Ad Widget

ಅರಂತೋಡು : ಭಜನಾ ಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ

ಆರಂತೋಡು ಶ್ರೀ ದುರ್ಗಾ ಮಾತಾ ಭಜನಾ ಮಂದಿರದಲ್ಲಿ ವರಮಹಾಲಕ್ಷ್ಮಿ ಆಚರಣಾ ಸಮಿತಿ ವತಿಯಿಂದ ವರಮಹಾಲಕ್ಷ್ಮಿ ಪೂಜೆಯು ವಿಜೃಂಭಣೆಯಿಂದ ನಡೆಯಿತು. ವರಮಹಾಲಕ್ಷ್ಮಿ ಪೂಜೆಯ ಮಹತ್ವ ಹಾಗೂ ರಕ್ಷಾ ಬಂಧನ ಬಗ್ಗೆ ಬೇಬಿ ವಿದ್ಯಾ ಪೂಜಾರಿಮನೆ ಇವರು ಭೌದ್ಧಿಕ್ ನಡೆಸಿಕೊಟ್ಟರು.

ಮಡಪ್ಪಾಡಿ : ಬಾಳಿಕಳ ಕೇಪಳಕಜೆ ರಸ್ತೆ ಸಂಪರ್ಕ ಕಡಿತ

ಮಡಪ್ಪಾಡಿ ಗ್ರಾಮದ ಬಾಳಿಕಳ ಕೇಪಳಕಜೆ ರಸ್ತೆಯಲ್ಲಿ ಭಾರಿ ಮಳೆಗೆ ಮೋರಿ ಹಾನಿಯಾಗಿ ರಸ್ತೆ ಕುಸಿದಿದೆ. ಇದರಿಂದಾಗಿ ಕೇಪಳಕಜೆ ಭಾಗದ 7 ಮನೆಗಳಿಗೆ ರಸ್ತೆ ಸಂಪರ್ಕ ಇಲ್ಲದಾಗಿದೆ. ಈ ಬಗ್ಗೆ ಸ್ಥಳೀಯಾಡಳಿತ ಶೀಘ್ರ ಗಮನಹರಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
Ad Widget

ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವಿಶಿಷ್ಟ ಸಾಧನಾ ಪ್ರಶಸ್ತಿ

ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನೀಡುವ 2021-22ನೇ ಸಾಲಿನ ವಿಶಿಷ್ಟ ಸಾಧನಾ ಪ್ರಶಸ್ತಿಗೆ ಸುಳ್ಯದ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘ ಆಯ್ಕೆಯಾಗಿದೆ. ಕಳೆದ 24 ವರ್ಷಗಳಿಂದ ಕಾರ್ಯಚರಿಸುತ್ತಿರುವ ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಟ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಅಗಸ್ಟ್ 5...

ಮಳೆಯ ಆರ್ಭಟಕ್ಕೆ ಕಂದ್ರಪ್ಪಾಡಿ – ಬಾಳೆಗುಡ್ಡೆ ರಸ್ತೆ ಸಂಪೂರ್ಣ ಹಾನಿ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಬಾಳೆಗುಡ್ಡೆ ರಸ್ತೆ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಸಂಪೂರ್ಣ ಹಾನಿಯಾಗಿದೆ. ರಸ್ತೆ ಬದಿ ಬೃಹತ್ ಗುಂಡಿಬಿದ್ದಿದ್ದು ಡಾಮರೆಲ್ಲ ಕಿತ್ತು ಹೋಗಿ ಸಂಚಾರಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಕಲ್ಮಕಾರು :- ಗುಳಿಕ್ಕಾನದ 6 ಮನೆಯ 21 ಜನರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಲ್ಮಕಾರು ಗ್ರಾಮದ ಗುಳಿಕ್ಕಾನ ಎಂಬಲ್ಲಿ ಗುಡ್ಡ ಜರಿಯುವ ಭೀತಿಯಲ್ಲಿದ್ದ 6 ಕುಟುಂಬಗಳ 21 ಜನರನ್ನು ಕಲ್ಮಕಾರು ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಲ್ಮಕಾರು ಶಾಲೆಯ ಬಿಳಿಮಲೆ ಲಕ್ಷ್ಮೀ ರಾಮಣ್ಣ ರಂಗಮಂದಿರದ ತಾತ್ಕಾಲಿಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ವರದಿ...

ಬೆದ್ರುಪಣೆ : ಮಳೆಗೆ ಕೊಚ್ಚಿ ಹೋದ ಸೇತುವೆಯ ತಡೆಗೋಡೆ – ತುರ್ತು ವ್ಯವಸ್ಥೆ ಕಲ್ಪಿಸಿದ ನಾಗರಿಕಾ ಹಿತರಕ್ಷಣಾ ವೇದಿಕೆ

ಆ.03 ರಂದು ಸಂಜೆ ಸುರಿದ ಭಾರಿ ಮಳೆಗೆ ಅರಂತೋಡು ಗ್ರಾಮದ ಬೆದ್ರುಪಣೆಯಲ್ಲಿನ ಸೇತುವೆಯ ಒಂದು ಬದಿಯ ತಡೆಗೋಡೆ ಮತ್ತು ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಹೊಳೆಯ ಇನ್ನೊಂದು ಬದಿಯ ಹಲವಾರು ಮನೆಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊಳೆ ದಾಟಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಮಸ್ಯೆ ಕೂಡಲೇ ಸ್ಪಂದಿಸಿದ ಅಡ್ತಲೆಯ ನಾಗರಿಕ ಹಿತರಕ್ಷಣಾ...

ಕವನ: ಸೂತ್ರಧಾರನ ಆಟ – ಮಾನವೀಯತೆಯ ಪಾಠ

ವಿಧಿಯ ಆಟ ತುಂಬಾ ಕ್ರೂರ, ಸೂತ್ರಧಾರನ ಆಟ ಘೋರ, ಕೊಚ್ಚಿ ಹೋದ ಬದುಕ ತೀರ, ಮನಸ್ಸು ಆಗಿದೆ ತುಂಬಾ ಭಾರ... ಎಲ್ಲಾ ಇದ್ದ ಊರಿನಲ್ಲಿ ಏನೂ ಇಲ್ಲದಾಗಿದೆ, ಎಲ್ಲಾ ಕೊಚ್ಚಿ ಹೋಗಿದೆ, ಖುಷಿಯು ದೂರವಾಗಿದೆ, ದುಃಖ ಎಲ್ಲೆಡೆ ತುಂಬಿದೆ... ದೂರವಿರುವ ಗಗನದಿಂದ ಘೋರವಾದ ಮಳೆಯು ಸುರಿದು ಬದುಕು ದುಸ್ತರವಾಗಿದೆ, ಈ ಊರೇ ತತ್ತರವಾಗಿದೆ, ಕಣ್ಣೀರೇ ಉತ್ತರವಾಗಿದೆ......

ಕಂದ್ರಪ್ಪಾಡಿ: ಬರೆ ಕುಸಿದು ರಸ್ತೆ ಹಾನಿ

ಆ.4 ರ ಸಂಜೆ ಸುರಿದ ಭಾರಿ ಮಳೆಗೆ ಕಂದ್ರಪ್ಪಾಡಿ ದೇವ ಮಡಪ್ಪಾಡಿ ಸಂಪರ್ಕಿಸುವ ರಸ್ತೆಯ ಕಂದ್ರಪ್ಪಾಡಿ ಎಂಬಲ್ಲಿ ಬರೆ ಕುಸಿದು ರಸ್ತೆಯಲ್ಲಿ ಸಂಚರಿಸಲು ಸಂಕಷ್ಟವಾಗಿದೆ

ವಳಲಂಬೆ : ವಿಪತ್ತು ನಿರ್ವಹಣಾ ತಂಡದ ಸದಸ್ಯರಿಂದ ಮರ ತೆರವು

ವಳಲಂಬೆ ದೇವಸ್ಥಾನದ ಬಳಿಯಿರುವ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಮಳೆಗೆ ಕೊಚ್ಚಿ ಬಂದ ಮರಗಳು ಸಿಲುಕಿ ಹಾನಿಯಾಗಿದೆ. ಮೂರು ಪಿಲ್ಲರ್ ಕೊಚ್ಚಿ ಹೋಗಿದೆ. ಇದರಿಂದ ನೀರು ಬ್ಲಾಕ್ ಆಗಿ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿತ್ತು. ಉಳಿದ ಪಿಲ್ಲರ್ ಗಳಲ್ಲಿ ಸಿಲುಕಿರುವ ಮರಗಳನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಊರವರು ತೆರವುಗೊಳಿಸಿದರು.

ಮೇಘಸ್ಪೋಟಕ್ಕೆ ನಲುಗಿರುವ ಗ್ರಾಮಗಳಲ್ಲಿ ಸಂಘಟನೆಗಳ ಕಾರ್ಯಕರ್ತರಿಂದ ಶ್ರಮಸೇವೆ

ಮೇಘಸ್ಪೋಟದಿಂದ ನಲುಗಿ ಹೋಗಿರುವ ಕಲ್ಮಕಾರು ಕೊಲ್ಲಮೊಗ್ರು ಭಾಗದಲ್ಲಿ ಸೇವಾ ಭಾರತಿ, ವಿಶ್ವಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವೀರಕೇಸರಿ ಮಿತ್ರವೃಂದ ಮಂಡೆಕೋಲು ಮೊದಲಾದ ಸಂಘಟನೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡರು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೂ ಶ್ರಮಸೇವೆ ನಡೆಸಿದರು. ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿರುವಂತೆಯೇ ಪುನಃ ಸುರಿದ ಭಾರಿ ಮಳೆಗೆ ಮೇಲಿನ ಭಾಗದಿಂದ ಅನಿರೀಕ್ಷಿತವಾಗಿ ಹರಿದು ಬಂದ...
Loading posts...

All posts loaded

No more posts

error: Content is protected !!