್ಯ ತಾಲೂಕು ಹಾಗೂ ಕೊಡಗು ಭಾಗದಲ್ಲಿ ಮತ್ತೊಮ್ಮೆ ಜಲಸ್ಪೋಟ ಸಂಭವಿಸಿದ್ದು, ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಜಲಪ್ರವಾಹ ಉಂಟಾಗಿದೆ. ಕಲ್ಮಕಾರು ಪರಿಸರದ ಗುಳಿಕ್ಕಾನ, ಹಾಗೂ ಕಡಮಕಲ್ ಎಸ್ಟೇಟ್ ಭಾಗದಲ್ಲಿ ಜಲಸ್ಪೋಟ ಸಂಭವಿಸಿದೆ. ಇದರಿಂದಾಗಿ ಭಾರೀ ಪ್ರಮಾಣದ ಮರಗಳು ನೀರು ಅಬ್ಬರಕ್ಕೆ ಕೊಚ್ಚಿ ಬಂದಿವೆ.ಕೊಡಗಿನ ಸಂಪಾಜೆ, ಕೊಯನಾಡು ಭಾಗದಲ್ಲೂ ಭಾರೀ ಪ್ರವಾಹ ಉಂಟಾಗಿದೆ. ಕೊಯನಾಡು ಕಿಂಡಿ ಅಣೆಕಟ್ಟಿಗೆ ಅಪಾರ...

ಆ.29 : ಸುಳ್ಯ ನಗರದ ಮುಖ್ಯರಸ್ತೆಯಲ್ಲಿ ಪೂ.11 ಗಂಟೆ ತನಕ ನೋ ಪಾರ್ಕಿಂಗ್

ಸುಳ್ಯ ನಗರ ದಲ್ಲಿ ಆಗಸ್ಟ್ 29ರಂದು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ವಾಹನ ಮೆರವಣಿಗೆ ಇರುವ ಹಿನ್ನೆಲೆಯಲ್ಲಿ ಪೂರ್ವಾಹ್ನ 9.30ರಿಂದ 11.00ರ ತನಕ ನಗರದ ಮುಖ್ಯರಸ್ತೆಯಲ್ಲಿ ಕಾಯರ್ತೋಡಿ ವಿಷ್ಣು ಸರ್ಕಲ್ ನಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ (ಜ್ಯೋತಿ ಸರ್ಕಲ್ ) ತನಕ ವಾಹನ ನಿಲುಗಡೆ ಮಾಡದಂತೆ ನಗರ ಪಂಚಾಯತ್ ಸೂಚಿಸಿದೆ. ವಾಹನ ನಿಲುಗಡೆಗಾಗಿ ಚೆನ್ನಕೇಶವ...

ನಾಲ್ಕೂರು :- ಎರ್ಧಡ್ಕದಲ್ಲಿ ಮೂಕಾಂಬಿಕಾ ಸಂಜೀವಿನಿ ಸಂಘ ಉದ್ಘಾಟನೆ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಆಶ್ರಯದಲ್ಲಿ ಆ.27 ರಂದು ನಾಲ್ಕೂರು ಗ್ರಾಮದ ಎರ್ಧಡ್ಕ ಎಂಬಲ್ಲಿ ಮೂಕಾಂಬಿಕಾ ಸಂಜೀವಿನಿ ಸಂಘ ಉದ್ಘಾಟನೆಗೊಂಡಿತು. ಸಂಘದ ಹಿರಿಯ ಸದಸ್ಯರಾದ ಪಾರ್ವತಿ ಎರ್ಧಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ನೂತನ ಸಂಘದ ಅಧ್ಯಕ್ಷರಾಗಿ ಜ್ಯೋತಿ, ಕಾರ್ಯದರ್ಶಿಯಾಗಿ ಪ್ರಮೀಳಾ ಭಾಸ್ಕರ ಎರ್ಧಡ್ಕ ಆಯ್ಕೆಯಾದರು. ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ...

ಅರಂತೋಡು: ಸ್ವಚ್ಚತಾ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್, ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಸಂಘ ಅರಂತೋಡು, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅರಂತೋಡು, SKSSF ವಿಪತ್ತು ನಿರ್ವಹಣಾ ತಂಡ ಅರಂತೋಡು ಶಾಖೆ, ಮತ್ತು ಸ್ವಚ್ಚತಾ ಸಮಿತಿಯ ಸದಸ್ಯರುಗಳ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಅರಂತೋಡು ರಾಷ್ಟ್ರೀಯ ಹೆದ್ದಾರಿಯನ್ನು ಸ್ವಚ್ಚಗೊಳಿಸುವುದರ ಮೂಲಕ ನಡೆಸಲಾಯಿತು. ಸದರಿ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ...

ಆ.30 ರಂದು ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಜಾಲ್ಸೂರಿನಿಂದ ಸುಳ್ಯದವರೆಗೆ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮ

ಸುಳ್ಯ: ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ರಾಜ್ಯಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದ ಕುರಿತು ಆ.27ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರವರಿಂದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಮಾತನಾಡಿದ ಅವರು ಆ.30 ರಂದು 75ರ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ಜಾಲ್ಸೂರಿನಿಂದ ಸುಳ್ಯದವರೆಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ...

ಏನೆಕಲ್ಲು: ಶ್ರೀ ಕ್ಷೇ. ಧ. ಗ್ರಾ. ಯೋಜನೆ ಪಂಜ ಸುಬ್ರಹ್ಮಣ್ಯ ವಲಯದ ಪದಗ್ರಹಣ ಕಾರ್ಯಕ್ರಮ.

ಏನೆಕಲ್ಲು : ಬಾಲಾಡಿ ಶ್ರೀ ಆದಿಶಕ್ತಿ ಭಜನಾ ಮಂದಿರದ ಸಭಾಭವನದಲ್ಲಿ ಆ. 25ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ಸುಬ್ರಹ್ಮಣ್ಯ ವಲಯದ ಏನೆಕಲ್ಲು, ಸುಬ್ರಹ್ಮಣ್ಯ, ದೇವರಹಳ್ಳಿ, ಕುಲ್ಕುಂದ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.ಕಾರ್ಯಕ್ರಮವನ್ನು ಶ್ರೀ ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷ ಗಿರಿಯಪ್ಪ ಗೌಡ ಬಾಲಾಡಿ ಉದ್ಘಾಟಿಸಿದರು. ನೂತನ...

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಒಂದು ದಿನದ ಶಿಬಿರ

ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಆ.25ರಂದು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಒಂದು ದಿನದ ಶಿಬಿರ ನಡೆಯಿತು. ಈ ಶಿಬಿರದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ರಂಜನ್, ಕೆ.ಎನ್, ಉಪನ್ಯಾಸಕರುಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂಸೇವಕರು ಭಾಗವಹಿಸಿದರು.

ಉಜಿರಡ್ಕ :- ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ದೈವದ ಹರಕೆ ನರ್ತನ ಸೇವೆ

ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಉಜಿರಡ್ಕದಲ್ಲಿ ಆ.27 ರಂದು ಸಂಜೆ ಕೊರಗಜ್ಜ ದೈವದ ಹರಕೆ ನರ್ತನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಹರಕೆ ನರ್ತನ ಸೇವೆ ಕುಟುಂಬಸ್ಥರು ಹಾಗೂ ಊರ ಪರವೂರ ಭಕ್ತಾದಿಗಳು ಮತ್ತು ಚಲನಚಿತ್ರ ನಟರು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
Loading posts...

All posts loaded

No more posts

error: Content is protected !!