Ad Widget

ಬೆಳ್ಳಾರೆ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ನಡಿಗೆ ಪೂರ್ವ ಭಾವಿ ಸಭೆ

ಬೆಳ್ಳಾರೆ ಕಲ್ಪವೃಕ್ಷ ಆರ್ಕೇಡ್ ನಲ್ಲಿ ಆ. 30 ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ನಡಿಗೆ ಪೂರ್ವ ಭಾವಿ ಸಭೆ ನಡೆಯಿತು.ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ ವಹಿಸಿದ್ದರು. ಈ ಸಂದರ್ಭದಲ್ಲಿ ಭರತ್ ಮುಂಡೋಡಿ , ಕೆಪಿಸಿಸಿ ಸಂಯೋಜಕರಾದ ವೆಂಕಪ್ಪ ಗೌಡ ಹಾಗೂ ಕೃಷ್ಣಪ್ಪ ಮಾತಾನಾಡಿದರು. ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರು,...

ಸುಳ್ಯ : ಶ್ರೀನಿಧಿ ಕ್ಲಿನಿಕ್ ಶುಭಾರಂಭ

ಸುಳ್ಯ ಗಾಂಧಿನಗರದ ಪಿ.ಕೆ .ಕಾಂಪ್ಲೆಕ್ಸ್ ನಲ್ಲಿ ಡಾ.ಶ್ರೀನಿಧಿ ಮೇಲಡ್ತಲೆ ಯವರ ನೂತನ ಆಯುರ್ವೇದ ಶ್ರೀನಿಧಿ ಕ್ಲಿನಿಕ್ ಆ.29 ರಂದು ಶುಭಾರಂಭಗೊಂಡಿತು. ಹಿರಿಯರಾದ ಶ್ರೀಮತಿ ವೆಂಕಮ್ಮ ಮೇಲಡ್ತಲೆ ಮತ್ತು ಶಿವಣ್ಣ ಗೌಡ ರವರು ದೀಪ ಬೆಳಗಿಸಿದರು.ಈ ಸಂದರ್ಭದಲ್ಲಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯ.ಸ.ಅಧ್ಯಕ್ಷ ಉಮೇಶ್ ಪಿ.ಕೆ, ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್,...
Ad Widget

ಪೆರುವಾಜೆ ದೇವಸ್ಥಾನದಲ್ಲಿ ತೆನೆ ಮುಹೂರ್ತ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ತೆನೆ ಮುಹೂರ್ತವು ಆ.30 ರಂದು ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು. ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಮತ್ತು ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಪೇರಾಲುಮೂಲೆ ಅಣ್ಣಪ್ಪ ಗೌಡ ನಿಧನ

ಮಂಡೆಕೋಲು ಗ್ರಾಮದ ಪೇರಾಲುಮೂಲೆ ಅಣ್ಣಪ್ಪ ಗೌಡರು(76) ಅಲ್ಪಕಾಲದ ಅಸೌಖ್ಯದಿಂದ ಆ. 30ರಂದು ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಲಲಿತಾಪುತ್ರ ಮನೋಜ್ ಕುಮಾರ್, ಸೊಸೆ ರೇಷ್ಮಾ, ಪುತ್ರಿಯರಾದ ವೀಣಾ ಹೊನ್ನಪ್ಪ, ವಾಣಿ ಸತೀಶ್, ಗೀತಾ ಅಮರನಾಥ್ ಮೊಮ್ಮಕ್ಕಳು, ಅಳಿಯಂದಿರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅವರು ಪೇರಾಲು ಬಜಪ್ಪಿಲ ಉಳ್ಳಾಕುಲು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಹಲವು ಧಾರ್ಮಿಕ...

ಎಣ್ಮೂರು : ಕಲ್ಲೇರಿ ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್‌ ನ ಪದಾಧಿಕಾರಿಗಳ ಆಯ್ಕೆ

ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಕಲ್ಲೇರಿ - ಎಣ್ಮೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಆ.28 ರಂದು ನಡೆಯಿತು. ಗಣೇಶ್ ಫ್ರೆಂಡ್ಸ್ ಸರ್ಕಲ್ ನ ನೂತನ ಅಧ್ಯಕ್ಷರಾಗಿ ಪ್ರಕಾಶ್ ರೈ ಕುಳಾಯಿತೋಡಿ, ಉಪಾಧ್ಯಕ್ಷರಾಗಿ ಹರೀಶ್ ರೈ ಕಲ್ಲೇರಿ, ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ್ ರೈ ಚಾಮೇತಡ್ಕ ಜತೆ ಕಾರ್ಯದರ್ಶಿಗಳಾಗಿ ಹರ್ಷಿತ್ ಶೃಂಗೇರಿ, ಹಾಗೂ ಕೋಶಾಧಿಕಾರಿಯಾಗಿ ಹರಿಪ್ರಸಾದ್ ರೈ...

ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಉಬರಡ್ಕದ ಹಿಂಜಾವೇ ಪ್ರಥಮ – ಬಹುಮಾನದ ಮೊತ್ತವನ್ನು ಕ್ಯಾನ್ಸರ್ ಪೀಡಿತ ಬಾಲಕಿಯ ಚಿಕಿತ್ಸೆಗೆ ನೀಡಿದ ತಂಡ

ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ನಡೆದ 9ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಹಿಂದು ಜಾಗರಣ ವೇದಿಕೆ, ಉಬರಡ್ಕ ತಂಡವು ಪ್ರಥಮ ಸ್ಥಾನ ಪಡೆದಿದ್ದು ಬಹುಮಾನದ ಮೊತ್ತವನ್ನು ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯ ಮಾಡಿದ್ದು ಜನರ ಮೆಚ್ಚಗೆಗೆ ಪಾತ್ರವಾಗಿದೆ. ಗುತ್ತಿಗಾರಿನ ವಿಶ್ವನಾಥ್ ಹೇಮಾವತಿ ದಂಪತಿಗಳ...

ನೆಲ್ಲೂರು ಗಣೇಶೋತ್ಸವದಲ್ಲಿ ಲಾಸ್ಯ ಡ್ಯಾನ್ಸ್ ಕ್ರಿಯೇಶನ್ಸ್ ಗುತ್ತಿಗಾರು ಹಾಗೂ ಕಲಾಮಂದಿರ ಬೆಳ್ಳಾರೆಯ ವಿದ್ಯಾರ್ಥಿಗಳಿಂದ ನೃತ್ಯ

ಕಾರ್ಕಳದ ನಲ್ಲೂರು ಗ್ರಾಮದ 25ನೇ ವರ್ಷದ ಗಣೇಶ ಉತ್ಸವದ ಸಂಭ್ರಮದಲ್ಲಿ ಲಾಸ್ಯ ಡ್ಯಾನ್ಸ್ ಕ್ರಿಯೇಶನ್ಸ್ ಗುತ್ತಿಗಾರು ಹಾಗೂ ಕಲಾಮಂದಿರ ಬೆಳ್ಳಾರೆಯ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನೇಯ ತಾಯಿ, ಯಕ್ಷಗಾನ ನೃತ್ಯ ,ಲಂಬಾಣಿ, ಜಾನಪದ ನೃತ್ಯ, ಭಕ್ತಿ ಸುಧಾ ನೃತ್ಯ ನೃತ್ಯ, ಚಿಲ್ಮಿ, ಬಾಂಗ್ರನೃತ್ಯ ವೈಭವ ಆ. 31 ರಂದು ರಾತ್ರಿ 6.30 ರಿಂದ ಲಾಸ್ಯ ನೃತ್ಯ ಕ್ರಿಯೇಶನ್ಸ್...

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿಯಲ್ಲಿ ದೇಶಭಕ್ತಿ ಗೀತ ಗಾಯನ ಸ್ಪರ್ಧೆ

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿಯಲ್ಲಿ ಆ. 27ರಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಕಬ್, ಬುಲ್ ಬುಲ್, ಸ್ಕಟ್, ಗೈಡ್, ರೋವರ್, ರೇಂಜರ್ ಸಂಸ್ಥೆಯು ದೇಶಭಕ್ತಿ ಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ.ಗೀತಗಾಯನ ಸ್ಪರ್ಧೆಯನ್ನು ಮುರುಳ್ಯ ಶಾಲೆಯ ಎಸ್ ಡಿ ಎಂ ಸಿ...

ಐವರ್ನಾಡು: ಗುರುದೇವ ಭಜನಾ ಮಂಡಳಿ ಉದ್ಘಾಟನೆ

ಐವರ್ನಾಡಿನಲ್ಲಿ ಒಡಿಯೂರು ಸಂಘದ ಗುರುದೇವ ಭಜನಾ ಮಂಡಳಿ ಆ.27 ರಂದು ಉದ್ಘಾಟನೆಗೊಂಡಿತು. ರಾಮಕೃಷ್ಣ ಕಾಟುಕುಕ್ಕೆ ದೀಪಬೆಳಗಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಜಯಶ್ರೀ ಪಲ್ಲತ್ತಡ್ಕ, ಅಧ್ಯಕ್ಷೆ ಶ್ರೀಮತಿ ರೇವತಿ ಬೋಳುಗುಡ್ಡೆ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು .

ಅರಂತೋಡು: ಹುಡುಗಿರ ಕಬಡ್ಡಿ ಪಂದ್ಯಾಟದಲ್ಲಿ ಅರಂತೋಡು ಕಾಲೇಜು ಜಿಲ್ಲಾಮಟ್ಟಕ್ಕೆ ಆಯ್ಕೆ

ಸಾತ್ವಿ ಎಂ ವಿ ಉತ್ತಮ ರೈಡರ್ ಮತ್ತು ಇಂಚರ ಡಿ. ಆರ್. ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಅರಂತೋಡು: ಸುಳ್ಯ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು ಪಂಜದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಹುಡುಗಿರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಕಾಲೇಜಿನ...
Loading posts...

All posts loaded

No more posts

error: Content is protected !!