- Friday
- April 11th, 2025

ಮಾವಿನಕಟ್ಟೆ ಕಂದ್ರಪ್ಪಾಡಿ ರಸ್ತೆಯಲ್ಲಿ ಅಚ್ರಪ್ಪಾಡಿ ಬಳಿ ಬರೆ ಕುಸಿತಗೊಂಡಿದೆ. ಬರೆ ಕುಸಿತದಿಂದ ವಿದ್ಯುತ್ ಕಂಬ ಧರೆಗುಳಿದಿದ್ದು ಸಂಚಾರ ಸ್ಥಗಿತಗೊಂಡಿದೆ.

ಉಪ್ಪುಕಳ ಬಾಳುಗೋಡು ಗ್ರಾಮದ ಬಸವನಗುಡಿಯಿಂದ ಉಪ್ಪುಕಳ ಸಂಪರ್ಕಿಸುವ ಸಿದ್ದನಗುಡ್ಡೆ ಕುಸಿದಿದೆ. ಕೊತ್ನಡ್ಕ ಉಪ್ಪುಕಳದ ನಿವಾಸಿಗಳು ರಸ್ತೆಯಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

ಆ.01 ರಂದು ಸುರಿದ ಭಾರೀ ಮಳೆಗೆ ಸೋಮವಾರ ತಡರಾತ್ರಿ ಕಡಬ ತಾಲೂಕಿನ ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ಎಂಬಲ್ಲಿನ ಕಾಲು ಸೇತುವೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ವರದಿ :- ಉಲ್ಲಾಸ್ ಕಜ್ಜೋಡಿ

ಸುಬ್ರಹ್ಮಣ್ಯದಲ್ಲಿ ಆ.1 ರಂದು ನಡೆದ ಭೂಕುಸಿತದಿಂದಾಗಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರೂ.11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರ ಆ. 2 ರಂದು ಕುಸುಮಾಧರಿಗೆ ಕುಸುಮಾಧರರ ತಂದೆ ಬೊಮ್ಮಣ ಗೌಡ ಕರಿಮಜಲುರವರ ನಿವಾಸದಲ್ಲಿ ವಿತರಿಸಿದರು. ಮೃತಪಟ್ಟ ಇಬ್ಬರು ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ ಮನೆ...

ರಾತ್ರಿಯಿಡಿ ಸುರಿದ ಮಳೆ ಆರ್ಭಟಕ್ಕೆ ಕೊಯನಾಡು,ಕಲ್ಲುಗುಂಡಿ, ಗೂನಡ್ಕನ ಜನತೆ ಮತ್ತೊಮ್ಮೆ ಸಂಕಟ ಪಡುವಂತಾಗಿದೆ. ಪಯಸ್ವಿನಿ ನದಿ ಮತ್ತೆ ಉಕ್ಕಿ ಹರಿಯತೊಡಗಿದ್ದು ನಿನ್ನೆಯಷ್ಟೆ ಜಲಪ್ರಳಯಕ್ಕೆ ಒಳಗಾಗಿದ್ದ ಸಂಪಾಜೆ ಕಲ್ಲುಗುಂಡಿ ಪ್ರದೇಶದಲ್ಲಿ ಇಂದು ಪುನಹ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವವರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಕಲ್ಲುಗುಂಡಿಯಲ್ಲಿ, ಗೂನಡ್ಕದಲ್ಲಿ ಮನೆಗಳು ಜಲಾವೃತವಾಗಿದ್ದು ರಾಜ್ಯ ಹೆದ್ದಾರಿ ಬಂದ್ ಆಗಿದೆ. ಅರಂಬೂರು...

ವಿಪರೀತ ಮಳೆ ಹಾಗೂ ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಸುಳ್ಯ ಹಾಗು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗು ಕಾಲೇಜುಗಳಿಗೆ ಆ.03 ರಂದು ರಜೆ ಘೋಷಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಮಾಡಿದ್ದಾರೆ.

ಹರಿಹರಪಲ್ಲತಡ್ಕದ ಸೇತುವೆಗೆ ಪವಾಹದಲ್ಲಿ ಬಂದಿದ್ದ ಮರದ ದಿಮ್ಮಿಗಳು ಸಿಕ್ಕಿಹಾಕಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು. ಈ ಮರಗಳು ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ಎಂಬವರು ನದಿಗೆ ಬಿದ್ದಿದ್ದು ಅವರನ್ನು ರಕ್ಷಿಸಿದ ಘಟನೆ ಇಂದು ನಡೆದಿದೆ. ಅಪರೇಟರ್ ನೀರಿಗೆ ಬಿದ್ದ ತಕ್ಷಣ ಸೋಮಶೇಖರ್ ಕಟ್ಟೆಮನೆ ಎಂಬವರು ನೀರಿಗೆ ಅವರನ್ನು ರಕ್ಷಿಸಿದರು. ಸ್ಥಳೀಯರ ಸಹಕಾರದಿಂದ ಅವರನ್ನು...
ಹರಿಹರಪಲ್ಲತಡ್ಕದ ಸೇತುವೆಗೆ ಪವಾಹದಲ್ಲಿ ಬಂದಿದ್ದ ಮರದ ದಿಮ್ಮಿಗಳು ಸಿಕ್ಕಿಹಾಕಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು. ಈ ಮರಗಳು ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ಎಂಬವರು ನದಿಗೆ ಬಿದ್ದಿದ್ದು ಅವರನ್ನು ರಕ್ಷಿಸಿದ ಘಟನೆ ಇಂದು ನಡೆದಿದೆ. ಅಪರೇಟರ್ ನೀರಿಗೆ ಬಿದ್ದ ತಕ್ಷಣ ಸೋಮಶೇಖರ್ ಕಟ್ಟೆಮನೆ ಎಂಬವರು ನೀರಿಗೆ ಅವರನ್ನು ರಕ್ಷಿಸಿದರು. ಸ್ಥಳೀಯರ ಸಹಕಾರದಿಂದ ಅವರನ್ನು...

ದ.ಕ ಜಿಲ್ಲೆ ಉಸ್ತುವಾರಿ ಸಚಿವ, ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಅವರು ನಾಳೆ (ಆ.3 ) ಬೆಳಗ್ಗೆ 9.30ಕ್ಕೆ ಸುಬ್ರಹ್ಮಣ್ಯ ಆಗಮಿಸಿ ಅಲ್ಲಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ ಹರಿಹರ, ಕೊಲ್ಲಮೊಗ್ರು ಕಲ್ಮಕಾರು ಈ ಭಾಗಕ್ಕೆ ಭೇಟಿ ನೀಡಲಿದ್ದಾರೆ.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಇಂದು ಸಂಸತ್ತಿನಲ್ಲಿ ಭೇಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರು ನಮ್ಮ ಕಾರ್ಯಕರ್ತ ಶ್ರೀ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಕೇಸನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದುದಕ್ಕಾಗಿ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಕೇರಳದ ಗಡಿಪ್ರದೇಶವಾದ ಕರಾವಳಿ ಪ್ರದೇಶಗಳಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗಿದ್ದು,...

All posts loaded
No more posts