- Wednesday
- May 7th, 2025

ದೇವಚಳ್ಳ ಗ್ರಾಮದ ವಾಲ್ತಾಜೆ ಶಾಲಾ ವತಿಯಿಂದ ಆ.10 ರಂದು ಎಸ್.ಡಿ.ಎಂ.ಸಿ ಸದಸ್ಯರುಗಳಿಗೆ, ಅಧ್ಯಾಪಕರುಗಳಿಗೆ, ಅಡುಗೆ ಸಿಬ್ಬಂದಿಗಳಿಗೆ ಧ್ವಜ ವಿತರಣೆ ಮಾಡಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಧ್ವಜ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಧ್ವಜ ಬಳಸುವ ವಿಧಾನ ಮತ್ತು ಕಾನೂನು ಮಾಹಿತಿಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ನಂದನ್.ಕೆ.ಎಸ್ ಅವರು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಗೌರವ ಶಿಕ್ಷಕಿ ವಂದನಾ,...

ಕಲ್ಲುಗುಂಡಿಯ ಯಶಸ್ವಿ ಯುವಕ ಮಂಡಲದ ಸದಸ್ಯರು ಸಂಪಾಜೆ ಗ್ರಾಮದ ಕಲ್ಲುಗುಂಡಿ ಪರಿಸರದಲ್ಲಿ ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದ ಅನೇಕ ನೆರೆ ಸಂತ್ರಸ್ತ ಮನೆಗಳಲ್ಲಿ ಸ್ವಚ್ಚತೆ ಕಾರ್ಯ ನಡೆಸಿದರು.ಸಂಪಾಜೆ ಗ್ರಾಮದ ಗೂನಡ್ಕ ಬಳಿ ಚರಂಡಿಗೆ ಬಿದ್ದ ಮಣ್ಣು ತೆರವುಗೊಳಿಸುವುದು,ಬಿದಿರು ಮತ್ತು ಮರದ ಕೊಂಬೆಗಳನ್ನು ತೆರವು ಗೊಳಿಸುವುದು, ಗ್ರಾಮದ ಎಲ್ಲಾ ಕಡೆ ಪಂಚಾಯತ್ ನೇತೃತ್ವದಲ್ಲಿ ಸಾರ್ವಜನಿಕ ಬಂಧುಗಳು ಸಂಘ ಸಂಸ್ಥೆಯ...

ಜಾಲ್ಸೂರು ಗ್ರಾಮದ ಕುಂಬರ್ಚೋಡುನಿಂದ ಕಾಟೂರ್ ಭಾಗಕ್ಕೆ ಹೋಗುವ ರಸ್ತೆಯು ತೀರಾ ನಾದುರಸ್ತಿಯಲ್ಲಿದ್ದು ಅದನ್ನು ರಸ್ತೆಯ ಫಲಾನುಭವಿಗಳೇಶ್ರಮದಾನದ ಮೂಲಕ ದುರಸ್ತಿ ಮಾಡಿದರು. ಈ ಶ್ರಮದಾನ ದಲ್ಲಿ ದಾಮೋದರ ಶ್ರೀ ಕಟೀಲ್, ಜನಾರ್ದನ ಕಾಟೂರು, ಗೋವಿಂದ ಕಾಟೂರು, ಕೃಷ್ಣ ಕಾಟೂರು, ಪ್ರವೀಣ್ ಉಬರಡ್ಕ, ಇಬ್ರಾಹಿಂ ಕಲ್ಲುಮುಟ್ಲು, ಅಬ್ದುಲ್ ಗಫೂರ್, ನವೀನ್ ಭಟ್, ದುಗ್ಗಣ್ಣ, ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಜು.09 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು...

ಮೊನ್ನೆ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ ಸಂಭವಿಸಿದ್ದು, ಆ.09 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು, ಜನಜಾಗೃತಿ ಪ್ರದೇಶದ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ತಾಲೂಕು ಹಾಗೂ ಸುಬ್ರಹ್ಮಣ್ಯ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವುಗಳ ವತಿಯಿಂದ ಬೃಹತ್ ಶ್ರಮದಾನ...

ಪ್ರವಾಹ ಪೀಡಿತ ಪ್ರದೇಶಗಳಾದ ಹರಿಹರ-ಕೊಲ್ಲಮೊಗ್ರ-ಕಲ್ಮಕಾರು ಅಲ್ಲಿ ಮಡಪ್ಪಾಡಿಯ ಯುವಕ ಮಂಡಲ ಮತ್ತು ಸೇವಾಭಾರತಿ ತಂಡದಿಂದ ಒಂದು ದಿನದ ಶ್ರಮಸೇವೆ ನಡೆಸಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸುಳ್ಯ ಹಾಗೂ ಕಡಬ ತಾಲೂಕು ಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ"ಯುವಾಂಕುರ" ವಲ್ಲೀಶ ಸಭಾಭವನದಲ್ಲಿ ಆ. 13 ರಂದು ನಡೆಯಲಿದೆ. ಈ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಕುಣಿತ ಭಜನೆ, ದೇಶಭಕ್ತಿಗೀತೆ, ಕಸದಿಂದ ರಸ, ರಂಗೋಲಿ, ನಿಧಿ...

ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ವಿದ್ಯುತ್ ಆಕಸ್ಮಿಕ ಘಟನೆಯಲ್ಲಿ ಅಂಗಡಿ ಕಟ್ಟಡವನ್ನು ಕಳೆದುಕೊಂಡ ಮಹಮ್ಮದ್ ಕುಂಞ, ಟೈರ್ ಅಂಗಡಿಯ ಲಿಗೋರಿ ಡಿ ಸೋಜಾ, ಹೊಟೇಲ್ ನ ಆನಂದ ರವರಿಗೆ ಸಾರ್ವಜನಿಕ ಸಹಕಾರದೊಂದಿಗೆ ಸಂಗ್ರಹಿಸಿದ ಹಣವನ್ನು ತುರ್ತು ಪರಿಹಾರದ ಸಹಾಯಧನವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಟಿ...

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ವಿ.ವಿ.ಗಳ ಕಿರುನಾಟಕ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ 'ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837' ನಾಟಕವು ಪ್ರಥಮ ಪ್ರಶಸ್ತಿಯನ್ನು ಪಡೆದಿರುತ್ತದೆ. ಕರ್ನಾಟಕದ ಪ್ರತಿಷ್ಠಿತ 15 ವಿಶ್ವವಿದ್ಯಾನಿಲಯಗಳು ಪ್ರದರ್ಶಿಸಿದ ಒಟ್ಟು 31...

ಭಾರಿ ಮಳೆಯಿಂದಾಗಿ ಕಲ್ಲುಗುಂಡಿಯ ಸುಧಾಕರ ನಾಯ್ಕ್ ಅವರ ಮನೆ ಸಂಪೂರ್ಣವಾಗಿ ಬಿದ್ದು ಹೋಗಿ ಮನೆಯ ವಸ್ತುಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿ ನಿರಾಶ್ರಿತರಾಗಿದ್ದರು. ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಈ ಸಮಯದಲ್ಲಿ ತೀರಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದುದರಿಂದ , ಇವರಿಗೆ ಸಹಾಯ ಹಸ್ತವನ್ನು ನೀಡುವ ಸಲುವಾಗಿ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ...

All posts loaded
No more posts