Ad Widget

ಹರಿಹರ ಪಲ್ಲತ್ತಡ್ಕ :- ಮಳೆ ಹಾನಿ ಬಗ್ಗೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರ ಸಭೆ

ಮೊನ್ನೆ ಸುರಿದ ಭಾರಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದ್ದು, ಆ.11 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಲ್.ಎಚ್ ಮಂಜುನಾಥ್ ಅವರು ಸಭೆ ನಡೆಸಿ ಸೇತುವೆ ಹಾನಿ ಹಾಗೂ ಕೃಷಿ ಹಾನಿಗಳ ಬಗ್ಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ಜನಜಾಗೃತಿ...

ಗುತ್ತಿಗಾರು : ಮಾಸಾಶನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಸುಳ್ಯ ತಾಲೂಕು , ಗುತ್ತಿಗಾರು ಗ್ರಾಮದ ಬಳ್ಳಕ್ಕ ನಿವಾಸಿ ಕಂಚಾಲ್ತಿ ಎಂಬವರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ/ ಡಿ. ವೀರೆಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ನಿರ್ಗತಿಕರು ಹಾಗೂ ಅನಾರೋಗ್ಯ ಪೀಡಿತರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟ ಪಡುತ್ತಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ...
Ad Widget

ಅರಂತೋಡು: ಎನ್ಎಸ್ಎಸ್ ಘಟಕದ ಹರ್ ಘರ್ ತಿರಂಗ್ ಅಭಿಯಾನ ಕಾರ್ಯಕ್ರಮ

ಅರಂತೋಡು: ಎನ್ಎಸ್ಎಸ್ ಘಟಕದ ಹರ್ ಘರ್ ತಿರಂಗ್ ಅಭಿಯಾನ ಕಾರ್ಯಕ್ರಮ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜವನ್ನು ನೀಡಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ತ್ರಿವರ್ಣ ಧ್ವಜ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಿ, ಮಾತನಾಡಿ, ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ನಿಯಮಗಳನ್ನು ಅರಿತು , ಗೌರವದಿಂದ...

ಗುತ್ತಿಗಾರು : ಗ್ರಂಥಾಲಯ ವತಿಯಿಂದ ನಡೆದ ಸ್ಪರ್ಧೆಗಳ ಫಲಿತಾಂಶ ಪ್ರಕಟ

ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆ. 09 ರಂದು ಗುತ್ತಿಗಾರು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ರವರ ಜನ್ಮದಿನೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟವಾಗಿದೆ.ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಯಜ್ಞ...

ಅಲೆಕ್ಕಾಡಿ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆಗೊಂಡ ಶಶಿಕಲಾರಿಗೆ ಬೀಳ್ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಂತಿನಗರದಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಶಶಿಕಲಾರವರು ಮುಖ್ಯ ಶಿಕ್ಷಕಿಯಾಗಿ ಭಡ್ತಿ ಪಡೆದು ಅಲೆಕ್ಕಾಡಿ ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆ. 10ರಂದು ಮುರುಳ್ಯ ಶಾಂತಿನಗರ ಶಾಲೆಯಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ನಡುಬೈಲು ವಹಿಸಿದ್ದರು. ಸನ್ಮಾನ ಕಾರ್ಯಕ್ರಮವನ್ನು...

ಬೆಳ್ಳಾರೆ : ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಕರೆತಂದು ಪೋಲೀಸರಿಂದ ಸ್ಥಳ ಮಹಜರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳಾದ ಶಿಯಾಬ್,ರಿಯಾಜ್ ಬಶೀರ್ ರನ್ನು ಪೊಲೀಸರು ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದರು.ಪ್ರವೀಣ್ ನಡೆಸುತ್ತಿದ್ದ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮುಂದೆಯೇ ಕೊಲೆ ನಡೆದಿತ್ತು. ಇದೀಗ ಕೊಲೆ ನಡೆಸಿದ ಕುರಿತು ಆರೋಪಿಗಳ ಸ್ಥಳ ಮಹಜರು ಡಿವೈಎಸ್ಪಿ ಗಾನ.ಪಿ ಕುಮಾರ್ ನೇತೃತ್ವದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ...

ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡ ಪ್ರದೇಶಗಳಿಗೆ ಕಾಂಗ್ರೆಸ್ ನಾಯಕರುಗಳ ಭೇಟಿ- ಪರಿಹಾರ ಧನ ಹಾಗೂ ಆಹಾರ ಕಿಟ್ ವಿತರಣೆ

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಲ್ಮಕಾರು ಭಾಗದಲ್ಲಿ ಜಲ ಸ್ಫೋಟಗೊಂಡು ನದಿ ಉಕ್ಕಿ ಹರಿದು ಹಾನಿಯಾದ ಪ್ರದೇಶಗಳಿಗೆ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಕಾಂಗ್ರೆಸ್ಸಿನ ನಾಯಕರುಗಳು ಭೇಟಿ ನೀಡಿದರು. ಹರಿಹರ ಪಲ್ಲತಡ್ಕ ಉದ್ಯಮಿ ರಾಮಕೃಷ್ಣ ಗೌಡ ಕುದ್ಕುಳಿ ರವರ ಮಿರಮಿಸು ಸಂಕೀರ್ಣದಲ್ಲಿ ಸಭೆ ನಡೆಸಿದರು. ಸಂಪೂರ್ಣವಾಗಿ ಕೊಚ್ಚಿ ಹೋಗಿರುವ ಅಂಗಡಿ ಮಾಲಕರಿಗೆ ತಲಾ ಹತ್ತು...

ಆ.13: ಸವಣೂರಿನಲ್ಲಿ ಶೀಂಟೂರು ಸ್ಮೃತಿ

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ಶೀಂಟೂರು ಸ್ಮೃತಿ ಆ.13ರಂದು ನಡೆಯಲಿದೆ. ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ಶಾರದಾ ಎ.ಜೆ. ಶೆಟ್ಟಿ, ದೀಪ ಪ್ರಜ್ವಲಿಸಲಿದ್ದಾರೆ. ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್‌ ಸನ್ಮಾನಿತರನ್ನು ಸನ್ಮಾನಿಸಲಿದ್ದಾರೆ. ನಿವೃತ್ತ...

ಅರಂತೋಡು : ಖುಷಿಯ ಚಿಕಿತ್ಸೆಗಾಗಿ ವಾಹನ ಚಾಲಕ ಮಾಲಕರ ಸಂಘದಿಂದ ರೂ 25 ಸಾವಿರ ಧನಸಹಾಯ

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿರುವ ಯೋಗೀಶ್ ಹಾಗೂ ಲಲಿತಾ (ರೇಷ್ಮಾ) ದಂಪತಿಗಳ ಪುತ್ರಿ ಖುಷಿ ಬ್ರೈನ್ ಟ್ಯೂಮರ್ ಕಾಯಿಲೆಯಿಂದಬಳಲುತ್ತಿದ್ದಳು. ಬಾಲಕಿಗೆ ಶೀಘ್ರ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಸುಮಾರು ಏಳು ಲಕ್ಷ ರೂಪಾಯಿ ತಗುಲಲಿದ್ದು ಮನೆಯವರು ಆರ್ಥಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ದಾನಿಗಳ ನೆರವು ಯಾಚಿಸಿದ್ದರು. ಇದಕ್ಕೆ ಸ್ಪಂದಿಸಿದ ವಾಹನ ಚಾಲಕ ಮಾಲಕರ ಸಂಘದ ವತಿಯಿಂದ...

ಅರಂತೋಡು : ಖುಷಿಯ ಚಿಕಿತ್ಸೆಗಾಗಿ ಬೆಂಗಳೂರಿನ ಉದ್ಯಮಿ ಆನಂದ ಕಲ್ಲುಗದ್ದೆ ರೂ 50ಸಾವಿರ ಧನಸಹಾಯ

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿರುವ ಯೋಗೀಶ್ ಹಾಗೂ ಲಲಿತಾ (ರೇಷ್ಮಾ) ದಂಪತಿಗಳ ಪುತ್ರಿ ಖುಷಿ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದಳು. ಬಾಲಕಿಗೆ ಶೀಘ್ರ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಸುಮಾರು ಏಳು ಲಕ್ಷ ರೂಪಾಯಿ ತಗುಲಲಿದ್ದು ಮನೆಯವರು ಆರ್ಥಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ದಾನಿಗಳ ನೆರವು ಯಾಚಿಸಿದ್ದರು. ಇದಕ್ಕೆ ಸ್ಪಂದಿಸಿದ ಬೆಂಗಳೂರಿನ ಉದ್ಯಮಿ ಆನಂದ ಕಲ್ಲುಗದ್ದೆ...
Loading posts...

All posts loaded

No more posts

error: Content is protected !!